ಒಂದುವರೆ ಕೋಟಿ ಸೆಟ್‌ನಲ್ಲಿ ಪೊಗರು ಟೈಟಲ್‌ ಸಾಂಗ್‌!

‘ಪೊಗರು’ ಚಿತ್ರದ ಟೈಟಲ್‌ ಹಾಡಿನ ಚಿತ್ರೀಕರಣಕ್ಕೆ ಅದ್ದೂರಿ ತಯಾರಿ ಮಾಡಿಕೊಂಡಿದ್ದಾರೆ ನಿರ್ಮಾಪಕ ಗಂಗಾಧರ್‌. 

‘ಪೊಗರು ಅಣ್ಣನಿಗೆ ಪೊಗರು’ ಎನ್ನುವ ಹಾಡಿನ ಚಿತ್ರೀಕರಣಕ್ಕೆ ಈಗಾಗಲೇ 1.50 ಕೋಟಿ ವೆಚ್ಚದಲ್ಲಿ ಸೆಟ್‌ ಹಾಕಿದ್ದು, ನೃತ್ಯ ನಿರ್ದೇಶಕ ಮುರಳಿ ಅವರ ಸಾರಥ್ಯದಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದೆ.
ಇಂದಿನಿಂದ (ಸೆ.24) ಹಾಡಿನ ಚಿತ್ರೀಕರಣ ನಡೆಯಲಿದ್ದು, ಈ ಅದ್ದೂರಿ ಸೆಟ್‌ನಲ್ಲಿ ನೂರಾರು ಡ್ಯಾನ್ಸರ್‌ಗಳ ಮಧ್ಯೆ ನಟ ಧ್ರುವ ಸರ್ಜಾ ಅವರಿಗೆ ಜಬರ್ದಸ್ತ್‌ಸ್ಟೆಪ್‌ಗಳನ್ನು ಕಂಪೋಸ್‌ ಮಾಡಲಿದ್ದಾರಂತೆ

6 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಉಳಿದಂತೆ ‘ಪೊಗರು’ ಚಿತ್ರಕ್ಕೆ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ.
ನಟ ಧನಂಜಯ… ಮತ್ತು ಇತರ ಕೆಲವು ಕಲಾವಿದರ ಸಂಭಾಷಣೆ ದೃಶ್ಯಗಳು ಮಾತ್ರ ಬಾಕಿಯಿದೆ.
ಈಗಾಗಲೇ ‘ಖರಾಬು’ ಹಾಡು 150 ಮಿಲಿಯನ್‌ ವೀಕ್ಷಣೆ ಪಡೆಯುವ ಮೂಲಕ ಸೂಪರ್‌ ಹಿಟ್‌ ಲೀಸ್ಟ್‌ಗೆ ಸೇರಿದೆ.
ಅದೇ ರೀತಿ ಟೈಟಲ್‌ ಹಾಡು ಕೂಡ ಯಶಸ್ಸು ಗಳಿಸಲಿದೆ ಎಂಬುದು ನಿರ್ದೇಶಕ ನಂದ ಕಿಶೋರ್‌ ಅವರ ನಂಬಿಕೆ.
ನಾಯಕಿಯಾಗಿ ರಶ್ಮಿಕಾ ಮಂದಣ್ಣ ಇದ್ದಾರೆ. ನಟಿ ಮಯೂರಿ, ರವಿ ಶಂಕರ್‌, ಚಿಕ್ಕಣ್ಣ, ಕುರಿ ಪ್ರತಾಪ್‌ ಸೇರಿದಂತೆ ಹಲವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Latest Videos

click me!