'ಬಿಲ್ಲ ರಂಗ ಭಾಷಾ' ಹಾಲಿವುಡ್‌ ಸಿನಿಮಾಗಳ ಥರ.. ಬೇಸರವಾಗುವ ಪ್ರಶ್ನೆಯೇ ಇಲ್ಲ ಎಂದ ಅನೂಪ್‌ ಭಂಡಾರಿ

ಇದೊಂದು ಬಹುದೊಡ್ಡ ಪ್ರಾಜೆಕ್ಟ್‌. ಇಲ್ಲಿ ಹಾಲಿವುಡ್‌ ಸಿನಿಮಾಗಳ ಥರ ಒಂದು ವಿಶ್ವವನ್ನೇ ಕಟ್ಟಿಕೊಡಲು ಹೊರಟಿದ್ದೇವೆ. ಈ ಸಿನಿಮಾದ ಕಥೆಗೆ ನಾನು ಬಾಲ್ಯದಲ್ಲಿ ಓದುತ್ತಿದ್ದ ಚಂದಮಾಮ, ಬಾಲಮಿತ್ರ ಕಥೆಗಳೇ ಸ್ಫೂರ್ತಿ.

Director Anup Bhandari Shares Good News With Kichcha Sudeep Fans

ಸುದೀಪ್‌ ನಟನೆಯ ‘ಬಿಲ್ಲ ರಂಗ ಭಾಷಾ’ಕ್ಕೆ ಬೆಂಗಳೂರಿನಲ್ಲಿ 3 ಬೃಹತ್‌ ಸೆಟ್‌ಗಳು ರೆಡಿಯಾಗುತ್ತಿದೆ. ಶೀಘ್ರ ಇದೇ ಸೆಟ್ಟಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಈ ಆ್ಯಕ್ಷನ್‌ ಅಡ್ವೆಂಚರ್‌ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ ಎಂದು ನಿರ್ದೇಶಕ ಅನೂಪ್‌ ಭಂಡಾರಿ ಹೇಳಿದ್ದಾರೆ.

Director Anup Bhandari Shares Good News With Kichcha Sudeep Fans

ಇದೊಂದು ಬಹುದೊಡ್ಡ ಪ್ರಾಜೆಕ್ಟ್‌. ಇಲ್ಲಿ ಹಾಲಿವುಡ್‌ ಸಿನಿಮಾಗಳ ಥರ ಒಂದು ವಿಶ್ವವನ್ನೇ ಕಟ್ಟಿಕೊಡಲು ಹೊರಟಿದ್ದೇವೆ. ಈ ಸಿನಿಮಾದ ಕಥೆಗೆ ನಾನು ಬಾಲ್ಯದಲ್ಲಿ ಓದುತ್ತಿದ್ದ ಚಂದಮಾಮ, ಬಾಲಮಿತ್ರ ಕಥೆಗಳೇ ಸ್ಫೂರ್ತಿ. ಕಾಲೇಜು ಓದುತ್ತಿದ್ದಾಗಲೇ ಈ ಸಿನಿಮಾದ ಕಥೆ ಬರೆದಿಟ್ಟಿದ್ದೆ. 


ರಂಗಿತರಂಗ ಸಿನಿಮಾ ಬಳಿಕ ಸ್ಕ್ರಿಪ್ಟ್‌ ಡೆವಲಪ್‌ ಮಾಡಿದೆ. ತೆರೆಮೇಲೆ ತರಲು ದೊಡ್ಡ ಬಜೆಟ್‌ ಬೇಕಿದ್ದರಿಂದ ಈ ಸಿನಿಮಾ ಜೀವತಳೆಯಲು ಇಷ್ಟು ಕಾಲ ಕಾಯಬೇಕಾಯಿತು ಎಂದಿದ್ದಾರೆ.

ವಿಕ್ರಾಂತ್‌ ರೋಣ ಸಿನಿಮಾದಲ್ಲಿ ಆ್ಯಕ್ಷನ್‌ ಸೀನ್‌ಗಳೇ ಇರಲಿಲ್ಲ. ಆದರೆ ಇದು ಔಟ್‌ ಆ್ಯಂಡ್‌ ಔಟ್‌ ಸುದೀಪ್‌ ಸಿನಿಮಾ. ಅವರಿಗಾಗಿಯೇ ಬರೆದ ಸ್ಕ್ರಿಪ್ಟ್‌. ಹೀಗಾಗಿ ಈ ಸಿನಿಮಾದಲ್ಲಿ ಸುದೀಪ್‌ ಫ್ಯಾನ್‌ಗಳಿಗೆ ಬೇಸರವಾಗುವ ಪ್ರಶ್ನೆಯೇ ಇಲ್ಲ. 

ಈ ಸಿನಿಮಾದಲ್ಲಿ ನನ್ನ ಹಿಂದಿನ ಚಿತ್ರಗಳಂತೆ ತುಳುನಾಡು, ದೈವದಂಥಾ ಸನ್ನಿವೇಶಗಳಿರುವುದಿಲ್ಲ. ಆದರೆ ಭಾರತೀಯ ಹಿನ್ನೆಲೆಯಲ್ಲೇ ಸಿನಿಮಾ ಕಾಣಿಸಿಕೊಳ್ಳಲಿದೆ ಎಂದು ಅನೂಪ್‌ ಹೇಳಿದ್ದಾರೆ.

Latest Videos

click me!