ಯೂಟ್ಯೂಬ್‌ನಲ್ಲಿರುವ ಟಾಕ್ಸಿಕ್ ಟೀಸರ್ ವಿರುದ್ಧ ಅಸಮಾಧಾನಕ್ಕೆ ಸೆನ್ಸರ್ ಬೋರ್ಡ್ ಮಹತ್ವದ ಹೇಳಿಕೆ

Published : Jan 13, 2026, 05:49 PM IST

ಯೂಟ್ಯೂಬ್‌ನಲ್ಲಿರುವ ಟಾಕ್ಸಿಕ್ ಟೀಸರ್ ವಿರುದ್ಧ ಅಸಮಾಧಾನ, ಪ್ರಮುಖವಾಗಿ ಮಹಿಳಾ ಆಯೋಗ ಸೆನ್ಸರ್ ಮಂಡಳಿಗೆ ಪತ್ರ ಬರೆದಿತ್ತು. ಯಶ್ ಟಾಕ್ಸಿಕ್ ಸಿನಿಮಾಗೆ ಕಾನೂನು ಸಂಕಷ್ಟ ಎದುರಾಗುತ್ತಿದ್ದಂತೆ ಸಿಬಿಎಫ್‌ಸಿ ಉತ್ತರ ನೀಡಿದೆ. 

PREV
16
ಯಶ್ ಕಾರಿನೊಳಗಿನ ದೃಶ್ಯ

ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಟೀಸರ್ ಬಿಡುಗಡೆಯಾಗಿ ಭಾರಿ ಸಂಚಲನ ಸೃಷ್ಟಿಸಿದೆ. ಬಹುತೇಕರು ಇದು ಹಾಲಿವುಡ್ ರೇಂಜ್ ಸಿನಿಮಾ ಎಂದು ಹೊಗಳಿದ್ದಾರೆ. ಇದರ ನಡುವೆ ಟೀಸರ್‌ನಲ್ಲಿರುವ ಕೆಲ ದೃಶ್ಯಗಳು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಮುಖವಾಗಿ ನಾಯಕ ನಟ ಯಶ್ ಎಂಟ್ರಿ ಸೀನ್ ಹಾಗೂ ಕಾರಿನೊಳಗಿನ ದೃಶ್ಯ ಕೋಲಾಹಲಕ್ಕೆ ಕಾರಣವಾಗಿದೆ. ಈ ಕುರಿತು ಹಲವು ದೂರುಗಳು ದಾಖಲಾಗಿದೆ.

26
ಮಹಿಳಾ ಆಯೋಗದಿಂದ ಪತ್ರ

ಯಶ್ ಟಾಕ್ಸಿಕ್ ಟೀಸರ್‌ನಲ್ಲಿ ಕೆಲ ದೃಶ್ಯಗಳಿಗೆ ಆಕ್ಷೇಪ್ ವ್ಯಕ್ತಪಡಿಸಿರುವ ಕರ್ನಾಟಕ ಮಹಿಳಾ ಆಯೋಗ, ಸೆಂಟ್ರಲ್ ಬೋರ್ಡ್ ಫಿಲ್ಮ್ ಸರ್ಟಿಫಿಕೇಟ್( CBFC)ಗೆ ಪತ್ರ ಬರೆದಿದೆ. ಈ ಪತ್ರದಲ್ಲಿ ಯಶ್ ಟಾಕ್ಸಿಕ್ ಟೀಸರ್‌ನಲ್ಲಿರುವ ದೃಶ್ಯಗಳಿಗೆ ಅಕ್ಷೇಪ ವ್ಯಕ್ತಪಡಿಸಿದೆ. ಈ ದೃಶ್ಯಗಳಿಗೆ ಸೆನ್ಸರ್ ಮಂಡಳಿ ಅನುಮತಿ ನೀಡಿದ್ದು ಹೇಗೆ? ಟಾಕ್ಸಿಕ್ ಸಿನಿಮಾಗೆ ಯಾವ ಸರ್ಟಿಫಿಕೇಟ್ ನೀಡಲಾಗಿದೆ ಅನ್ನೋ ಕುರಿತು ಪತ್ರದಲ್ಲಿ ಪ್ರಶ್ನಿಸಿತ್ತು.

36
ಸೆನ್ಸರ್ ಮಂಡಳಿ ಮಹತ್ವದ ಹೇಳಿಕೆ

ಸೆನ್ಸರ್ ಬೋರ್ಡ್ ಮಹಿಳಾ ಆಯೋಗ ಸೇರಿದಂತೆ ಕೆಲ ಪಕ್ಷಗಳು ನೀಡಿದ ದೂರಿಗೆ ಮಹತ್ವದ ಉತ್ತರ ನೀಡಿದೆ. ಯೂಟ್ಯೂಬ್‌ನಲ್ಲಿ ಹಾಕಿರುವ ಯಶ್ ಟೀಸರ್‌ ಸೆನ್ಸರ್ ಬೋರ್ಡ್ ವ್ಯಾಪ್ತಿಯಲ್ಲಿ ಬರುವುದಿಲ್ಲ. ಸಿನಿಮಾ ಮಂದಿರದಲ್ಲಿ ಪ್ರದರ್ಶನ ಮಾಡುವ ಸಿನಿಮಾಗಳ ಸರ್ಟಿಫಿಕೇಟ್ ಮಂಡಳಿ ವ್ಯಾಪ್ತಿಗೆ ಬರಲಿದೆ. ಯೂಟ್ಯೂಬ್ ಡಿಜಿಟಲ್ ಪ್ಲಾಟ್‌ಫಾರ್ಮ್ ಸಿಬಿಎಫ್‌ಸಿ ಅಡಿಯಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

46
ಸರ್ಟಿಫಿಕೇಟ್ ಪ್ರಶ್ನೆಗೂ ಉತ್ತರ ನೀಡಿದ ಮಂಡಳಿ

ಟಾಕ್ಸಿಕ್ ಸಿನಿಮಾಗೆ ನೀಡಿರುವ ಸರ್ಟಿಫಿಕೇಟ್, ಅನುಮತಿಯನ್ನು ಕೆಲವರು ಪ್ರಶ್ನೆ ಮಾಡಿದ್ದರು. ಇದಕ್ಕೂ ಸೆನ್ಸರ್ ಮಂಡಳಿ ಉತ್ತರ ನೀಡಿದೆ. ಪ್ರಮುಖವಾಗಿ, ಟಾಕ್ಸಿಕ್ ಕುರಿತು ಯಾವುದೇ ಸರ್ಟಿಫಿಕೇಟ್ ಅರ್ಜಿ ಬಂದಿಲ್ಲ. ಇದುವರೆಗೂ ಯಾವುದೇ ಅರ್ಜಿ ಸಲ್ಲಿಯಾಗಿಲ್ಲ. ಅರ್ಜಿ ಸಲ್ಲಿಕೆಯಾದ ಬಳಿಕ ಸೆನ್ಸರ್ ಮಂಡಳಿ ಕಾನೂನು ಪ್ರಕಾರ ಸರ್ಟಿಫಿಕೇಶನ್ ಮಾಡಲಿದೆ ಎಂದಿದೆ.

56
ಯಶ್ ಟಾಕ್ಸಿಕ್ ಟೀಸರ್‌ಗೆ ಗ್ರೀನ್ ಸಿಗ್ನಲ್

ಆನ್‌ಲೈನ್‌ನಲ್ಲಿ ಟೀಸರ್ ಬಿಡುಗಡೆಯಾಗಿದೆ. ಈ ಪ್ಲಾಟ್‌ಫಾರ್ಮ್‌ಗೂ ಕೇಂದ್ರ ಸೆನ್ಸರ್ ಮಂಡಳಿಗೂ ಸಂಬಂಧವಿಲ್ಲ. ಹೀಗಾಗಿ ವ್ಯಾಪ್ತಿ ಮೀರಿದ ವಿಷಯಗಳ ಕುರಿತು ಪ್ರತಿಕ್ರಿಯಿಸಲು ಸೆನ್ಸರ್ ಮಂಡಳಿಗೆ ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಮೂಲಕ ಯಶ್ ಟಾಕ್ಸಿಕ್ ಟೀಸರ್‌ಗೆ ಸೆನ್ಸರ್ ಮಂಡಳಿಯಿಂದ ಯಾವುದೇ ರೀತಿಯ ತಡೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಯಶ್ ಟಾಕ್ಸಿಕ್ ಟೀಸರ್‌ಗೆ ಗ್ರೀನ್ ಸಿಗ್ನಲ್

66
ಆಮ್ ಆದ್ಮಿ ಪಾರ್ಟಿಯಿಂದ ದೂರು

ಆಮ್ ಆದ್ಮಿ ಪಾರ್ಟಿ ಯಶ್ ಟಾಕ್ಸಿಕ್ ಟೀಸರ್‌ನಲ್ಲಿರುವ ದೃಶ್ಯಗಳ ಕುರಿತು ಆಕ್ರೋಶ ಹೊರಹಾಕಿತ್ತು. ಬಳಿಕ ಮಹಿಳಾ ಆಯೋಗಕ್ಕೆ ದೂರು ನೀಡಿತ್ತು. ಹೀಗಾಗಿ ಮಹಿಳಾ ಆಯೋಗ ಸೆನ್ಸರ್ ಬೋರ್ಡ್‌ಗೆ ಪತ್ರ ಬರೆದು ಸ್ಪಷ್ಟನೆ ಕೇಳಿತ್ತು. ಇದು ಕೋಲಾಹಲ ಸೃಷ್ಟಿಸಿತ್ತು. ಯೂಟ್ಯೂಬ್‌ನಿಂದ ಟಾಕ್ಸಿಕ್ ಟೀಸರ್ ಡಿಲೀಟ್ ಮಾಡುತ್ತಾರಾ ಅನ್ನೋ ಚರ್ಚೆಗಳು ಶುರುವಾಗಿತ್ತು. ಇದೀಗ ಸೆನ್ಸರ್ ಮಂಡಳಿ ಎಲ್ಲಾ ಊಹಾಪೋಹಕ್ಕೆ ತೆರೆ ಎಳೆದಿದೆ.

ಆಮ್ ಆದ್ಮಿ ಪಾರ್ಟಿಯಿಂದ ದೂರು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories