ನೀವ್ಯಾಕೆ ಇಷ್ಟೊಂದು ಸುಂದರವಾಗಿದೀರಾ: ಚುಟು ಚುಟು ಸುಂದರಿ ಆಶಿಕಾಗೆ ಪ್ರಶ್ನೆ ಮಾಡಿದ ಫ್ಯಾನ್ಸ್‌!

First Published Feb 11, 2024, 11:39 AM IST

ಕನ್ನಡದ ಹುಡುಗಿ ನಟಿ ಆಶಿಕಾ ರಂಗನಾಥ್ ಇದೀಗ ಟಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿ ಆಗಿದ್ದಾರೆ. ಆಶಿಕಾ ಸ್ಯಾಂಡಲ್​ವುಡ್, ಟಾಲಿವುಡ್​​ನಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ಹೊಸ ಫೋಟೋಶೂಟ್​ನಲ್ಲಿ ಮಿಂಚುತ್ತಿದ್ದಾರೆ.

ಕನ್ನಡದ ಹುಡುಗಿ ನಟಿ ಆಶಿಕಾ ರಂಗನಾಥ್ ಇದೀಗ ಟಾಲಿವುಡ್​ನಲ್ಲಿ ಬ್ಯುಸಿ ನಟಿಯಾಗಿದ್ದಾರೆ. ಆಶಿಕಾ ಸ್ಯಾಂಡಲ್​ವುಡ್, ಟಾಲಿವುಡ್​ನಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ. ಚುಟು ಚುಟು ಬೆಡಗಿ ಆಶಿಕಾ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಹೊಸ ಲುಕ್‍ನಲ್ಲಿ ಮಿಂಚಿದ್ದಾರೆ.

ಆಶಿಕಾ ರಂಗನಾಥ್ ಶೇರ್ ಮಾಡಿರುವ ಫೋಟೋಗಳಿಗೆ ಎರಡೂವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಬಾನಿಂದ ಜಾರಿದಂತ ಚುಕ್ಕಿನ ಹೇಳು ನೀನು, ಏನು ಹೇಳಲಿ ಅಂದನಾ ಸಾಲುತ್ತಿಲ್ಲ ವ್ಯಾಕರಣ, ನೀವ್ಯಾಕೆ ಇಷ್ಟೊಂದು ಸುಂದರವಾಗಿದೀರಾ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.

Latest Videos


ಆಶಿಕಾ ರಂಗನಾಥ್ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಸಿನಿಮಾದಲ್ಲಿ ಮಿಂಚ್ತಾ ಇದ್ದಾರೆ. ಮದಗಜ, ಪತ್ತಟ್ಟು ಅರಸನ್ ಮತ್ತು ಅಮಿಗೋಸ್ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಶಿಕಾ ರಂಗನಾಥ್ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಅಭಿಮಾನಿಗಳೊಂದಿಗೆ ಟಚ್​ನಲ್ಲಿರುವ ಆಶಿಕಾ ರಂಗನಾಥ್, ಆಗಾಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ತಾರೆ. ನಟಿಗೆ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್​​ಗಳಿದ್ದಾರೆ.

ಮಿಲ್ಕ್ ಬ್ಯೂಟಿ ಆಶಿಕಾ ರಂಗನಾಥ್, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಫಿಟ್ನೆಸ್ ವಿಚಾರದಲ್ಲೂ ಆಶಿಕಾ ರಂಗನಾಥ್ ತುಂಬಾ ಶಿಸ್ತು ಕಾಪಾಡಿಕೊಂಡು ಬಂದಿದ್ದಾರೆ. ಶೂಟಿಂಗ್ ಬ್ಯುಸಿಯಲ್ಲೂ ಆಶಿಕಾ ವರ್ಕೌಟ್ ಮಿಸ್ ಮಾಡೋದಿಲ್ಲ.

ಕನ್ನಡದ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್, ಇದೀಗ ಟಾಲಿವುಡ್​​ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಆಶಿಕಾ ಅಭಿನಯದ ಸಿನಿಮಾ ಸೂಪರ್ ಹಿಟ್ ಆಗ್ತಿದ್ದು, ನಟಿ ಮಣಿಗೆ ಡಿಮ್ಯಾಂಡ್ ಹೆಚ್ಚಿದೆ.

ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಆಶಿಕಾ ಕ್ರೇಜಿ ಬಾಯ್ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಕನ್ನಡಕ್ಕೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದು, ಮಾಸ್ ಲೀಡರ್, ಮುಗಳು ನಗೆ, ರಾಜು ಕನ್ನಡ ಮೀಡಿಯಂ, ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

click me!