ಯಾಕೆ ಶುಭಾ ಪೂಂಜಾ ಇಷ್ಟೊಂದು ಸಣ್ಣ ಆಗಿದ್ಯಾ...ನೀನು ದಪ್ಪನೇ ಇರು; ಫ್ಯಾನ್‌ ಕಾಮೆಂಟ್ ವೈರಲ್

Published : Feb 28, 2025, 09:33 AM ISTUpdated : Feb 28, 2025, 10:06 AM IST

ಶುಭ ಫಿಟ್ ಆಂಡ್ ಫೈನ್ ಆಗಿರುವುದು ಅಭಿಮಾನಿಗೆ ನಿಜಕ್ಕೂ  ಬೇಸರ ಆಗಿದೆ. ಮುದ್ದು ಮುದ್ದಾಗಿದ್ದೆ...ಹಾಗೆ ಇರ್ಬೇಕು ಅಂತಿರುವುದು ಯಾಕೆ?

PREV
16
ಯಾಕೆ ಶುಭಾ ಪೂಂಜಾ ಇಷ್ಟೊಂದು ಸಣ್ಣ ಆಗಿದ್ಯಾ...ನೀನು ದಪ್ಪನೇ ಇರು; ಫ್ಯಾನ್‌ ಕಾಮೆಂಟ್ ವೈರಲ್

ಮೊಗ್ಗಿನ ಮನಸ್ಸಿನ ಹುಡುಗಿ, ಬಿಗ್ ಬಾಸ್ ಸ್ಪರ್ಧಿ ಹಾಗೂ ಕನ್ನಡಿಗರ ಮನಸ್ಸು ಗೆದ್ದ ಸುಂದರಿ ಶುಭಾ ಪೂಂಜಾ ಈಗ ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. 

26

ಗರ್ಲ್ಸ್‌ ಗ್ಯಾಂಗ್ ಲೀಡರ್ ಆಗಿರುವ ಶುಭಾ ಪೂಂಜಾ ಪ್ರತಿ ಎಪಿಸೋಡ್‌ನಲ್ಲೂ ಸಖತ್ ಕಲರ್ ಫುಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಪ್ರತಿ ಲುಕ್‌ನಲ್ಲಿ ಫೋಟೋಶೂಟ್ ಮಾಡುತ್ತಾರೆ.

36

ಇತ್ತೀಚಿಗೆ ಬಾಯ್ಸ್ ವರ್ಸಸ್‌ ಗರ್ಲ್ಸ್‌ ಎಪಿಸೋಡ್‌ಗೆ ಹಳದಿ ಬಣ್ಣದ ಡ್ರೆಸ್ ಧರಿಸಿದ್ದರು. ಲಕ್ಷ್ಮಿ ಕೃಷ್ಣ ಡಿಸೈನರ್ ಉಡುವು ಇದಾಗಿದ್ದು ಮೇಕಪ್ ಕೂಡ ಅವರೇ ಮಾಡಿದ್ದರು. ಫೋಟೋ ಕ್ಲಿಕ್ ಮಾಡಿರುವುದು ರಾಘವ್ ಸ್ಟುಡಿಯೋದವರು.

46

ಸೂರ್ಯಕಾಂತಿ ಮುಂದೆ ನಿಂತು ಶುಭಾ ಪೂಂಜಾ ಡಿಫರೆಂಟ್ ಪೋಸ್‌ಗಳನ್ನು ನೀಡಿದ್ದಾರೆ. ಮೊದಲ ಸಿನಿಮಾ ಮೊಗ್ಗಿನ ಮನಸ್ಸು ಚಿತ್ರದಲ್ಲಿ ಹೇಗಿದ್ದರು ಅದೇ ರೀತಿ ಇಲ್ಲಿ ಕಾಣಿಸುತ್ತಿದ್ದಾರೆ. 

56

 'ಅಯ್ಯೋ ಇದೇನು ಶುಭಾ ನೀನು ಇಷ್ಟೊಂದು ಸಣ್ಣ ಆಗಿದ್ಯಾ? ನೀನು ದಪ್ಪನೇ ಇರು ಆಗ ನಮಗೆ ನೀನು ಪುಟ್ಟ ಹುಡುಗಿ ಅಂತೆ ಮುದ್ದು' ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾನೆ. 

66

ಬಿಗ್ ಬಾಸ್ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ ಶುಭಾ ಪೂಂಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದಾದ ಮೇಲೆ ಅಲ್ಲಿ ಇಲ್ಲಿ ಕಾರ್ಯಕ್ರಮ ಮತ್ತು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈಗ ಗರ್ಲ್ಸ್‌ ಗ್ಯಾಂಗ್‌ನ  ಲೀಡರ್‌ ಆಗಿ ಮಿಂಚುತ್ತಿದ್ದಾರೆ. 

Read more Photos on
click me!

Recommended Stories