ಕನ್ನಡತಿಯಾಗಿ ದರ್ಶನ್ ಹುಟ್ಟುಹಬ್ಬಕ್ಕೆ ರಶ್ಮಿಕಾ ವಿಶ್ ಮಾಡದ್ದು ತಪ್ಪಾ?

First Published | Feb 21, 2020, 1:05 PM IST

'ಯಜಮಾನ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ತರೆ ಹಂಚಿಕೊಂಡಿದ್ದಾರೆ ರಶ್ಮಿಕಾ ಮಂದಣ್ಣ. ಆದರೆ, ಇದೀಗ ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿರುವ ರಶ್ಮಿಕಾ ದರ್ಶನ್ ಹುಟ್ಟಿದಬ್ಬಕ್ಕೆ ವಿಶ್ ಮಾಡಿಲ್ಲ. ಆದರೆ, ಅದೇ ದಿನ ಹಾಟ್ ಫೋಟೋ ಶೇರ್ ಮಾಡಿ ಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ರಶ್ಮಿಕಾ ಕಾಲೆಳೆದಿದ್ದಾರೆ. ಇದಕ್ಕೆ ಅರ್ಥವಿದ್ಯಾ?

'ಯಜಮಾನ' ಚಿತ್ರದಲ್ಲಿ ದರ್ಶನ್ ಜೊತೆ ತೆರೆ ಹಂಚಿಕೊಂಡಿದ್ದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ.
ಫೆ.16ರಂದು ಹುಟ್ಟಿದಬ್ಬ ಆಚರಿಸಿಕೊಂಡ ದರ್ಶನ್‌ಗೆ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡದ ಕರುನಾಡ ಕ್ರಷ್.
Tap to resize

ಆದರೆ, ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಡ್ರೆಸ್ ಫೋಟೋ ಶೇರ್ ಮಾಡಿಕೊಂಡ ನಟಿ.
ನಮ್ಮ ಡಿ ಬಾಸ್‌ಗೆ ವಿಶ್ ಮಾಡ್ಲಿಕ್ಕೇನೆಂದು ಕಾಲೆಳೆದ ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್.
ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮುರಿದುಕೊಂಡ ನಂತರ ರಶ್ಮಿಕಾ ವಿರುದ್ಧ ಸದಾ ಕಿಡಿ ಕಾರುತ್ತಿದ್ದಾರೆ ಕನ್ನಡಿಗರು.
ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದು ಮಾತ್ರವಲ್ಲ, ಕನ್ನಡ ಕಷ್ಟವೆಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
ಇತ್ತೀಚೆಗೆ ಇವರ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.
ಪುನೀತ್ ರಾಜ್‌ಕುಮಾರ್ ಜೊತೆ ಅಂಜನೀಪುತ್ರ, ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಚಮಕ್ ಚಿತ್ರದಲ್ಲಿ ನಟಿಸಿದ್ದಾರೆ ರಶ್ಮಿಕಾ.
ದರ್ಶನ್ ಜೊತೆ ಯಜಮಾನ ಚಿತ್ರದಲ್ಲಿ ನಟಿಸಿದ್ದು, ಈ ಜೋಡಿಗೆ ಬಹು ಪರಾಕ್ ಹೇಳಿದ್ದರು ಅಭಿಮಾನಿಗಳು.
ಡಿಯರ್ ಕಾಮ್ರೇಡ್‌ನಲ್ಲಿ ಹಾಟ್ ಹಾಟ್ ದೃಶ್ಯಗಳಲ್ಲಿ ವಿಜಯ್ ದೇವರಕೊಂಡ ಜೊತೆ ಕಾಣಿಸಿಕೊಂಡಿದ್ದಾರೆ ರಶ್ಮಿಕಾ. ನಂತರ ಇವರಿಬ್ಬರ ಸಂಬಂಧದ ಬಗ್ಗೆ ಗುಸು ಗುಸು ಕೇಳಿ ಬರುತ್ತಿದೆ.
ಬಾಲಿವುಡ್‌ನಲ್ಲಿಯೂ ರಶ್ಮಿಕಾಗೆ ಆಫರ್ಸ್ ಇದ್ದು, ತೆಲುಗು ಚಿತ್ರದಷ್ಟು ಸಂಭಾವನೆ ಸಿಗದ ಕಾರಣ ತಿರಸ್ಕರಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ತೆಲುಗಿನ ಎಲ್ಲ ಸ್ಟಾರ್ ನಟರ ಜೊತೆಯೂ ತೆರೆ ಹಂಚಿಕೊಳ್ಳುತ್ತಿದ್ದಾರೆ ಕೊಡಗಿನ ಕುವರಿ.
ಏನೇ ಆಗಲಿ, ದರ್ಶನ್‌ಗೆ ವಿಶ್ ಮಾಡಿಲ್ಲವೆಂದು ಈ ನಟಿಯ ಕಾಲೆಳೆಯುವುದು ತಪ್ಪಲ್ಲವೇ?

Latest Videos

click me!