ದೇಸಿ ಲುಕ್‌ನಲ್ಲಿ ಶ್ರುತಿ ಹರಿಹರನ್… ನೋಡಿ ಮಿರ್ಚಿ ಮಿರ್ಚಿ ಎಂದ ಫ್ಯಾನ್ಸ್!

First Published | Apr 27, 2024, 1:41 PM IST

ಸ್ಯಾಂಡಲ್ ವುಡ್ ನಟಿ ಶ್ರುತಿ ಹರಿಹರನ್ ದೇಸಿ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಸೀರೀಸ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. 
 

ಸ್ಯಾಂಡಲ್ ವುಡ್ ಬ್ಯೂಟಿ ಶ್ರುತಿ ಹರಿಹರನ್ (Shruthi Hariharan) ರಾಜಸ್ಥಾನಿ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಸಖತ್ತಾಗಿರೋ ಫೋಟೋ ನೋಡಿ ಅಭಿಮಾನಿಗಳು ಮಿರ್ಚಿ ಮಿರ್ಚಿ ಎನ್ನುತ್ತಿದ್ದಾರೆ. 
 

ಅವಳು ಎನ್ನುವ ಸೀರೀಸ್ ನಲ್ಲಿ ಕಳೆದ ಕೆಲವು ದಿನಗಳಿಂದ ಶ್ರುತಿ ಹರಿಹರನ್ ಹಲವಾರು ಫೋಟೋಗಳನ್ನು ವಿಡಿಯೋಗಳನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ (Social media) ಶೇರ್ ಮಾಡುತ್ತಿದ್ದಾರೆ. 
 

Tap to resize

ಕಪ್ಪು ಬಣ್ಣದ ಲಂಗ, ಹಳದಿ ಬಣ್ಣದ ಫುಲ್ ವರ್ಕ್ ಇರುವಂತಹ ಬ್ಲೌಸ್, ಹಳದಿ ಕಪ್ಪು, ಕೆಂಪು ಪ್ರಿಂಟೆಡ್ ದುಪ್ಪಟ್ಟಾ ಧರಿಸಿದ್ದು, ಅದಕ್ಕೆ ಮ್ಯಾಚ್ ಆಗುವ ದೊಡ್ಡದಾದ ಮೆಟಲ್ ಕಿವಿಯೋಲೆ, ಕುತ್ತಿಗೆಗೆ ಹಾರಗಳು, ಕೈಗಳಲ್ಲಿ ಉಂಗುರ, ಮೂಗಿಗೆ ದೊಡ್ಡದಾದ ನತ್ತು ಧರಿಸಿದ್ದು ಸಖತ್ತಾಗಿ ಕಾಣಿಸುತ್ತಿದ್ದಾರೆ. 
 

ಶ್ರುತಿ ಹರಿಹರನ್ ಹೊಸ ಲುಕ್ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಹೊಸ ಫಿಲಂ ಶೂಟಿಂಗ್ ಗೆ ರೆಡಿಯಾಗ್ತಿದ್ದೀರ? ಯಾವ ಫಿಲಂ ಮಾಡ್ತಿದ್ದೀರಿ ಎಂದೆಲ್ಲಾ ಕುತೂಹಲದಿಂದ ಪ್ರಶ್ನೆ ಮಾಡುತ್ತಿದ್ದಾರೆ.
 

ಇನ್ನೂ ಹಲವರು ಗಾರ್ಜಿಯಸ್, ಮಿರ್ಚಿ ಮಿರ್ಚಿ, ವಾವ್ ಏನು ಆಟಿಟ್ಯೂಡ್, ಸೆಕ್ಸಿಯಾಗಿ ಕಾಣಿಸುತ್ತೀರಿ, ಇದು ಬೆಸ್ಟೆಸ್ಟ್ ಫೋಟೋ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. 
 

ಮೀಟೂ ವಿವಾದ, ನಂತರ ಮಗು… ಇದೆಲ್ಲಾ ಆದ ನಂತರ ನಟನೆಯಿಂದ ಕೊಂಚ ದೂರವೇ ಉಳಿದಿದ್ದ ಶ್ರುತಿ ಹರಿಹರನ್ ನಂತರ ಹೆಡ್ ಬುಷ್, ಸಾರಾಂಶ (Saramsha) ಸಿನಿಮಾಗಳಲ್ಲಿ ಕೊನೆಯದಾಗಿ ನಟಿಸಿದ್ದರು. 
 

ಸದ್ಯ ಶ್ರುತಿ ಹರಿಹರನ್ ಸ್ಟ್ರಾಬೆರ್ರಿ ಸಿನಿಮಾದಲ್ಲಿ ನಟಿಸುತ್ತಿದ್ದು, ಈಗಾಗಲೇ ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ತಯಾರಿ ನಡೆದಿದೆ. ಶ್ರುತಿ ಕನ್ನಡ, ತಮಿಳು, ಮಲಯಾಲಂ ಮತ್ತು ಹಿಂದಿ ಸಿನಿಮಾಗಳಲ್ಲೂ ಸಹ ನಟಿಸಿದ್ದಾರೆ. 
 

Latest Videos

click me!