ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಖ್ಯಾತ ನಟಿ ಹಾಗೂ ನಿರೂಪಕಿ ಶ್ವೇತಾ ಚಂಗಪ್ಪ ಈ ವರ್ಷ ಮಹಾ ಶಿವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.
26
ಈ ವರ್ಷ ಮಹಾ ಶಿವರಾತ್ರಿ ಹಬ್ಬದಂದು ಹಸಿರು ಬಣ್ಣದ ಬನಾರಸಿ ಸೀರೆ ಹಾಗೂ ಅದಕ್ಕೆ ಮ್ಯಾಚ್ ಆಗುವ ಹಸಿರು ಬಣ್ಣದ ಬಟ್ಟೆಯನ್ನು ತಲೆ ಕಟ್ಟಿಕೊಂಡಿದ್ದಾರೆ. ಇದು ಕೊಡಗು ಶೈಲಿಯ ಅಲಂಕಾರ.
36
ಸರ್ವರಿಗೂ ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು . ಪರಮಾತ್ಮ ಎಲ್ಲರಿಗೂ ಸಕಲ ಸಮೃದ್ಧಿ, ಆರೋಗ್ಯ , ಆಯಸ್ಸು,ನೆಮ್ಮದಿಯನ್ನು ನೀಡಿ ಕಾಪಾಡಲಿ ಹರ ಹರ ಮಹಾದೇವ' ಎಂದು ಶ್ವೇತಾ ಬರೆದುಕೊಂಡಿದ್ದಾರೆ.
46
ಆದರೆ ಇಲ್ಲಿ ಜನರಿಗೆ ಬೇಸರ ಆಗಿರುವು ಶ್ವೇತಾ ಧರಿಸಿರುವ ಸೀರೆಯ ಬಣ್ಣದ ಬಗ್ಗೆ. 'ಹಸಿರು ಬಣ್ಣ ನಿಮಗೆ ಸೂಟ್ ಅಗುವುದಿಲ್ಲ, ನಮ್ಮ ಹಬ್ಬಕ್ಕೆ ನೀವು ಇಷ್ಟೊಂದು ಹಸಿರು ಹಾಕಬೇಡಿ' ಎಂದು ಕಾಮೆಂಟ್ ಮಾಡಿದ್ದಾರೆ.
56
ಮಜಾ ಟಾಕೀಸ್ ರಾಣಿಯಾಗಿ, ಜನಪ್ರಿಯ ನಿರೂಪಕಿಯಾಗಿ ಶ್ವೇತಾ ಕನ್ನಡಿಗರ ಮನೆ ಮಗಳಾಗಿಬಿಟ್ಟಿದ್ದಾರೆ. ಹೀಗಾಗಿ ಶ್ಬೇತಾ ಏನೇ ಪೋಸ್ಟ್ ಮಾಡಿದ್ದರು ನಮ್ಮ ಹುಡುಗಿ ಅರ್ಥ ಮಾಡಿಕೊಳ್ಳುತ್ತಾಳೆ ಅನ್ನೊ ಲೆಕ್ಕದಲ್ಲಿ ಸಲಹೆ ನೀಡುತ್ತಾರೆ.
66
ಇನ್ನು ಬಿಡುವಿನ ಸಮಯದಲ್ಲಿ ಮಗನೊಟ್ಟಿಗೆ ಸಮಯ ಕಳೆಯುತ್ತಾರೆ, ಯೂಟ್ಯೂಬ್ ವ್ಲಾಗಿಂಗ್ ಮಾಡುತ್ತಾರೆ, ಇನ್‌ಸ್ಟಾಗ್ರಾಂ ರೀಲ್ಸ್ ಮಾಡುತ್ತಾರೆ...ಹೀಗೆ ಸಾಕಷ್ಟು ರೀತಿಯಲ್ಲಿ ಜನರನ್ನು ಮನೋರಂಜಿಸುತ್ತಲೇ ಇರುತ್ತಾರೆ.