Film Release ನಗಿಸುತ್ತಲೇ ಅಳಿಸುವ ಸಿನಿಮಾ ದಿಲ್‌ಪಸಂದ್‌: ಡಾರ್ಲಿಂಗ್‌ ಕೃಷ್ಣ

Published : Nov 11, 2022, 09:35 AM IST

 ಇಂದು ದಿಲ್‌ಪಸಂದ್‌ ಸಿನಿಮಾ ಬಿಡುಗಡೆ. ಹೊಸ ರೀತಿಯ ಲೈಫ್‌ಸ್ಟೈಲ್‌ ಕಥೆ ಹೇಳಲು ಮುಂದಾದ ಇಬ್ಬರು ಕೃಷ್ಣ ಅವರಿಬ್ಬರ ರಾಧೆಯರು...

PREV
18
Film Release ನಗಿಸುತ್ತಲೇ ಅಳಿಸುವ ಸಿನಿಮಾ ದಿಲ್‌ಪಸಂದ್‌: ಡಾರ್ಲಿಂಗ್‌ ಕೃಷ್ಣ

ಡಾರ್ಲಿಂಗ್‌ ಕೃಷ್ಣ, ನಿಶ್ವಿಕಾ ನಾಯ್ಡು, ಮೇಘಾ ಶೆಟ್ಟಿನಟನೆಯ, ಶಿವ ತೇಜಸ್‌ ನಿರ್ದೇಶನದ ‘ದಿಲ್‌ಪಸಂದ್‌’ ಸಿನಿಮಾ ನವೆಂಬರ್‌ 11ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಿ-ರಿಲೀಸ್‌ ಈವೆಂಟ್‌ ಆಯೋಜಿಸಿತ್ತು.

28

ಈ ಸಂದರ್ಭದಲ್ಲಿ ನಿರ್ದೇಶಕ ಶಿವ ತೇಜಸ್‌, ‘ಈ ಸಿನಿಮಾದಲ್ಲಿ ಇಬ್ಬರು ಕೃಷ್ಣರಿದ್ದಾರೆ, ಇಬ್ಬರು ರಾಧೆಯರಿದ್ದಾರೆ. ಈಗಿನ ಟ್ರೆಂಡ್‌ನಲ್ಲಿರುವ ಹೊಸರೀತಿಯ ಲೈಫ್‌ಸ್ಟೈಲ್‌ ಕಥೆಯನ್ನು ಸಿನಿಮಾ ಹೊಂದಿದೆ’ ಎಂದರು. 

38

ಅಜಯ್‌ ರಾವ್‌ ಈ ಚಿತ್ರದಲ್ಲಿ ಕ್ಯಾಮಿಯೋ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.ನಿರ್ಮಾಪಕ ಸುಮಂತ್‌ ಕ್ರಾಂತಿ, ‘ನನಗೆ ಈ ಕಥೆ ಮೇಲೆ ತುಂಬಾ ಪ್ರೀತಿ ಇದೆ. 

48

ರಿಯಲ್‌ ಲೈಫ್‌ ಗೆ ಹತ್ತಿರ ಇರುವ ಕಥೆ ಇದು. ಇಲ್ಲಿ ನಗುವಿದೆ. ಜೊತೆಗೆ ಭಾವನಾತ್ಮಕ ವಾಗಿದೆ. ಟ್ರೇಲರ್‌ನ ಕೊನೆಯಲ್ಲಿ ಬರುವ ಮಕ್ಕಳು ಸೋಲಬಾರದು ಕಣೋ, ಮಕ್ಕಳು ಸೋತರೆ ಅಪ್ಪ ಅಮ್ಮ ಸೋತಂತೆ ಎಂಬ ಡೈಲಾಗ್‌ ಅನ್ನು ಬಹಳ ಜನ ಮೆಚ್ಚಿಕೊಂಡಿದ್ದಾರೆ’ ಎಂದರು.

58

ನಟ ಡಾರ್ಲಿಂಗ್‌ ಕೃಷ್ಣ, ‘ಕಥೆ ಕೇಳುವಾಗಲೇ ಮಜಾ ಕೊಟ್ಟಸಿನಿಮಾ ಇದು. ಹೆಚ್ಚು ಯೋಚನೆ ಮಾಡದೆ ತಕ್ಷಣ ಒಪ್ಪಿಕೊಂಡಿದ್ದೆ. ಎಂಟರ್‌ಟೇನ್‌ ಮಾಡುತ್ತಲೇ ಎಮೋಷನಲ್‌ ಮಾಡುವ ಸಿನೆಮಾ ಇದು’ ಎಂದರು.

68

ನಟಿ ಮೇಘಾ ಶೆಟ್ಟಿ, ‘ಸಿನೆಮಾದಲ್ಲಿ ನಾನು ಮಿಂಚು, ನಿಶ್ವಿಕಾ ಗುಡುಗು. ನಾನು ಕ್ಯೂಟ್‌ ಅವರು ಹಾಟ್‌’ ಎಂದರು. ನಿಶ್ವಿಕಾ ರಾಮಾರಾಮಾ ಹಾಡಿನ ಸ್ಟೆಪ್‌ ಹಾಕಿ ರಂಜಿಸಿದರು.

78


ಅಜಯ್‌ ರಾವ್‌, ‘ಎಲ್ಲರೂ ಸಿನಿಮಾವನ್ನು ಪ್ರೇಕ್ಷಕರಾಗಿ ಎಂಜಾಯ್‌ ಮಾಡಿ. ವಿಮರ್ಶಕರಾಗುವುದು ಸ್ವಲ್ಪ ಕಡಿಮೆ ಮಾಡಿ’ ಎಂದು ಕೇಳಿಕೊಂಡರು.

88

ಸಹ ನಿರ್ದೇಶಕ ಹರೀಶ್‌, ತಬಲಾ ನಾಣಿ, ಹಿರಿಯ ನಟಿ ರಾಧ, ನಿರ್ದೇಶಕ ಚೇತನ್‌ ಕುಮಾರ್‌, ಚಿತ್ರ ಸಾಹಿತಿ ಕವಿರಾಜ್‌, ರಚನಾ ಇಂದರ್‌, ಮಿಲನ ನಾಗರಾಜ್‌, ರಂಗಸ್ವಾಮಿ, ಅದಿತಿ ಪ್ರಭುದೇವ, ಆನಂದ ಆಡಿಯೋ ಶಾಮ್‌ ಚಿತ್ರಕ್ಕೆ ಶುಭ ಕೋರಿದರು.

Read more Photos on
click me!

Recommended Stories