Ganesh ನ.25ಕ್ಕೆ ತ್ರಿಬಲ್‌ ರೈಡಿಂಗ್‌ ಬಿಡುಗಡೆ!

Published : Nov 07, 2022, 09:11 AM IST

ಮೂವರು ನಾಯಕಿಯರ ಜತೆಗೆ ಗೋಲ್ಡನ್‌ ಸ್ಟಾರ್‌ ಆಗಮನ. ಕುತೂಹಲ ಹೆಚ್ಚಿಸುತ್ತಿರುವ ಕಥೆ ಇದು...  

PREV
17
Ganesh ನ.25ಕ್ಕೆ ತ್ರಿಬಲ್‌ ರೈಡಿಂಗ್‌ ಬಿಡುಗಡೆ!

ಗಣೇಶ್‌ ಅವರ ನಟನೆಯ ‘ತ್ರಿಬಲ್‌ ರೈಡಿಂಗ್‌’ ಸಿನಿಮಾ ಇದೇ ನ.25ಕ್ಕೆ ತೆರೆ ಮೇಲೆ ಬರುತ್ತಿದೆ. ಮಹೇಶ್‌ ಗೌಡ ನಿರ್ದೇಶನ, ವೈ ಎಂ ರಾಮ್‌ಗೋಪಾಲ್‌ ನಿರ್ಮಾಣದ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಂಡಿದೆ. 

27

‘ಗಾಳಿಪಟ 2’ ಚಿತ್ರದ ಯಶಸ್ಸಿನಲ್ಲಿರುವ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರಿಗೆ ‘ತ್ರಿಬಲ್‌ ರೈಡಿಂಗ್‌’ ಮತ್ತೊಂದು ಗೆಲವು ತಂದುಕೊಡುವ ಭರವಸೆ ಮೂಡಿಸಿದೆಯಂತೆ. ಆಡಿಯೋ ಬಿಡುಗಡೆ ಕೂಡ ಸಜ್ಜಾಗಿರುವ ಈ ಚಿತ್ರದಲ್ಲಿ ಅದಿತಿಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್‌ ಅವರು ನಾಯಕಿಯರಾಗಿ ನಟಿಸಿದ್ದಾರೆ. 

37

ಸದ್ಯ ‘ಬಾನದಾರಿಯಲ್ಲಿ’ ಚಿತ್ರಕ್ಕೆ ಬಹುತೇಕ ಶೂಟಿಂಗ್‌ ಮುಗಿಸಿಕೊಂಡು ಬಂದಿರುವ ಗಣೇಶ್‌ ಅವರು ಈಗ ‘ತ್ರಿಬಲ್‌ ರೈಡಿಂಗ್‌’ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಮೊದಲ ಚಿತ್ರವಾದರೂ ವೈ ಎಂ ರಾಮ್‌ಗೋಪಾಲ್‌ ಅವರು ಅದ್ದೂರಿಯಾದ ಮೇಕಿಂಗ್‌ಗೆ ಯಾವುದೇ ರೀತಿಯಲ್ಲೂ ಕೊರತೆ ಮಾಡಿಲ್ಲವಂತೆ. 

47

ಹೀಗಾಗಿ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ ಎಂಬುದು ಚಿತ್ರತಂಡದ ನಂಬಿಕೆ. ಅದೇ ನಂಬಿಕೆ ಮತ್ತು ಉತ್ಸಾಹದಲ್ಲಿ ಚಿತ್ರವನ್ನು ನ.25ಕ್ಕೆ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.

57

ಸ್ಪೋರ್ಟ್‌್ಸ, ಪ್ರೀತಿ ಮತ್ತು ಫ್ಯಾಮಿಲಿ ಈ ಮೂರು ಅಂಶಗಳನ್ನು ಪ್ರಧಾನವಾಗಿಟ್ಟುಕೊಂಡು ರೂಪಿಸಿರುವ ಸಿನಿಮಾ ಇದು. ಒಬ್ಬ ನಟನಾಗಿ ತುಂಬಾ ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿರುವ ಕತೆ ಇದು. ಫಸ್ಟ್‌ ಲುಕ್‌ ಪೋಸ್ಟರ್‌ಗೆ ಸಾಕಷ್ಟುಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ಚಿತ್ರ ಕೂಡ ಇದೇ ರೀತಿ ಹೊಸತನದಿಂದ ಕೂಡಿರುತ್ತದೆ’ ಎನ್ನುತ್ತಾರೆ ನಟ ಗಣೇಶ್‌. 

67

ನಾನೀಗ ಮೆಂಟಲಿ ಸಿದ್ಧವಾಗಿದ್ದೇನೆ. ಪಾತ್ರಕ್ಕಾಗಿ ಶ್ರದ್ಧೆಯಿಂದ ದುಡಿಯುತ್ತೇನೆ. ನನ್ನ ಪಾಲಿಗೆ ಇದು ತುಂಬಾ ದೊಡ್ಡ ಜವಾಬ್ದಾರಿ. ಸೀರಿಯಲ್‌ನಲ್ಲಿಯೂ ಇದೇ ಕಮಿಟ್‌ಮೆಂಟ್‌ ಇಟ್ಟುಕೊಂಡಿದ್ದಕ್ಕೆ ಜನ ನನ್ನನ್ನು ಗುರುತಿಸಿದರು.'- ಮೇಘಾ ಶೆಟ್ಟಿ.

77

 ಸಿನಿಮಾದಲ್ಲಿಯೂ ಅಷ್ಟೇ ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ. ಇಷ್ಟುಚಿಕ್ಕ ಅನುಭವದಲ್ಲಿ ನನಗೆ ಅನ್ನಿಸಿದ್ದು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅದೇ ನಮ್ಮನ್ನು ಯಶಸ್ಸಿನ ಕಡೆಗೆ ತೆಗೆದುಕೊಂಡು ಹೋಗುತ್ತದೆ ಎನ್ನುವುದು ಎಂದಿದ್ದಾರೆ ಮೇಘಾ ಶೆಟ್ಟಿ

Read more Photos on
click me!

Recommended Stories