ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಟನೆಯ ‘ಲವ್ ಬರ್ಡ್ಸ್ ’ ಚಿತ್ರದ ಒಂದು ಹಾಡನ್ನು ಬಿಡುಗಡೆ ಮಾಡಿದ್ದು ನಿರ್ಮಾಪಕಿ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅವರು.
27
ಪಿ ಸಿ ಶೇಖರ್ ನಿರ್ದೇಶನ, ಕಡ್ಡಿಪುಡಿ ಚಂದ್ರು ನಿರ್ಮಾಣದ ಚಿತ್ರ ಇದಾಗಿದೆ. ಕವಿರಾಜ್ ಬರೆದಿರುವ, ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡು ಇದಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮ ಹರೀಶ್, ಸಂಭಾಷಣೆಕಾರ ಮಾಸ್ತಿ ಮುಂತಾದವರು ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
37
‘ಕೌಟುಂಬಿಕ ಚಿತ್ರಗಳು ಇತ್ತೀಚೆಗೆ ಬರುತ್ತಿರುವುದು ಸ್ವಲ್ಪ ಕಡಿಮೆ. ಹೀಗಾಗಿ ಉತ್ತಮ ಕೌಟುಂಬಿಕ ಚಿತ್ರವೊಂದನ್ನು ಮಾಡಬೇಕು ಅನಿಸಿತು. ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಮಹತ್ತರವಾದ ಘಟ್ಟ.'
47
' ಎಲ್ಲರಿಗೂ ಮದುವೆ ಬಗ್ಗೆ ಸಾಕಷ್ಟುಕನಸುಗಳಿರುತ್ತವೆ. ಇದರ ಸುತ್ತ ಸಿನಿಮಾ ಸಾಗುತ್ತದೆ. ಇದಕ್ಕೆ ತಕ್ಕಂತೆ ಹಾಡೊಂದನ್ನು ಕವಿರಾಜ್ ಅವರು ಅದ್ಭುತವಾಗಿ ಬರೆದಿದ್ದಾರೆ.'
57
'ಇದೇ ಹಾಡನ್ನು ಈಗ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ನಿರ್ದೇಶಕ ಪಿ ಸಿ ಶೇಖರ್ ಹೇಳಿದರು. ಸಂಯುಕ್ತ ಹೊರನಾಡು, ಸಾಧುಕೋಕಿಲ, ರಂಗಾಯಣ ರಘು, ಅವಿನಾಶ್, ವೀಣಾ ಸುಂದರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ನಟಿ ಮಿಲನಾ ನಾಗರಾಜ್ ಅವರು ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಹೇಳಿಕೊಂಡರು.
67
ಪಿ.ಸಿ. ಶೇಖರ್ ನಿರ್ದೇಶನದ ಈ ಚಿತ್ರವನ್ನು ಚಂದ್ರು ಕಡ್ಡಿಪುಡಿ ನಿರ್ಮಿಸಿದ್ದಾರೆ.ಆಧುನಿಕ ದಂಪತಿಯ ಕತೆಯುಳ್ಳ ಸಿನಿಮಾ ಇದು. ನಿರ್ದೇಶಕ ಪಿ.ಸಿ. ಶೇಖರ್, ‘ಇದು ಎಲ್ಲರ ಮನೆಯ ಕಥೆ. 10 ವರ್ಷದ ನಂತರ ಲವ್ ಜಾನರ್ ಸಿನಿಮಾ ಮಾಡಿದ್ದೇನೆ’ ಎಂದರು.
77
'ನಾನು ಮತ್ತು ಮಿಲನ ನಾಗರಾಜ್ ಲವ್ ಮಾಕ್ಟೇಲ್ ಸಿನಿಮಾ ನಂತರ ಮಾಡಿರುವ ಚಿತ್ರವಿದು. ಅದರಲ್ಲಿ ಆದಿ ಮತ್ತು ನಿಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ವೀ. ಇದರಲ್ಲಿ ದೀಪಕ್ ಮತ್ತು ಪೂಜಾ ಪಾತ್ರದಲ್ಲಿ ಅಭಿನಯಿಸುತ್ತಿದ್ದೇವೆ' ಎಂದು ಕೃಷ್ಣ ಪಾತ್ರ ಪರಿಚಯ ಮಾಡಿಕೊಟ್ಟರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.