Published : May 03, 2025, 09:05 PM ISTUpdated : May 05, 2025, 11:41 AM IST
ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರು ತಮ್ಮ ಮಗಳಿಗೆ ನಾಮಕರಣ ಮಾಡಿದ್ದಾರೆ. ಕೊಡಗಿನಲ್ಲಿ ಈ ಕಾರ್ಯಕ್ರಮ ನಡೆದಿದೆ. ಕನ್ನಡ ಚಿತ್ರರಂಗದ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರು ತಮ್ಮ ಮುದ್ದಾದ ಮಗಳಿಗೆ ತ್ರಿದೇವಿ ಪೊನ್ನಕ್ಕ ಎಂದು ನಾಮಕರಣ ಮಾಡಿದ್ದಾರೆ. ಈ ಮೂಲಕ ಅವರು ಸಂಪ್ರದಾಯವನ್ನು ಬಿಟ್ಟಿಲ್ಲ.
510
ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರು ಕೂರ್ಗ್‌ನಲ್ಲಿಯೇ ಮದುವೆಯಾಗಿದ್ದರು. 2023ರಲ್ಲಿ ಈ ಮದುವೆ ನಡೆದಿತ್ತು.
610
ನಿರೂಪಕಿ ಚೈತ್ರಾ ವಾಸುದೇವನ್ ಅವರು ಪಿಂಕ್ ಬಣ್ಣದ ಸೀರೆ ಉಟ್ಟು ಹರ್ಷಿಕಾ ಪೂಣಚ್ಚ ಮಗಳ ನಾಮಕರಣದಲ್ಲಿ ಭಾಗಿಯಾಗಿದ್ದಾರೆ.
710
ಇತ್ತೀಚೆಗೆ ಜಗದೀಪ್ ಎಲ್ ಅವರನ್ನು ಚೈತ್ರಾ ವಾಸುದೇವನ್ ಅವರು ಮದುವೆಯಾಗಿದ್ದಾರೆ. ಇದು ಎರಡನೇ ಮದುವೆ. ಇವರು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು.
810
ಚೈತ್ರಾ ವಾಸುದೇವನ್ ಹಾಗೂ ಜಗದೀಪ್ ಎಲ್ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಕುಟುಂಬದವರನ್ನು ಒಪ್ಪಿಸಿ ಈ ಜೋಡಿ ಮದುವೆಯಾಗಿದೆ.
910
ಮಗಳ ನಾಮಕರಣದ ಖುಷಿಯಲ್ಲಿ ಭುವನ್ ಪೊನ್ನಣ್ಣ ಅವರು ಜಗದೀಪ್ ಎಲ್, ಕಾರುಣ್ಯಾ ರಾಮ್, ಚೈತ್ರಾ ವಾಸುದೇವನ್ ಜೊತೆ ಕಾಣಿಸಿಕೊಂಡಿದ್ದು ಹೀಗೆ.
1010
ಇನ್ನು ಹರ್ಷಿಕಾ ಪೂಣಚ್ಚರ ಮಗಳಂತೂ ಯಾರು ಎತ್ತಿಕೊಂಡರೂ ಕೂಡ ಅಳೋದಿಲ್ಲ ಎನ್ನೋದು ವಿಶೇಷ. ಚಿಕ್ಕ ಮಕ್ಕಳು ತಂದೆ-ತಾಯಿ ಬಿಟ್ಟು ಎಲ್ಲರ ಬಳಿಯೂ ಹೋಗೋದಿಲ್ಲ. ಆದರೆ ತ್ರಿದೇವಿ ಮಾತ್ರ ಸ್ಪೆಷಲ್ ಎನ್ನಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.