Head Bush 22 ಕೋಟಿಗೆ ಸೇಲ್‌; ಟಿವಿ-ಓಟಿಟಿ ಬ್ಯುಸಿನೆಸ್‌ನಲ್ಲಿ ಡಾಲಿ ದಾಖಲೆ

Published : Oct 20, 2022, 09:06 AM IST

ಡಾಲಿ ಧನಂಜಯ್ ಹೆಡ್‌ಬುಷ್ ಸಿನಿಮಾ ಓಟಿಟಿ ಮತ್ತು ಟಿವಿ ಹಕ್ಕುಗಳು 22 ಕೋಟಿಗೆ ಮಾರಾಟವಾಗಿದೆ.

PREV
18
Head Bush 22 ಕೋಟಿಗೆ ಸೇಲ್‌; ಟಿವಿ-ಓಟಿಟಿ ಬ್ಯುಸಿನೆಸ್‌ನಲ್ಲಿ ಡಾಲಿ ದಾಖಲೆ

ಡಾಲಿ ಧನಂಜಯ್‌ ನಟನೆಯ ‘ಹೆಡ್‌ ಬುಷ್‌’ ಚಿತ್ರದ ಟಿವಿ ರೈಟ್ಸ್‌ ಹಾಗೂ ಓಟಿಟಿ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟ ಆಗಿವೆ. ಚಿತ್ರದ ಟ್ರೇಲರ್‌ ಹಾಗೂ ಮೇಕಿಂಗ್‌ ನೋಡಿಯೇ ಚಿತ್ರದ ಪ್ರಸಾರ ಹಕ್ಕುಗಳನ್ನು ಜೀ ವಾಹಿನಿ ತನ್ನದಾಗಿಸಿಕೊಂಡಿದೆ. 

28

ಬರೋಬ್ಬರಿ 22 ಕೋಟಿ ರುಪಾಯಿಗಳಿಗೆ ಓಟಿಟಿ ಹಾಗೂ ಟಿವಿ ಹಕ್ಕುಗಳು ಮಾರಾಟಗೊಂಡಿದೆ. ಆ ಮೂಲಕ ಸಿನಿಮಾ ತೆರೆ ಕಾಣುವ ಮುನ್ನವೇ ಡಾಲಿ ಧನಂಜಯ್‌ ಸಿನಿಮಾ ಬ್ಯುಸಿನೆಸ್‌ನಲ್ಲೂ ದಾಖಲೆ ಮಾಡಲು ಹೊರಟಿದೆ. ಈಗಾಗಲೇ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದ್ದು, ಎಲ್ಲ ಭಾಷೆಯವರು ಮೆಚ್ಚಿಕೊಂಡಿದ್ದಾರೆ.

38

ಅ.21ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಅಗ್ನಿ ಶ್ರೀಧರ್‌ ಬರೆದಿರುವ ಕತೆಯನ್ನು ಶೂನ್ಯ ನಿರ್ದೇಶಿಸಿದ್ದಾರೆ. ವಸಿಷ್ಠ ಸಿಂಹ, ಬಾಲುನಾಗೇಂದ್ರ, ಲೂಸ್‌ ಮಾದ ಯೋಗೇಶ್‌, ಪ್ರಕಾಶ್‌ ಬೆಳವಾಡಿ, ದೇವರಾಜ್‌, ರಘುಮುಖರ್ಜಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

48

‘ಹೆಡ್‌ಬುಷ್‌’ ಚಿತ್ರದ ಪ್ರೀ- ರಿಲೀಸ್‌ ಸಮಾರಂಭ ದಾವಣಗೆರೆಯಲ್ಲಿ ಅದ್ದೂರಿಯಾಗಿ ನಡೆಯಿತು. ಡಾಲಿ ಧನಂಜಯ್‌ ಜತೆಗೆ ನಟಿಯರಾದ ರಮ್ಯಾ, ರಚಿತಾ ರಾಮ್‌, ಶ್ರುತಿ ಹರಿಹರನ್‌, ಲೂಸ್‌ ಮಾದ ಯೋಗೇಶ್‌ ಹಾಗೂ ಚಿತ್ರತಂಡದವರು ಪಾಲ್ಗೊಂಡಿದ್ದರು.

58

ಆಗಾಗ ಸುರಿಯುತ್ತಿದ್ದ ಮಳೆಯ ಮಧ್ಯೆಯೂ ಸಾವಿರಾರು ಜನ ಕಾರ್ಯಕ್ರಮಕ್ಕೆ ಸಾಕ್ಷಿ ಆದರು. ಈ ಸಂದರ್ಭದಲ್ಲಿ ಮಾತನಾಡಿದ ಧನಂಜಯ್‌, ‘ಈ ಮಳೆಯಲ್ಲಿ ನಮಗೋಸ್ಕರ ಇಷ್ಟುಹೊತ್ತು ಕಾಯುತ್ತಾ ಕುಳಿತಿದ್ದಕ್ಕೆ ಅಡ್ಡ ಬೀಳ್ತೀನಣ್ಣಾ, ನಿಮ್ಮ ಪ್ರೀತಿ, ಅಭಿಮಾನಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗ್ತಿಲ್ಲ. ಬಡವರ ಮಕ್ಕಳು ಗೆಲ್ಲಬೇಕಣ್ಣ. ಲವ್‌ ಯೂ’ ಎಂದರು.

68

ಲೂಸ್‌ ಮಾದ ಯೋಗಿ ಮಾತನಾಡಿ, ‘ಈ ಚಿತ್ರದಲ್ಲಿ ನಾನು ಗಂಗನ ಪಾತ್ರ ಮಾಡಿದ್ದೇನೆ. ಯೋಗಿ ಹೆಸರು ಎಷ್ಟುಜನಕ್ಕೆ ಗೊತ್ತಾಗುತ್ತೋ ಗೊತ್ತಿಲ್ಲ. ಆದರೆ, ಲೂಸ್‌ಮಾದ ಅಂದ್ರೆ ನಿಮ್ಮೆಲ್ಲರಿಗೂ ಗೊತ್ತಾಗುತ್ತೆ. 

78

ಹೆಡ್‌ ಬುಷ್‌ ಸಿನಿಮಾ ಬಿಡುಗಡೆ ಆದ ನಂತರ ಲೂಸ್‌ಮಾದನನ್ನು ನೀವೆಲ್ಲರೂ ಗಂಗಾ ಅಂತಾನೆ ಗುರುತಿಸುತ್ತೀರಿ. ಇಷ್ಟೊಂದು ಜನರ ಮುಂದೆ ಇನ್ನು ಸ್ವಲ್ಪ ಹೊತ್ತು ನಾನು ನಿಂತರೆ ಅಳು ಬಂದು ಬಿಡುತ್ತದೆ’ ಎನ್ನುತ್ತಾ ಚಿತ್ರದಲ್ಲಿನ ತಮ್ಮ ಪಾತ್ರದ ಡೈಲಾಗ್‌ ಹೊಡೆದರು.

88

ನಟಿಯರಾದ ಶ್ರುತಿ ಹರಿಹರನ್‌, ಪಾಯಲ್‌ ರಜಪೂತ್‌, ರಚಿತಾ ರಾಮ್‌, ಆನಂದ್‌ ಆಡಿಯೋದ ಶ್ಯಾಮ್‌ ಮುಂತಾದವರು ವೇದಿಕೆ ಮೇಲೆ ಇದ್ದು, ಸಿನಿಮಾ ಪ್ರಿಯರ ಶಿಳ್ಳೆ, ಚಪ್ಪಾಳೆಗಳಿಗೆ ಕಾರಣರಾದರು.

Read more Photos on
click me!

Recommended Stories