23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡ ಧ್ರುವ ಸರ್ಜಾ; ಆರೋಗ್ಯ ಹುಷಾರು ಗುರು ಎಂದ ಫ್ಯಾನ್ಸ್‌

Published : Jan 12, 2023, 09:38 AM IST

ಕೆಡಿ ಚಿತ್ರದಕ್ಕೆ 18 ಕೆಜಿ ತೂಕ ಇಳಿಸಿಕೊಂಡ ಧ್ರುವ ಸರ್ಜಾ. ನಟನ ಇದ್ದಕ್ಕಿದ್ದಂತೆ ಬದಲಾವಣೆ ನೋಡಿ ನೆಟ್ಟಿಗರು ಫುಲ್ ಶಾಕ್..... 

PREV
17
23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡ ಧ್ರುವ ಸರ್ಜಾ; ಆರೋಗ್ಯ ಹುಷಾರು ಗುರು ಎಂದ ಫ್ಯಾನ್ಸ್‌

ಡಿಫರೆಂಟ್ ಡೈರೆಕ್ಟರ್ ಪ್ರೇಮ್ ನಿರ್ದೇಶನ ಮಾಡುತ್ತಿರುವ ಕೆಡಿ ಚಿತ್ರಕ್ಕೆ ಆಕ್ಟನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕನಾಗಿ ಮಿಂಚುತ್ತಿದ್ದಾರೆ. ಈಗ ಚಿತ್ರತಂಡ ಬಿಗ್ ಅಪ್ಡೇಟ್ ಶೇರ್ ಮಾಡಿಕೊಂಡಿದೆ. 

27

ಕೆವಿಎನ್‌ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿದ್ದು ಧ್ರುವ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಏಕೆಂದರೆ ಇದ್ದಕ್ಕಿದ್ದಂತೆ ಸಣ್ಣಗಾಗಿರು ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. 

37

 'ಕೆಡಿ ಯುದ್ಧ ಭೂಮಿಗೆ ಎಂಟರ್‌ ಆಗಲು ಧ್ರುವ ಸರ್ಜಾ ರೆಡಿಯಾಗಿದ್ದಾರೆ. 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಯುದ್ಧವು ನಾಯಕನನ್ನು ಬಿಡಿಸಲು ಸಿದ್ಧವಾಗಿದೆ' ಎಂದು ಪ್ರೇಮ್ ಬರೆದುಕೊಂಡಿದ್ದಾರೆ. 

47

ಕೆಡಿ ಸಿನಿಮಾ ಅನೌನ್ಸ್ ಮಾಡಿದ ಆರಂಭದಲ್ಲಿ ಸೆರೆ ಹಿಡಿದ ಫೋಟೋ ಮತ್ತು ಈಗ ತೂಕ ಇಳಿಸಿಕೊಂಡ ನಂತರ ಧ್ರುವ ಹೇಗೆ ಕಾಣಿಸಿಕೊಳ್ಳುತ್ತಿದ್ದಾರೆಂದು ಪ್ರೇಮ್ ಅಪ್ಲೋಡ್‌ ಮಾಡಿದ್ದಾರೆ. 

57

ಇಷ್ಟು ಕಡಿಮೆ ಅವಧಿಯಲ್ಲಿ ಧ್ರುವ ತೂಕ ಕಳೆದುಕೊಂಡಿರುವುದಕ್ಕೆ ಅಭಿಮಾನಿಗಳು ಗಾಬರಿ ಆಗಿದ್ದಾರೆ. ಸಣ್ಣ ದಪ್ಪ ಅಂತ ಆಗಾಗ ಬದಲಾಗುವುದಕ್ಕೆ ಹೋಗಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

67

ಧ್ರುವ ಸರ್ಜಾ ಈವರೆಗೂ ಅಭಿನಯಿಸಿರುವ ಸಿನಿಮಾಗಳಿಗೆ ವಿಭಿನ್ನ ಲುಕ್ ಪ್ರಯೋಗ ಮಾಡುತ್ತಾರೆ. ಧ್ರುವ ಮಾಸ್ ಬಾಡಿಗೆ ತುಂಬಾನೇ ಫೇಮಸ್‌. ಪೊಗರು ಸಿನಿಮಾದಲ್ಲಿ ಕೆಲವು ನಿಮಿಷಗಳ ದೃಶ್ಯಕ್ಕೆ ತುಂಬಾ ಸಣ್ಣಗಾಗಿದ್ದರು. 

77

ಸ್ಕೂಲ್ ಹುಡುಗನ ದೃಶ್ಯಕ್ಕೆ ಸಣ್ಣಗಾದ ಧ್ರುವ ನೋಡಿ ಜನರು ಗಾಬರಿ ಆಗಿದ್ದರು. ಆನಂತರ ಮತ್ತೆ ಸಿನಿಮಾ ಅಂತ ಬಾಡಿ ಬಿಲ್ಡ್‌ ಮಾಡಿದ್ದರು. ಈಗ ಮತ್ತೆ ಸಣ್ಣಗಾಗಿರುವುದಕ್ಕೆ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ನಿಮ್ಮ ಆರೋಗ್ಯದ ಜೊತೆ ನೀವೇ ಆಟವಾಡುತ್ತಿದ್ದೀರಿ ಎಂದಿದ್ದಾರೆ.  

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories