ಒಟಿಟಿಗೆ ಬಂದ ಡಾರ್ಲಿಂಗ್‌ ಕೃಷ್ಣ, ಮಿಲನಾ ನಾಗರಾಜ್‌ರ Love Mocktail 3 Movie; ಯಾವಾಗ ರಿಲೀಸ್?‌

Published : May 02, 2026, 05:45 PM IST

Darling Krishna: ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ನಟನೆಯ ಲವ್ ಮಾಕ್ಟೇಲ್ 3 ಸಿನಿಮಾ ಮನಮುಟ್ಟುವ ಭಾವನಾತ್ಮಕ ಕಥೆಯಾಗಿದೆ. ಇದಕ್ಕೆ ಡಾರ್ಲಿಂಗ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾವನ್ನು ಕ್ರಿಸ್ಮಿ ಫಿಲಂಸ್ ಲಾಂಛನದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ನಿರ್ಮಾಣ ಮಾಡಿದ್ದಾರೆ. 

PREV
14
ಈ ಸಿನಿಮಾ ಕತೆ ಏನು?

ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ,‌ ಮಿಲನ ನಾಗರಾಜ್, ಸಂವೃತಾ, ಅಮೃತಾ ಐಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್ ಮುಂತಾದವರು ನಟಿಸಿದ್ದಾರೆ. ಲವ್ ಮಾಕ್ಟೇಲ್ 2ನ ಯಶಸ್ಸಿನ ನಂತರ, ಹಲವಾರು ವರ್ಷಗಳು ಕಳೆದ ಮೇಲೆ ಲವ್ ಮಾಕ್ಟೇಲ್ 3 ತೆರೆ ಮೇಲೆ ಬಂದಿತ್ತು. ಈ ಕಥೆಯು ಆದಿತ್ಯ, ನಿಧಿ ಸುತ್ತ ಸುತ್ತುತ್ತದೆ. ನಿಧಿಯನ್ನು ಆದಿತ್ಯ ಲವ್ ಮಾಕ್ಟೇಲ್ 2ನಲ್ಲಿ ದತ್ತು ತೆಗೆದುಕೊಂಡಿದ್ದಾನೆ, ಅವರಿಬ್ಬರ ನಡುವಿನ ತಂದೆ-ಮಗಳ ಬಾಂಧವ್ಯವನ್ನು ಈ ಕಥೆ ಎತ್ತಿ ಹಿಡಿಯಲಿದೆ. ಕಥೆಯು ಈ ತಂದೆ-ಮಗಳ ದಿನಚರಿ, ತುಂಟಾಟ,‌ ಅವರಿಬ್ಬರ ನಡುವಿನ ಪ್ರೀತಿ, ಅವರೊಂದಿಗೆ ಅವರ ಮನೆಯ ಕೇರ್‌ಟೇಕರ್‌ ಜಗ್ಗನ ತಮಾಷೆ ಮುಂತಾದವುಗಳನ್ನು ಹೇಳುತ್ತದೆ.

24
ವಿಶೇಷವಾದ ಭಾವನಾತ್ಮಕ ಡ್ರಾಮಾ ಸಿನಿಮಾ

ಡಾ.ಶಾಂತಾ,‌ ನಿಧಿಯ ನಿಜವಾದ ಅಜ್ಜಿ ತನ್ನ ಮೊಮ್ಮಗಳನ್ನು ಹಿಂದಿರುಗಿಸಲು ಒತ್ತಾಯಿಸಿದಾಗ ಈ ಸುಂದರವಾದ ಸಂಸಾರಕ್ಕೆ ಸಿಡಿಲು ಬಡಿದಂತೆ ಆಗುತ್ತದೆ. ಇದನ್ನು ಆದಿತ್ಯ ಹೇಗೆ ಸರಿಪಡಿಸುತ್ತಾನೆ,‌ ಅವನು ಎದುರಿಸುವ ಸವಾಲುಗಳು, ಆ‌ ಭಾವನಾತ್ಮಕ ತೊಳಲಾಟ ಇತ್ಯಾದಿಗಳನ್ನು ಈ ಚಿತ್ರವು ಬಿಂಬಿಸುತ್ತದೆ. ಒಟ್ಟಾರೆ, ಲವ್ ಮೋಕ್ಟೇಲ್ 3 ಒಂದು ವಿಶೇಷವಾದ ಭಾವನಾತ್ಮಕ ಡ್ರಾಮಾ ಚಿತ್ರವಾಗಿದೆ. ಪ್ರೀತಿ, ಬಾಂಧವ್ಯ,‌ ಸ್ನೇಹ, ಮುಂತಾದ ಬಗ್ಗೆ ಈ ಸಿನಿಮಾ ಕಥೆ ಇದೆ.

34
ಈ ಸಿನಿಮಾದಲ್ಲಿ ಏನಿದೆ?

ಲವ್ ಮಾಕ್ಟೇಲ್ 3 ಸಿನಿಮಾ ಬಗ್ಗೆ ಮಾತನಾಡಿದ ಡಾರ್ಲಿಂಗ್ ಕೃಷ್ಣ, "ಲವ್ ಮಾಕ್ಟೇಲ್ ಸರಣಿಯು ನನ್ನ ಸಿನಿ ಪಯಣದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಲವ್ ಮಾಕ್ಟೇಲ್ 3 ಚಿತ್ರವು ಈ‌ ಹಿಂದಿನ ಎರಡು ಕಥೆಗಳಿಗೆ ಒಂದು ಸಿಹಿಯಾದ ಅಂತ್ಯವಾಗಿದೆ. ಈ ಚಿತ್ರವು ಪ್ರೀತಿಯ ದೈವೀ ರೂಪವಾದ ವಾತ್ಸಲ್ಯವನ್ನು ಹೇಳುತ್ತದೆ, ತಂದೆ-ಮಗಳ ನಡುವಿನ ಬಾಂಧವ್ಯವನ್ನು ಹೇಳುತ್ತದೆ. ಈ ಚಿತ್ರವು ಜೀ5ನಲ್ಲಿ ಬಿಡುಗಡೆ ಆಗುತ್ತಿರುವುದು ನನಗೆ ಸಂತಸ ತಂದಿದೆ" ಎಂದು ಪ್ರಶಂಸೆ ವ್ಯಕ್ತಪಡಿಸಿದರು.

44
ಒಟಿಟಿ ರಿಲೀಸ್‌ ಯಾವಾಗ?

ಇದೇ ಮೇ 8ಕ್ಕೆ ಲವ್ ಮಾಕ್ಟೇಲ್ 3 ಸಿನಿಮಾವನ್ನು ಜೀ5ನಲ್ಲಿ ನೋಡಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories