ಅಜಯ್‌ ರಾವ್‌ ಹೊಸ ಫ್ಯಾಮಿಲಿ ಥ್ರಿಲ್ಲರ್‌ ಚಿತ್ರಕ್ಕೆ ಮುಹೂರ್ತ: ಬಾಹುಬಲಿ ನಿರ್ದೇಶನ

Published : Jun 23, 2025, 12:27 PM IST

ಇನ್ನೂ ಹೆಸರಿಡದ ಅಜಯ್‌ ರಾವ್‌ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಮುಹೂರ್ತ ಆಗಿದೆ. ಯೋಗರಾಜ್‌ ಭಟ್‌ ಹಾಗೂ ದಿನಕರ್‌ ತೂಗುದೀಪ ಚಿತ್ರಕ್ಕೆ ಚಾಲನೆ ನೀಡಿದರು.

PREV
15

‘ಇದೊಂದು ಫ್ಯಾಮಿಲಿ ಥ್ರಿಲ್ಲರ್ ಸಿನಿಮಾ. ಅಜಯ್‌ ರಾವ್‌ ಅವರನ್ನು ನೀವು ಇದುವರೆಗೂ ನೋಡದಿರುವ ಪಾತ್ರದಲ್ಲಿ ನೋಡುತ್ತೀರಿ. ಘಟನೆಯೊಂದನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಈ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದೇನೆ. ನಾಲ್ಕೈದು ಶೇಡ್‌ಗಳು ಈ ಚಿತ್ರದಲ್ಲಿವೆ.’ ಹೀಗೆ ಹೇಳಿದ್ದು ನಿರ್ದೇಶಕ ಎಸ್‌ ಕೆ ಬಾಹುಬಲಿ.

25

ಇನ್ನೂ ಹೆಸರಿಡದ ಅಜಯ್‌ ರಾವ್‌ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಮುಹೂರ್ತ ಆಗಿದೆ. ಯೋಗರಾಜ್‌ ಭಟ್‌ ಹಾಗೂ ದಿನಕರ್‌ ತೂಗುದೀಪ ಚಿತ್ರಕ್ಕೆ ಚಾಲನೆ ನೀಡಿದರು. ಮಲೈಕಾ ಟಿ ವಸುಪಾಲ್‌ ಚಿತ್ರದ ನಾಯಕಿ. ನಿರ್ದೇಶಕ ಯೋಗರಾಜ್‌ ಭಟ್‌ ಚಿತ್ರಕ್ಕೆ ಸಂಭಾ‍ಷಣೆ ಬರೆದಿದ್ದಾರೆ.

35

ಅಜಯ್‌ ರಾವ್‌, ಫಿಟ್‌ನೆಸ್ ಬಗ್ಗೆ ಏನೋ ಒಂದು ಸಾಧನೆ ಮಾಡಬೇಕೆಂದು ಹೊರಟ ವ್ಯಕ್ತಿಯೊಬ್ಬ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾನೆ ಎಂಬುದು ಚಿತ್ರದ ಕತೆ. ಬಾಹುಬಲಿ ಹೇಳಿದ ಕಥೆಯನ್ನು ಕೇಳಿದೆ.

45

ಆಗ ತುಂಬಾನೆ ಇಷ್ಟ ಆಯಿತು. ಈ ಒಂದು ಕಥೆ ತುಂಬಾನೆ ಚೆನ್ನಾಗಿದೆ. ಈ ಕಥೆಗೆ ಒಂದು ಶಕ್ತಿ ಇದೆ. ದೊಡ್ಡಮಟ್ಟದಲ್ಲಿಯೇ ಈ ಒಂದು ಚಿತ್ರ ಹೋಗುತ್ತದೆ. ಬೇರೆ ಭಾಷೆಯವರೂ ತಾವಾಗಿಯೇ ಈ ಚಿತ್ರವನ್ನ ನಮ್ಮಲ್ಲಿ ರಿಲೀಸ್ ಮಾಡಿ ಅಂತ ಹೇಳ್ಬೇಕು. ಆ ರೀತಿನೇ ಈ ಕಥೆ ಇದೆ ಎಂದರು.

55

ಕಿರಣ್‌ ಚಿತ್ರದ ನಿರ್ಮಾಪಕರು. ಸುಜ್ಞಾನ್‌ ಕ್ಯಾಮೆರಾ, ಅರ್ಜುನ್‌ ಜನ್ಯ ಸಂಗೀತ ಇದೆ. ನಿರ್ದೇಶಕರಾದ ಎಂ.ಡಿ. ಶ್ರೀಧರ್‌, ಎಸ್‌. ನಾರಾಯಣ್‌, ಶಿವತೇಜಸ್‌ ಹಾಜರಿದ್ದರು.

Read more Photos on
click me!

Recommended Stories