ಈ ಫೋಟೋದಲ್ಲಿರುವ ಕನ್ನಡದ ಹೆಸರಾಂತ ನಟ-ನಟಿ ಅಣ್ಣ ತಂಗಿಯನ್ನು ಗುರುತಿಸಬಲ್ಲಿರಾ?

Published : Sep 22, 2023, 08:03 PM IST

ಈ ಫೋಟೋದಲ್ಲಿರುವ ಇಬ್ಬರೂ ಕೂಡ ಸ್ಯಾಂಡಲ್‌ವುಡ್‌ ಕಂಡ ಫೇಮಸ್‌ ನಟ ಮತ್ತು ನಟಿ. ಮಾತ್ರವಲ್ಲ ಒಡಹುಟ್ಟಿದವರು ಕೂಡ ಹೌದು. ಸೆಪ್ಟೆಂಬರ್ 18ರಂದು ತನ್ನ ತಂಗಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಣ್ಣ ಬಾಲ್ಯದ ಮುದ್ದಾದ ಫೋಟೋವನ್ನು ಹಂಚಿಕೊಂಡು ವಿಶ್ ಮಾಡಿದ್ದಾರೆ.

PREV
19
ಈ ಫೋಟೋದಲ್ಲಿರುವ  ಕನ್ನಡದ ಹೆಸರಾಂತ ನಟ-ನಟಿ ಅಣ್ಣ ತಂಗಿಯನ್ನು ಗುರುತಿಸಬಲ್ಲಿರಾ?

ಇದು ಬೇರೆ ಯಾರೂ ಅಲ್ಲ ಕನ್ನಡ ಚಿತ್ರರಂಗದ ನಟ ಶರಣ್ ಮತ್ತು ಅವರ ತಂಗಿ ನಟಿ ಶ್ರುತಿ ಅವರ ಬಾಲ್ಯ ಜೀವನದ ಮುದ್ದಾದ ಫೋಟೋವಾಗಿದೆ.

29

ಸಾಮಾಜಿಕ ಜಾಲತಾಣದಲ್ಲಿ  ಫೋಟೋವನ್ನು ಹಂಚಿಕೊಂಡಿರುವ ಶರಣ್, ಗಣೇಶೋತ್ಸವದ ಸಂಭ್ರಮದಂದು ನನ್ನ ಪ್ರೀತಿಯ ತಂಗಿಗೆ ಸಡಗರದ ಜನ್ಮದಿನೋತ್ಸವ ಎಂದು ಬರೆದುಕೊಂಡಿದ್ದಾರೆ.
 

39

ಹಿರಿಯ ನಟಿ ಶ್ರುತಿ ಅವರು 18 ಸೆಪಟ್ಟೆಂಬರ್‌ 1975ರಲ್ಲಿ ಜನಿಸಿದ್ದು, ಈ ವರ್ಷ ಅವರು ತಮ್ಮ 48 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

49

ಮೂಲತ ಹಾಸನದವರಾದ ನಟಿ ಶ್ರುತಿ ಅವರು ನಟನೆ ಜೊತೆಗೆ ರಾಜಕಾರಣಿ ಕೂಡ ಹೌದು, ಭಾರತೀಯ ಜನತಾ ಪಾರ್ಟಿಯ ಸಕ್ರೀಯ ಸದಸ್ಯೆಯಾಗಿದ್ದಾರೆ.

59

ನಟಿ ಶ್ರುತಿ ಅವರ ಇಡೀ ಕುಟುಂಬ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದೆ. ತಂದೆ ಕೃಷ್ಣ, ತಾಯಂದಿರಾದ ರಾಧ-ರುಕ್ಮಿಣಿ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ.

69

ಶ್ರುತಿ ತಂದೆ ಅವರಿಗೆ ಇಬ್ಬರು ಮಡದಿಯರು. ತಂದೆ ಜಿ.ವಿ ಕೃಷ್ಣ ಅವರು ಅವಳಿ ಸಹೋದರಿಯರಾದ ರಾಧಾ ರುಕ್ಮಣಿ ಅವರನ್ನು ವಿವಾಹವಾಗಿದ್ದಾರೆ.

79

ಜಿ.ವಿ ಕೃಷ್ಣ ಮತ್ತು ಇಬ್ಬರು ಪತ್ನಿಯರಾದ  ರಾಧಾ ಹಾಗೂ ರುಕ್ಮಣಿ ಅವರಿಗೆ ಒಟ್ಟು ಮೂವರು ಮಕ್ಕಳ ಶರಣ್, ಶ್ರುತಿ ಮತ್ತು ಉಷಾ. 

89

ನಟಿ ಶ್ರುತಿ ಅವರ ಮಗಳು  ಗೌರಿ ಉತ್ತಮ ಹಾಡುಗಾರ್ತಿ, ಇದೀಗ ಆಕೆ ಕೂಡ ಸಿನಿಮಾಗೆ ಬರೋ ತಯಾರಿ ನಡೆಸುತ್ತಿದ್ದಾರೆ ಎಂದು ಸ್ವತಃ ಅಮ್ಮ ಶ್ರುತಿ ಹೇಳಿದ್ದಾರೆ.

99

ನಟಿ ಶ್ರುತಿ ಅವರು ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ ಮಲೇಷಿಯಾಗೆ ಹೋಗಿದ್ದಾರೆ. ಫ್ಯಾಮಿಲಿ ಎಲ್ಲರೂ ಸೇರಿ ರಜಾವನ್ನು ಮಜಾ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories