ಗೋಲ್ಡನ್ ಸೀರೆಯಲ್ಲಿ ಗೊಂಬೆಯಂತೆ ಕಂಗೊಳಿಸಿದ ಸಪ್ತಮಿ ಗೌಡ: ನಿಮ್ಮನ್ನ ನೋಡ್ತಿದ್ರೆ ಮನದ ಮಗು ಹಠಮಾಡುತ್ತೆ ಎಂದ ಫ್ಯಾನ್ಸ್‌!

Published : Feb 11, 2024, 09:39 AM IST

ಗೋಲ್ಡನ್ ಕಲರ್ ಸೀರೆಯಲ್ಲಿ ನಟಿ ಸಪ್ತಮಿ ಗೌಡ ಸಖತ್ ಆಗಿ ಕಾಣ್ತಿದ್ದಾರೆ. ಕಾಂತಾರ ಲೀಲಾ ಚೆಂದದ ಫೋಟೋ ನೋಡಿದ ಫ್ಯಾನ್ಸ್​ ಸಿಂಗಾರ ಸಿರಿಯೇ ಅಂಗಾಲಿನಲ್ಲಿ ಬಂಗಾರ ಅಗೆವ ಮಾಯೇ ಎಂದು ಹಾಡ್ತಿದ್ದಾರೆ.

PREV
17
ಗೋಲ್ಡನ್ ಸೀರೆಯಲ್ಲಿ ಗೊಂಬೆಯಂತೆ ಕಂಗೊಳಿಸಿದ ಸಪ್ತಮಿ ಗೌಡ: ನಿಮ್ಮನ್ನ ನೋಡ್ತಿದ್ರೆ ಮನದ ಮಗು ಹಠಮಾಡುತ್ತೆ ಎಂದ ಫ್ಯಾನ್ಸ್‌!

ಕಾಂತಾರ ಸಿನಿಮಾದ ನಟಿ ಸಪ್ತಮಿ ಗೌಡ ಅವರು ಸುಂದರವಾದ ಗೋಲ್ಡನ್ ಸೀರೆಯುಟ್ಟು ಮಿಂಚಿದ್ದಾರೆ. ಆಕರ್ಷಕವಾದ ಗೋಲ್ಡನ್ ಸೀರೆಯುಟ್ಟ ನಟಿ ಕ್ಯೂಟ್ ಆಗಿ ಕಾಣಿಸಿದ್ದಾರೆ. 

27

ಸಪ್ತಮಿ ಸಿಂಪಲ್ ಹೇರ್​ಸ್ಟೈಲ್ ಮಾಡಿಕೊಂಡು ಹಣೆಗೆ ಕಪ್ಪು ಬಿಂದಿಯನ್ನು ಇಟ್ಟಿದ್ದಾರೆ. ಅವರ ಲುಕ್ ಆಕರ್ಷಕವಾಗಿ ಕಂಡುಬಂದಿದೆ. ನಟಿಯ ಫೊಟೋ ನೋಡಿ ನೆಟ್ಟಿಗರು ರೆಡ್ ಹಾರ್ಟ್ ಎಮೋಜಿ ಕೊಟ್ಟಿದ್ದಾರೆ.

37

ಟ್ರೆಡಿಷನಲ್ ಸಪ್ತಮಿ ಗೌಡ ಆಗಿ ರೆಡಿಯಾಗಿದ್ದಾರೆ. ಗೋಲ್ಡನ್ ಸೀರೆಯಲ್ಲಿ ದೇವತೆಯಂತೆ ಮಿಂಚಿದ್ದು ಅವರ ಲುಕ್ ನೋಡಿದ ನೆಟ್ಟಿಗರು ವಾವ್ ಲೀಲಾ ಸೂಪರ್, ಗೋಲ್ಡನ್ ಡಾಲ್, ನಿಮ್ಮ ಸ್ಮೈಲ್ ಚೆನ್ನಾಗಿದೆ ಎಂದು ಹೊಗಳಿದ್ದಾರೆ.

47

ಕಾಂತಾರ ಸಿನಿಮಾ ರಿಲೀಸ್‌ ಆದ ಬಳಿಕ ಸಪ್ತಮಿ ಗೌಡ ಅವರ ನಸೀಬು ಬದಲಾಗಿದ್ದು ಗೊತ್ತೇ ಇದೆ. ಅದಾದ ಬಳಿಕ ಹಿಂದಿಯಲ್ಲೂ ದಿ ವ್ಯಾಕ್ಸಿನ್‌ ವಾರ್‌ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ನಡುವೆ ಕನ್ನಡದಲ್ಲಿ ಕಾಳಿ ಹೆಸರಿನ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. 

57

ಸೂರಿ ನಿರ್ದೇಶನದ ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಸಿನಿಮಾ ಮೂಲಕ ಡಾಲಿ ಧನಂಜಯ್‌ಗೆ ಜೋಡಿಯಾಗಿದ್ದರು ಸಪ್ತಮಿ ಗೌಡ.  ಅದಾದ ಬಳಿಕ ರಿಷಬ್‌ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದಲ್ಲಿ ನಟಿಸಿ ಹಿಟ್‌ ಪಟ್ಟಿಗೆ ಸೇರಿದರು. 

67

ಕಾಂತಾರದಲ್ಲಿ ಶಿವನಿಗೆ ಲೀಲಾ ಆಗಿ ಕಾಣಿಸಿಕೊಂಡು, ಕರುನಾಡ ಮಂದಿಯಷ್ಟೇ ಅಲ್ಲದೆ, ಪರಭಾಷಿಕರನ್ನೂ ಸೆಳೆದರು ಸಪ್ತಮಿ. ಕಾಂತಾರ ಗೆಲುವು ಒಂದೆಡೆಯಾದರೆ, ಅತ್ತ ಬಾಲಿವುಡ್‌ನ ಅವಕಾಶವನ್ನೂ ಗಿಟ್ಟಿಸಿಕೊಂಡು ದಿ ವ್ಯಾಕ್ಸಿನ್‌ ವಾರ್‌ ಸಿನಿಮಾದಲ್ಲೂ ನಟಿಸಿದರು. 

77

ಇನ್ನು ಇತ್ತೀಚೆಗಷ್ಟೇ ಶ್ರೀರಸ್ತು ಶುಭಮಸ್ತು ಸೀರಿಯಲ್‌ನ ಮದುವೆಯ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದ ಸಪ್ತಮಿ ಇದೀಗ ಮತ್ತೊಂದು ಸೀರಿಯಲ್‌ ಬಗ್ಗೆ ಮಾತನಾಡಿದ್ದಾರೆ. ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್‌ ಮತ್ತು ಅಪೇಕ್ಷಾ ಜೋಡಿಯ ಮದುವೆ ನಿಶ್ಚಯವಾಗಿದೆ. ಈ ಮದುವೆಯ ಪ್ರೋಮೋದಲ್ಲಿ ಕಂಡಿದ್ದಾರೆ ಸಪ್ತಮಿ ಗೌಡ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories