ಮಂತ್ರಾಲಯ ರಾಯರ ದರ್ಶನ ಪಡೆದು ಗೋಶಾಲೆಗೆ ಭೇಟಿ ಕೊಟ್ಟ ನಟ ದರ್ಶನ್; ಫೋಟೋಗಳಿವು!

First Published | Mar 18, 2021, 1:22 PM IST

ರಾಬರ್ಟ್‌ ವಿಜಯಯಾತ್ರೆ ವೇಳೆ ಮಂತ್ರಾಲಯ ರಾಯರ ದರ್ಶನ ಪಡೆದು, ನಟ ದರ್ಶನ್‌ಗೆ ಮಠದ ವತಿಯಿಂದ ಸನ್ಮಾನ ಮಾಡಲಾಯಿತು. ಆನಂತರ ಗೋ ಶಾಲೆಗೆ ಭೇಟಿ ನೀಡಿ ಗೋವುಗಳನ್ನು ವೀಕ್ಷಿಸಿದ್ದಾರೆ. 
 

ರಾಬರ್ಟ್‌ ಯಶಸ್ಸಿನಲ್ಲಿರುವ ಡಿ-ಬಾಸ್, ಮಂತ್ರಾಲಯ ರಾಯರ ಆಶೀರ್ವಾದ ಪಡೆದಿದ್ದಾರೆ.
ಮಾ.17ರಂದು ಮಂತ್ರಾಲಯಕ್ಕೆ ಭೇಟಿ ಕೊಟ್ಟ ದರ್ಶನ್‌ಗೆ ಮಠದಲ್ಲಿ ಸನ್ಮಾನ ಮಾಡಲಾಗಿತ್ತು.
Tap to resize

ಗೋ ಶಾಲೆಗೆ ಭೇಟಿ ನೀಡಿ ಗೋವುಗಳ ಜೊತೆ ಸಮಯ ಕಳೆದ ದರ್ಶನ್.
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಶ್ರೀ ಗುರು ವೈಭವೋತ್ಸವ ನಡೆಯುತ್ತಿದ್ದು ದರ್ಶನ್ ಹಾಗೂ ಸ್ನೇಹಿತರು ಭಾಗಿಯಾಗಿದ್ದರು.
'ರಾಯರ ಅನುಗ್ರಹ ಇದ್ದಾಗ ಮಾತ್ರ ನಾವು ಇಲ್ಲಿಗೆ ಬರಲು ಸಾಧ್ಯ. ಮಠದ ಪೀಠಾಧಿಪತಿಗೂ ನನ್ನನ್ನು ಕರೆಯಿಸಿಕೊಳ್ಳುವಂತೆ ರಾಯರ ಅನುಗ್ರಹವಾಗಿತ್ತು. ಅದೇ ಕಾಲಕ್ಕೆ ನನಗೂ ಇಲ್ಲಿಗೆ ಬರಬೇಕು ಎಂಬ ಮನಸಾಗಿದೆ. ಅದೊಂದು ಪವಾಡದ ರೀತಿಯಲ್ಲೇ ನಡೆದು ಹೋಯಿತು. ಐದಾರು ವರ್ಷಗಳ ಹಿಂದೆ ಮಂತ್ರಾಲಯಕ್ಕೆ ಬಂದಿದ್ದೆ,' ಎಂದು ದರ್ಶನ್ ಮಾತನಾಡಿದ್ದಾರೆ.
ಚಿಕ್ಕ ವಯಸ್ಸಿನಿಂದಲೂ ದರ್ಶನ್‌ಗೆ ಗೋವುಗಳ ಸಾಕಿ ನೋಡಿ ಬೆಳೆದಿರುವ ಕಾರಣ ಸುಲಭವಾಗಿ ಅವುಗಳ ಜೊತೆ ಹೊಂದಿಕೊಳ್ಳುತ್ತಾರೆ.

Latest Videos

click me!