ಮಗಳ 5ನೇ ವರ್ಷದ ಹುಟ್ಟಿದಬ್ಬದ ಸಂಭ್ರಮದಲ್ಲಿ ದಿಯಾ ಖ್ಯಾತಿಯ ಖುಷಿ ರವಿ

First Published | Jan 21, 2024, 12:19 PM IST

ದಿಯಾ ಸಿನಿಮಾ ಖ್ಯಾತಿಯ ನಟಿ ಖುಷಿ ರವಿ ಅವರ ಮಗಳ 5ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮಾಚರಣೆ ಇತ್ತೀಚೆಗೆ ಅದ್ಧೂರಿಯಾಗಿ ನಡೆದಿದೆ. ಈ ಸಂಭ್ರಮದ ಫೋಟೋಗಳನ್ನು ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದು, ಹಿತೈಷಿಗಳು ವಿಶ್ ಮಾಡುತ್ತಿದ್ದಾರೆ. 
 

ದಿಯಾ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಟಿ ಖುಷಿ ರವಿ (Kushee Ravi) ಇತ್ತೀಚೆಗೆ ತಮ್ಮ ಮಗಳ 5ನೇ ವರ್ಷದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದು, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

ಕನ್ನಡ ಸಿನಿಮಾಕ್ಕೆ ಎಂಟ್ರಿ ಕೊಡೋ ಮುಂಚೆಯೇ ಮದುವೆಯಾಗಿದ್ದ ಖುಷಿ ರವಿಯವರಿಗೆ ತನಿಷಾ ಎಂಬ ಪುಟಾಣಿ ಮಗಳಿದ್ದು, ಆಕೆಗೆ ಕಳೆದ ಡಿಸೆಂಬರ್ ನಲ್ಲಿ 5 ವರ್ಷ ತುಂಬಿತ್ತು. ಇತ್ತೀಚೆಗೆ ಅದರ ಸೆಲೆಬ್ರೇಷನ್ (celebration)ಮಾಡಿದ್ದರು. ಮನೆಯವರೆಲ್ಲಾ ಒಟ್ಟಿಗೆ ಸೇರಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
 

Tap to resize

ಬ್ಲ್ಯಾಕ್ ಡ್ರೆಸ್ ಥೀಮ್ ನಲ್ಲಿ ಬರ್ತ್ ಡೇ ಪಾರ್ಟಿ ನಡೆದಿದ್ದು, ಪತಿ ರಾಕೇಶ್ ಬ್ಲ್ಯಾಕ್ ಶರ್ಟ್, ಜಾಕೆಟ್ (Jocket), ಪ್ಯಾಂಟ್ ಧರಿಸಿದ್ದರೆ, ಖುಷಿ ಕಪ್ಪು ಬಣ್ಣದ ಮಿನಿ ಡ್ರೆಸ್ ಧರಿಸಿದ್ದರು, ಮಗಳು ಕೂಡ ಕಪ್ಪು ಬಟ್ಟೆ ಧರಿಸಿದ್ದು, ಎಲ್ಲರೂ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ. 
 

ಬೆಂಗಳೂರಲ್ಲೇ ಹುಟ್ಟಿ ಬೆಳೆದ ಸುಷ್ಮಿತಾ ರವಿ, ಕನ್ನಡ ಸಿನಿಮಾ ರಂಗಕ್ಕೆ ಬಂದು ಖುಷಿ ರವಿಯಾದರು. ಇವರು ಸೋಡಾ ಬುಡ್ಡಿ (Soda Buddi) ಸಿನಿಮಾ ಮೂಲಕ ಕನ್ನಡ ಹಿರಿತೆರೆಗೆ ಎಂಟ್ರಿ ಕೊಟ್ಟು ಬಳಿಕ ದಿಯಾ ಮೂಲಕ ರಾಜ್ಯದ ಮನೆಮಾತಾದರು. 
 

ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ಖುಷಿ ನಟಿಸಿದ್ದಾರೆ, ಸ್ಮೂಕಿ ಕಾಲೆಜ್ ಎಂಬ ಹಾರರ್ ಸಿನಿಮಾ, ಅಷ್ಟೇ ಅಲ್ಲದೇ ನಕ್ಷೆ, ಫುಲ್ ಮೀಲ್ಸ್ ನಲ್ಲೂ ನಟಿಸಿದ್ದಾರೆ. ಸಂಗಮ ಸಮಾಗಮ ಎನ್ನುವ ಶಾರ್ಟ್ ಫಿಲಂ ನಲ್ಲಿ, ಅಡಿಪೊಳಿ ಎನ್ನುವ ಮಲಯಾಳಂ ಮತ್ತು ನೀನಿಲ್ಲದೇ ಎನ್ನುವ ಕನ್ನಡ ಆಲ್ಬಂ ಸಾಂಗ್ ಗಳಲ್ಲಿ ನಟಿಸಿದ್ದಾರೆ. 
 

ಇಷ್ಟೇ ಅಲ್ಲ ರಂಗಭೂಮಿ ಕಲಾವಿದೆಯಾಗಿರುವ (Theatre Artiste) ಖುಷಿ ಪ್ರಣಮ್ ದೇವರಾಜ್ ಜೊತೆ 'ಸನ್ ಆಫ್‌ ಮುತ್ತಣ್ಣ' ಚಿತ್ರದಲ್ಲಿ, ವಿಜಯ ರಾಘವೇಂದ್ರ ಅಭಿನಯದ 'ಕೇಸ್ ಆಫ್ ಕೊಂಡಾಣ' ಚಿತ್ರದಲ್ಲೂ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ತೆಲುಗಿನ ಪಿಂಡಂ ಎನ್ನುವ ಹಾರರ್ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. 
 

Latest Videos

click me!