ದಶಕಗಳ ಹಿಂದೆ ಕಾಲೇಜು ಮುಗಿಸುತ್ತಿದ್ದ ವೇಳೆಗೆ ತಾಯವ್ವ ಸಿನೆಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಈಗ ‘ತಾಯವ್ವʼ ಹೆಸರಿನಲ್ಲಿ ಮತ್ತೊಂದು ಸಿನೆಮಾ ತೆರೆಗೆ ಬರುತ್ತಿರುವುದು ಒಳ್ಳೆಯ ವಿಷಯʼ ಎಂದರು ಸುದೀಪ್.
‘ಮುಂದಿನ ಸಲ ಯಾವ್ದಾದ್ರೂ ಕಾರ್ಯಕ್ರಮ ನಾನು ನಡೆಸಿಕೊಡ್ಬೇಕು ಅಂತಿದ್ರೆ ನಮ್ಮ ಮನೆಯಲ್ಲಿ ಪ್ರೋಗ್ರಾಂ ಇಟ್ಟುಕೊಳ್ಳಿ. ಇಲ್ಲಾಂದ್ರೆ ಪ್ರತೀ ಸಲ ಊರು ಬಿಟ್ಟು ಓಡಿ ಬರಬೇಕಾಗುತ್ತೆ. ಕೆಲವು ಫ್ರೆಂಡ್‌ಶಿಪ್‌ಗಳನ್ನು ಎಷ್ಟೋ ವರ್ಷಗಳ ಹಿಂದೆಯೇ ಅವಾಯ್ಡ್ ಮಾಡಬಹುದಿತ್ತು ಅನಿಸುತ್ತೆ. ಇಲ್ಲಾಂದ್ರೆ ಪದೇ ಪದೇ ಕರೀತಿರ್ತಾರೆ.’
26
ಹೀಗೆಂದು ತಮಾಷೆಯಾಗಿ ನಿರ್ಮಾಪಕ ಭಾ.ಮ. ಹರೀಶ್ ಕಾಲೆಳೆದಿದ್ದು ಕಿಚ್ಚ ಸುದೀಪ್. ಗೀತಪ್ರಿಯ ನಟಿಸಿ, ಹಾಡಿರುವ ‘ತಾಯವ್ವ’ ಸಿನಿಮಾ ಹಾಡನ್ನು ಸುದೀಪ್ ಬಿಡುಗಡೆ ಮಾಡಿದರು. ಈ ವೇಳೆ ಭಾ.ಮ. ಹರೀಶ್ ಅವರ ಹೊಸ ಆಡಿಯೋ ಕಂಪನಿಯನ್ನೂ ಲಾಂಚ್ ಮಾಡಿದರು.
36
ಈ ವೇಳೆ ಸುದೀಪ್, ‘ದಶಕಗಳ ಹಿಂದೆ ಕಾಲೇಜು ಮುಗಿಸುತ್ತಿದ್ದ ವೇಳೆಗೆ ತಾಯವ್ವ ಸಿನೆಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಈಗ ‘ತಾಯವ್ವʼ ಹೆಸರಿನಲ್ಲಿ ಮತ್ತೊಂದು ಸಿನೆಮಾ ತೆರೆಗೆ ಬರುತ್ತಿರುವುದು ಒಳ್ಳೆಯ ವಿಷಯʼ ಎಂದರು.
46
ತಾಯವ್ವನಾಗಿ ನಟಿಸಿರುವ ಗೀತಪ್ರಿಯ, ‘ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಸಿನೆಮಾ. ಹೆಣ್ಣುಮಕ್ಕಳನ್ನು ಉಳಿಸಿ, ಬೆಳೆಸಿ ಎಂಬ ಸಂದೇಶವನ್ನು ಇಟ್ಟುಕೊಂಡು ಈ ಸಿನೆಮಾ ಮಾಡಲಾಗಿದೆ’ ಎಂದರು. ಸಾತ್ವಿಕ್ ಪವನ್ ಕುಮಾರ್ ನಿರ್ದೇಶಿಸಿರುವ, ಪದ್ಮಾವತಿ ಚಂದ್ರಶೇಖರ್ ನಿರ್ಮಾಣದ ಚಿತ್ರವಿದು.
56
ಟ್ರೇಲರ್ ಬಿಡುಗಡೆ: ‘ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿರುವ ‘ಪಾರು ಪಾರ್ವತಿ’ ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ ಬಿಡುಗಡೆ ಮಾಡಿದ್ದಾರೆ. ನಿರೀಕ್ಷೆ ಹುಟ್ಟಿಸಿರುವ ಈ ಟ್ರೇಲರ್‌ಗೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ದೊರೆತಿದೆ.
66
ಪಿ.ಬಿ. ಪ್ರೇಂನಾಥ್ ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದ ಈ ಸಿನಿಮಾ ಕುರಿತು ಮಾತನಾಡಿರುವ ಕಿಚ್ಚ ಸುದೀಪ್, ‘ಅಡ್ವೆಂಚರ್ ಕಾಮಿಡಿ ಜಾನರ್‌ನ ಈ ಚಿತ್ರದ ಟ್ರೇಲರ್ ಕುತೂಹಲ ಮೂಡಿಸುವಂತಿದೆ’ ಎಂದು ಹೇಳಿದ್ದಾರೆ.