ನಟ ದರ್ಶನ್‌ಗೆ ಮಗಳಿಲ್ಲ, ಈ ಮಹಿಳೆಯ ತಲೆ ಸರಿಯಾಗಿಲ್ಲ; ದೂರು ಕೊಡಲು ಮುಂದಾದ ವಿಜಯಲಕ್ಷ್ಮಿ

Published : Jan 25, 2024, 09:45 AM IST

 ಪವಿತ್ರಾ ಗೌಡ ಪೋಸ್ಟ್‌ಗೆ ಗರಂ, ಫ್ಯಾಮಿಲಿಗೆ ತೊಂದರೆ ಮಾಡುತ್ತಿರುವ ಕಾರಣ ದೂರು ಕೊಡಲು ಮುಂದಾದ ವಿಜಯಲಕ್ಷ್ಮಿ.  

PREV
19
ನಟ ದರ್ಶನ್‌ಗೆ ಮಗಳಿಲ್ಲ, ಈ ಮಹಿಳೆಯ ತಲೆ ಸರಿಯಾಗಿಲ್ಲ; ದೂರು ಕೊಡಲು ಮುಂದಾದ ವಿಜಯಲಕ್ಷ್ಮಿ

 ಸ್ಯಾಂಡಲ್‌ವುಡ್‌ ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಮುದ್ದಾದ ಗಂಡು ಮಗನಿದ್ದಾರೆ. 

29

ನಟಿ ಪವಿತ್ರಾ ಗೌಡ ಇದ್ದಕ್ಕಿದ್ದಂತೆ ದರ್ಶನ್ ಜೊತೆಗಿರುವ ಫೋಟೋಗಳನ್ನು ಅಪ್ಲೋಡ್ ಮಾಡಿ 10 ವರ್ಷಗಳ ಸಂಬಂಧ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ವಿಜಯ ಲಕ್ಷ್ಮಿ ಗರಂ ಆಗಿದ್ದು, ಪ್ರತಿಕ್ರಿಯೆ ನೀಡಿದ್ದಾರೆ.

39

'ಮತ್ತೊಬ್ಬರ ಗಂಡನ ಫೋಟೋ ಪೋಸ್ಟ್‌ ಮಾಡುವ ಮುನ್ನ ಸರಿ ತಪ್ಪು ಯೋಚನೆ ಮಾಡಲು ಈ ಮಹಿಳೆಗೆ ಆಗಲ್ವಾ? ಇದು ಆಕೆಯ ವ್ಯಕ್ತಿತ್ವ ಮತ್ತು ಮಾರಲ್ ಸ್ಟ್ಯಾಂಡರ್ಡ್‌ ತೋರಿಸುತ್ತದೆ'ಎಂದು ವಿಜಯ್ ಲಕ್ಷ್ಮಿ ಬರೆದುಕೊಂಡಿದ್ದಾರೆ.

49

 'ಒಬ್ಬ ಗಂಡಸು ಮದುವೆ ಆಗಿದ್ದಾನೆ ಎಂದು ತಿಳಿದ ಮೇಲೂ ಅವರೊಟ್ಟಿಗರು ಬಂದಿದ್ದಾಳೆ ಅಂದ್ರೆ ಅಗತ್ಯ, ಅವಶ್ಯಕತೆ ಮತ್ತು ಅಜೆಂಡ ಇರುತ್ತದೆ' ಎಂದು ಬರೆದು ಪವಿತ್ರಾ ಗೌಡ ನಿಜವಾದ ಗಂಡನ ಫೋಟೋ ಅಪ್ಲೋಡ್ ಮಾಡಿದ್ದಾರೆ.

59

'ಪವಿತ್ರಾ ಗೌಡ ಮತ್ತು ಸಂಜಯ್ ಸಿಂಗ್‌ ಅವರ ಮಗಳು ಖುಷಿಯಂದು ಸ್ಪಷ್ಟವಾಗಿ ಈ ಫೋಟೋಗಳು ಹೇಳುತ್ತದೆ. ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ನಾನು ವೈಯಕ್ತಿಕ ವಿಚಾರಗಳ ಬಗ್ಗೆ ಧ್ವನಿ ಎತ್ತುವುದಿಲ್ಲ'

69

'ನನ್ನ ಕುಟುಂಬದ ವಿಚಾರವಾಗಿ ನಾನು ಈ ಸಲ ಇದರ ಬಗ್ಗೆ ನಾನು ಮಾತನಾಡಲೇ ಬೇಕು. ಕಾನೂನು ಸಹಾಯ ಪಡೆದು ಕ್ರಮ ತೆಗೆದುಕೊಳ್ಳುವೆ. ಸೊಸೈಟಿಯಲ್ಲಿ ಬೇರೊಂದು ರೀತಿಯ ಇಮೇಜ್ ಕೊಡುತ್ತಿದ್ದಾರೆ' ಎಂದಿದ್ದಾರೆ ವಿಜಯ್ ಲಕ್ಷ್ಮಿ. 

79

ಈ ಹಿಂದೆಯೂ ದರ್ಶನ್ ಮತ್ತು ಪತ್ನಿ ವಿಜಯ್‌ಲಕ್ಷ್ಮಿ ನಡುವೆ ಮನಸ್ಥಾಪ ಉಂಟಾಗಿತ್ತು ಆದರೆ ಸ್ಪಷ್ಟವಾಗಿ ಕಾರಣ ತಿಳಿದು ಬಂದಿರಲಿಲ್ಲ. ಈಗ ಈ ರೀತಿ ಪೋಸ್ಟ್‌ಗಳು ವೈರಲ್ ಆಗುತ್ತಿರುವ ಕಾರಣ ಸಣ್ಣ ಪುಟ್ಟ ಸುಳಿವು ಸಿಗುತ್ತಿದೆ ಅಂತಾರೆ ಅಭಿಮಾನಿಗಳು. 

89

ಅತ್ತಿಗೆ ನೀವು ತಲೆ ಕೆಡಿಸಿಕೊಳ್ಳಬೇಡಿ ನಿಮ್ಮ ಪರ ನಾವು ಇದ್ದೀವಿ. ಏನೇ ಇದ್ದರೂ ಹೋರಾಟ ಮಾಡೋಣ. ವಿನೀಶ್ ಭವಿಷ್ಯಕ್ಕೆ ಯಾವುದೇ ತೊಂದರೆ ಆಗಬಾರದು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

99

ಈ ಫೋಟೋಗಳ ವೈರಲ್ ಅಗುತ್ತಿದ್ದಂತೆ, ಪವಿತ್ರಾ ಗೌಡ ಈಗಾಗಲೆ ಮದುವೆ ಒಬ್ಬ ಮಗಳು ಹುಟ್ಟಿದ ಮೇಲೆ ಡಿವೋರ್ಸ್ ಪಡೆದುಕೊಂಡಿದ್ದಾರೆ ಎಂದು ಕಾಮೆಂಟ್‌ಗಳು ಬರುತ್ತಿದೆ. 

Read more Photos on
click me!

Recommended Stories