ರತ್ನತೀರ್ಥ ನಿರ್ದೇಶನದ, ಪ್ರಶಾಂತ್ ಬಿ.ಜೆ. ನಿರ್ಮಾಣದ ಹಾರರ್, ಥ್ರಿಲ್ಲರ್ ‘ಅಲ್ಲೇ ಡ್ರಾ, ಅಲ್ಲೇ ಬಹುಮಾನ’ ಸಿನಿಮಾದ ಟ್ರೇಲರನ್ನು ಪ್ರಜ್ವಲ್ ದೇವರಾಜ್ ಬಿಡುಗಡೆ ಮಾಡಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಹಾಡಿರುವ ಒಂದು ಹಾಡಿದೆ.
25
ಪ್ರಜ್ವಲ್ ದೇವರಾಜ್, ‘ಪುನೀತ್ ಅವರ ಭಾವಚಿತ್ರ ನೋಡಿ ಭಾವುಕನಾದೆ. ಚಿತ್ರದಲ್ಲಿ ಹಾರರ್ ಕತೆ ಇದೆ. ಜೊತೆಗೆ ದೈವಿಕ ಅಂಶವೂ ಸೇರಿಕೊಂಡಿದೆ’ ಎಂದು ಹೇಳಿದರು. ರತ್ನತೀರ್ಥ, ‘ಒಂದು ಮನೆಯಲ್ಲಿ ನಡೆಯುವ ನಾಯಕಿ ಪ್ರಧಾನ ಕಥೆಯ ಸಿನಿಮಾ ಇದು. ಅಪ್ಪು ಹಾಡಿದ ಹಾಡನ್ನು ಮನಾಲಿಯಲ್ಲಿ ಶೂಟ್ ಮಾಡಿದ್ದೇವೆ’ ಎಂದು ಹೇಳಿದರು.
35
ಶೌರ್ಯ ಮತ್ತು ರಿಷಿಕಾ ರಾಜ್ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಿಷಿಕಾ ರಾಜ್, ‘ನನ್ನ ಹತ್ತು ವರ್ಷಗಳ ಸಿನಿ ಪ್ರಯಾಣದಲ್ಲಿ ಈಗ ನಾಯಕಿಯಾಗಿದ್ದೇನೆ. ನನ್ನ ಪಾತ್ರದ ಮೇಲೆ ಇಡೀ ಕಥೆ ಸಾಗುತ್ತದೆ’ ಎಂದರು. ವಿಜಯ್ ಚೆಂಡೂರು, ರಘು ರಾಮನಕೊಪ್ಪ, ಕುರಿ ರಂಗ, ಶಂಕರ್ ಅಶ್ವಥ್, ಸುಮಂತ್ ಸೂರ್ಯ, ಪರಶುರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
45
ಗಣ ಜ.31ಕ್ಕೆ ರಿಲೀಸ್: ಪ್ರಜ್ವಲ್ ದೇವರಾಜ್ ಅಭಿನಯದ ‘ಗಣ’ ಚಿತ್ರ ಜನವರಿ 31ರಂದು ತೆರೆಗೆ ಬರಲಿದೆ. ಪಾರ್ಥು ನಿರ್ಮಿಸಿರುವ ಈ ಚಿತ್ರವನ್ನು ಹರಿಪ್ರಸಾದ್ ಜಕ್ಕ ನಿರ್ದೇಶಿಸಿದ್ದಾರೆ. ಚಿಕ್ಕಬಳ್ಳಾಪುರ ಶ್ರೀನಿವಾಸ್ ಕಾರ್ಯಕಾರಿ ನಿರ್ಮಾಪಕರು.
55
ಪ್ರಜ್ವಲ್ ದೇವರಾಜ್, ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್ ಪೇಟೆ, ರಮೇಶ್ ಭಟ್ ತಾರಾಬಳಗದಲ್ಲಿದ್ದಾರೆ.