ರಾಯರ ಅನುಗ್ರಹದಿಂದಲೇ ಮಂತ್ರಾಲಯಕ್ಕೆ ಬಂದಿದ್ದು: ನಟ ದರ್ಶನ್‌

First Published | Mar 18, 2021, 1:13 PM IST

ರಾಯಚೂರು(ಮಾ.18): ಶ್ರೀರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದಲೇ ಇಂದು ಮಂತ್ರಾಲಯಕ್ಕೆ ಬರಲು ಸಾಧ್ಯವಾಗಿದೆ ಎಂದು ಚಿತ್ರನಟ ದರ್ಶನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

ಶ್ರೀಮಠದ ಆವರಣದಲ್ಲಿರುವ ಯೋಗೀಂದ್ರ ಸಭಾಮಂಟಪದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವದ ನಾಲ್ಕನೇ ದಿನದ ಅಭಿನಂದನಾ, ಅಭಿವಂದನಾ ಸಮಾರಂಭದಲ್ಲಿ ಶ್ರೀಮಠದಿಂದ ಸನ್ಮಾನ ಸ್ವೀಕರಿಸಿದ ದರ್ಶನ್‌
undefined
ಕಳೆದ ಐದಾರು ವರ್ಷಗಳಿಂದ ಮಂತ್ರಾಲಯಕ್ಕೆ ಬರಲಾಗಿರಲಿಲ್ಲ. ಕಳೆದ ಮಾ.11 ರಂದು ರಾರ್ಬಟ್‌ ಚಿತ್ರ ಬಿಡುಗಡೆಯಾಗಿದೆ. 10 ರಂದು ಚಿತ್ರನಿರ್ದೇಶನ ತರುಣ್‌ ಸುಧೀರ್‌ ಅವರು ತಾವು ರಾಯರ ದರ್ಶನಕ್ಕೆ ಹೋಗುತ್ತಿರುವುದಾಗಿ ತಿಳಿಸಿ ಸರಿಯಾಗಿ ಅಂದು 11 ಗಂಟೆಗೆ ರಾಯರ ದರ್ಶನ ಪಡೆದರು ಅದೇ ಸಮಯಕ್ಕೆ ಬೆಂಗಳೂರಿನಲ್ಲಿ ನನಗೆ ಬಾಲಾಜೀ ಅವರು ಮಂತ್ರಾಲಯದ ಶ್ರೀಗಳು ಆಹ್ವಾನ ನೀಡಿದ್ದಾರೆ ಎಂದು ತಿಳಿಸಿದ ದರ್ಶನ್‌
undefined

Latest Videos


ಪವಾಡವೋ ಅಚ್ಚರಿಯೋ ರಾಯರ ಅನುಗ್ರಹದಿಂದಲೆಯೇ ನಾನು ಮಂತ್ರಾಲಯಕ್ಕೆ ಬಂದಿರುವುದಾಗಿ ಹೇಳಿದ ದರ್ಶನ್‌
undefined
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿ, ಜಾತಿ, ಮತ, ಭಾಷ, ಪ್ರಾಂತಕ್ಕೆ ಅತೀತವಾಗಿ ತಮ್ಮಬಳಿಗೆ ಬರುವ ಭಕ್ತರನ್ನು ಶ್ರೀರಾಯರು ಪುನೀತರನ್ನಾಗಿ ಮಾಡಿ ಅವರನ್ನು ಅನುಗ್ರಹಿಸುತ್ತಿದ್ದಾರೆ.
undefined
ರಾಯರ ದೃಷ್ಠಿ ಭಕ್ತ ಸಮುದಾಯದ ಮೇಲೆ ಬೀಳುತ್ತದೆ ಅದರಿಂದ ಅವರೆಲ್ಲರ ಪಾಪ ಪರಿಹಾರವಾಗುತ್ತದೆ. ಜಾತ್ಯಾತೀತವಾದ ಮಹಾಗುರುಗಳು ಎಂದು ಪ್ರತೀತವಾಗಿದ್ದಾರೆ ಎಂದರೆ ಅದು ಶ್ರೀರಾಘವೇಂದ್ರ ಸ್ವಾಮಿಗಳಾಗಿದ್ದಾರೆ. ಕೇವಲ ಹಿಂದುಗಳಷ್ಟೇ ಅಲ್ಲ ಇತರೆ ಧರ್ಮದವರೂ ಸಹ ಶ್ರೀಗುರುರಾಯರು ಕರುಣಿಸಿ ಅನುಗ್ರಹಿಸುತ್ತಾರೆ. ಶ್ರೀರಾಘವೇಂದ್ರ ಸ್ವಾಮಿಗಳು ಭಕ್ತರು ಬೇಡಿದಂತಹ ಎಲ್ಲ ಇಷ್ಟಾರ್ಥಗಳನ್ನು ಪೂರೈಸುವಂತಹ ವಿಶ್ವಬ್ಯಾಂಕ್‌ ಇದ್ದಂತೆ ಎಂದು ನುಡಿದರು.
undefined
ಬಳ್ಳಾರಿಯ ಸೌಮ್ಯ ಹಿರೇಮಠ ಮತ್ತು ಅವರ ತಂಡದಿಂದ ಕೂಚಿಪುಡಿ ನೃತ್ಯ ಪ್ರದರ್ಶನ
undefined
ಗಂಗಾವತಿ ಪ್ರಾಣೇಶ್‌ ಮತ್ತು ಅವರ ತಂಡದಿಂದ ನಡೆದ ಹಾಸ್ಯಸಂಜೆ ಕಾರ್ಯಕ್ರಮ
undefined
ರಾಯರ ಸನ್ನಿಧಾನಕ್ಕೆ ಸ್ನೇಹಿತರ ಜೊತೆ ಭೇಟಿ ನೀಡಿದ ಡಿ ಬಾಸ್ ಮಂತ್ರಾಲಯದ ಗೋ ಶಾಲೆಯಲ್ಲಿ ಗೋವುಗಳನ್ನು ವೀಕ್ಷಿಸಿದರು
undefined
ಕರುವಿನ ಜೊತೆ ಕೆಲ ಸಮಯ ಕಳೆದ ನಟ ದರ್ಶನ್‌
undefined
ಈ ಸಂದರ್ಭದಲ್ಲಿ ತಮಿಳುನಾಡಿನ ನ್ಯಾಯವಾದಿ ಕೆ.ವಾಸುದೇವನ್‌,ಯಶಸ್‌ ಸೇರಿದಂತೆ ಮಠದ ವಿದ್ವಾಂಸರು, ಪಂಡಿತರು, ಅಧಿಕಾರಿ, ಸಿಬ್ಬಂದಿ, ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
undefined
click me!