ಕನ್ನಡ ಚಿತ್ರರಂಗದಲ್ಲಿ ಹೆಸರು ಬದಲಾಯಿಸಿಕೊಂಡ ಸ್ಟಾರ್ ನಟಿಯರಿವರು, ಅಮ್ಮ ಮಗಳಿಬ್ಬರ ಹೆಸರೂ ಚೆಂಜ್!

First Published Apr 26, 2024, 7:11 PM IST

ಯಾವುದೇ ಸಿನಿಮಾದ ಹಿನ್ನೆಲೆಯಿಲ್ಲದೇ ಒಂದು ಚಲನಚಿತ್ರದಲ್ಲಿ ನಾಯಕ ಅಥವಾ ನಾಯಕಿಯಾಗಿ ನಟಿಸಲು ಚಾನ್ಸ್‌ ಪಡೆಯುವುದಕ್ಕೆ ಏನೆಲ್ಲಾ ತ್ಯಾಗ ಮಾಡಿರುತ್ತಾರೆ. ಆದರೆ, ಕನ್ನಡ ಸಿನಿಮಾದಲ್ಲಿ ಚಾನ್ಸ್‌ಗಾಗಿ ತಾಯಿ ಮಗಳು ಇಬ್ಬರೂ ತಮ್ಮ ಹೆಸರನ್ನು ತ್ಯಾಗ ಮಾಡಿದ್ದಾರೆ. ಜೊತೆಗೆ, ಹಲವು ಸ್ಟಾರ್ ನಾಯಕಿಯರು ಹೆಸರನ್ನು ಬದಲಿಸಿಕೊಂಡವರ ಪಟ್ಟಿ ಇಲ್ಲಿದೆ ನೋಡಿ...
 

ಕನ್ನಡದಲ್ಲಿ ಕನಸಿನ ರಾಣಿ ಎಂತಲೇ ಖ್ಯಾತಿಯಾದ ನಟಿ ಮಾಲಾಶ್ರೀ ಅವರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಾಗ ಶ್ರೀದುರ್ಗಾ ಎಂಬುದು ಜನ್ಮನಾಮ ಆಗಿತ್ತು. ಆದರೆ, ಈ ಹೆಸರಿನಿಂದ ನೀವು ಹೆಚ್ಚು ಪ್ರಸಿದ್ಧ ಆಗೊಲ್ಲವೆಂದು ಪಾರ್ವತಮ್ಮ ರಾಜ್‌ ಕುಮಾರ್ ಅವರು ಶ್ರೀದುರ್ಗಾ ಹೆಸರನ್ನು ಬದಲಿಸಿ ಮಾಲಾಶ್ರೀ ಎಂದು ನಾಮಕರಣ ಮಾಡಿದರು.

ಈಗಲೂ ಮಾಲಾಶ್ರೀ ಅವರು ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಾಯಕಿಯಾಗಿ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಯಸ್ಸಾದಂತೆ ಸೌಂದರ್ಯ ಕುಂದಿದರೂ ಅವರ ಚಾರ್ಮ್‌ ಮಾತ್ರ ಕಡಿಮೆಯಾಗಿಲ್ಲ. 
 

ಮಾಲಾಶ್ರೀ ಅವರ ಮಗಳು ಕೂಡ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾಳೆ. ಅದೂ ಕೂಡ ಮೊದಲ ಸಿನಿಮಾ ಕಾಟೇರದಲ್ಲಿ ನಟಿಸಿದ್ದು, ನಟ ದರ್ಶನ್ ಅವರಿಗೆ ನಾಯಕಿಯಾಗಿ ಉತ್ತಮವಾಗಿ ಪಾತ್ರ ನಿರ್ವಹಣೆ ಮಾಡಿದ್ದಾರೆ.

ಆದರೆ, ನಟಿ ಆರಾಧಾನಾ ಜನ್ಮನಾಮ ಇದಲ್ಲ. ಆರಾಧನಾ ಅವರ ಮೊದಲ ಹೆಸರು ಅನನ್ಯ. ಚಿತ್ರರಂಗಕ್ಕೆ ಪದಾರ್ಪಣೆ ಮಾಡುವಾಗ ತಮ್ಮ ಹೆಸರನ್ನು ಆರಾಧನಾ ಎಂದು ಬದಲಿಸಿಕೊಂಡಿದ್ದಾರೆ. ಈಗ ಅವರ ಮೊದಲ ಸಿನಿಮಾ 'ಕಾಟೇರ'ದಲ್ಲಿ ಭರ್ಜರಿ ಯಶಸ್ಸು ಕಂಡಿದ್ದಾರೆ. 

ಸ್ಯಾಂಡಲ್‌ವುಡ್ ಕ್ವೀನ್, ಮೋಹಕ ತಾರೆ ಖ್ಯಾತಿಯ ನಟಿ ರಮ್ಯಾ ಅವರ ಹೆಸರನ್ನು ಕೊಟ್ಟವರು ಪಾರ್ವತಮ್ಮ ರಾಜ್‌ ಕುಮಾರ್ ಅವರು. ದಿವ್ಯಾ ಸ್ಪಂದನಾ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ರಮ್ಯಾ ಆಗಿ ಪ್ರಸಿದ್ಧಿ ಪಡೆದರು. ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಸಿನಿಮಾ ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದಾರೆ. 

ನಟಿ ರಮ್ಯಾ ಅವರು ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ 'ದಿವ್ಯ ಸ್ಪಂದನಾ' ಹೆಸರನ್ನು ಕೂಡ ಸೇರಿಸಿಕೊಂಡಿದ್ದಾರೆ. 'ರಮ್ಯಾ' ಹೆಸರಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ದಿವ್ಯ ಸ್ಪಂದನಾ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡಿದರು. ರಮ್ಯಾ ಯಶಸ್ವಿ ನಟಿ ಎಂದೆನಿಸಿಕೊಂಡರು. 'ಲಕ್ಕಿ ಸ್ಟಾರ್' ಅಂತಲೂ ರಮ್ಯಾ ಕರೆಯಿಸಿಕೊಂಡರು.
 

ಕನ್ನಡದ ಮತ್ತೊಬ್ಬ ಸ್ಟಾರ್ ನಟಿಯಾದ ರಕ್ಷಿತಾ (Rakshitha Prem) ಅವರು ಕೂಡ ತಮ್ಮ ಹೆಸರನ್ನು ಬದಲಿಸಿಕೊಂಡೇ ಸಿನಿಮಾದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ರಕ್ಷಿತಾ ಅವರ ಮೊದಲ ಹೆಸರಿ ಶ್ವೇತಾ ಎಂದಾಗಿತ್ತು.

1990ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ತುಂಬಾ ಪ್ರಸಿದ್ಧಿ ಪಡೆದಿದ್ದ ನಟಿ ಸುಧಾರಾಣಿ (Sudharani) ಅವರ ಮೂಲ ಹೆಸರು ಜಯಶ್ರೀ. ಸಿನಿಮಾದಲ್ಲಿ ನಾಯಕಿ ಪಾತ್ರದಿಂದ ಕಣ್ಮರೆಯಾಗಿದ್ದ ಅವರು ಈಗ ಕಿರುತೆರಯಲ್ಲಿ ನಟಿಸುತ್ತಿದ್ದಾರೆ.

ಚಾರ್ಲಿ 777 ಸಿನಿಮಾದ ಮೂಲಕ ಫೇಮಸ್ ಆದ ಪಡ್ಡೆಗಳ ನಿದ್ದೆ ಕಂದ ಸುಂದರಿ ಸಂಗೀತಾ ಶೃಂಗೇರಿ, ಬಿಗ್‌ಬಾಸ್‌ ಮನೆಯಲ್ಲಿ ಬಳೆಯ ಸದ್ದಿನೊಂದಿಗೆ ಮತ್ತಷ್ಟು ಜನರಿಗೆ ಹತ್ತಿರವಾಗದ್ದಳು. ಆದರೆ, ಸಂಗೀತಾ ಶೃಂಗೇರಿ (Sangeetha Sringeri) ಅವರ ಜನ್ಮನಾಮ ಶ್ರೀದೇವಿ ಆಗಿದೆ.

ಕನ್ನಡ ಸಿನಿಮಾದಲ್ಲಿ ಮಳೆ ಸುರಿಸುತ್ತಲೇ ಬಂದ ಮಳೆ ಹುಡುಗಿ ಸಂಜನಾ ಗಾಂಧಿ ಅವರ ನಿಜ ಹೆಸರು ಪೂಜಾ ಗಾಂಧಿ  (Pooja Gandhi) ಆಗಿತ್ತು. ಅವರು ಸಿನಿಮಾಗಾಗಿ ಸಂಜನಾಗಾಂಧಿ ಎಂದು ಹೆಸರಿಟ್ಟುಕೊಂಡಿದ್ದರು. 

ಆದರೆ, ತಮ್ಮ ಡಾಕುಮೆಂಟ್‌ಗಳಿಗೆ ಹೆಸರು ಸಮಸ್ಯೆ ಆಗುತ್ತದೆಂದು ಸಂಜನಾ ಗಾಂಧಿ ಹೆಸರನ್ನು ಬಿಟ್ಟು ಪುನಃ ಪೂಜಾ ಗಾಂಧಿ ಎಂದು ಇಟ್ಟುಕೊಂಡರು.

ಕನ್ನಡ ಚಿತ್ರರಂಗಕ್ಕೆ ಬಾಲನಟಿಯಾಗಿ ಬಂದ ನಟಿ ಮೌಲ್ಯ ಅವರು ಸಿನಿಮಾದಲ್ಲಿ ನಾಯಕಿಯಾಗಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಾಗ ಅಮೂಲ್ಯ (Amulya Gowda) ಎಂದು ಹೆಸರು ಬದಲಿಸಿಕೊಂಡರು. ಚೆಲುವಿನ ಚಿತ್ತಾರ ಸಿನಿಮಾದ ಮೂಲಕ ಯಶಸ್ಸು ಸಾಧಿಸಿ ನಟಿ ಅಮೂಲ್ಯ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದಾರೆ.

click me!