ದೇಸಿ ಅವತಾರದಲ್ಲಿ ದೀಪಾವಳಿಗೆ ಶುಭ ಕೋರಿದ ಕಾಟೇರ ಬೆಡಗಿ… ನಟಿಯ ಅಂದಕ್ಕೆ ಮನಸೋತ ಫ್ಯಾನ್ಸ್

Published : Oct 31, 2024, 10:04 PM ISTUpdated : Nov 01, 2024, 09:25 AM IST

ಕಾಟೇರ ಸಿನಿಮಾ ಮೂಲಕ ಸದ್ದು ಮಾಡಿದ ನಟಿ ಆರಾಧಾನಾ ರಾಮ್, ಇದೀಗ ತಮ್ಮ ಸ್ಟೈಲಿಶ್ ಲುಕ್ ಬಿಟ್ಟು ಟ್ರೆಡಿಷನಲ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಳ ಹೃದಯ ಗೆಲ್ಲುತ್ತಿದ್ದಾರೆ.  

PREV
17
ದೇಸಿ ಅವತಾರದಲ್ಲಿ ದೀಪಾವಳಿಗೆ ಶುಭ ಕೋರಿದ ಕಾಟೇರ ಬೆಡಗಿ… ನಟಿಯ ಅಂದಕ್ಕೆ ಮನಸೋತ ಫ್ಯಾನ್ಸ್

ಕಾಟೇರ ಸಿನಿಮಾದಲ್ಲಿ (Katera Film) ನಾಯಕಿಯಾಗಿ ನಟಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟ ಮಲಾಶ್ರೀ ಪುತ್ರಿ ಆರಾಧಾನಾ ರಾಮ್, ಮೊದಲನೇ ಸಿನಿಮಾ ಮೂಲಕವೇ ವೀಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಾಟೇರ ಸಿನಿಮಾದಿಂದ ನಟಿ ಸಾಕಷ್ಟು ನೇಮ್, ಫೇಮ್ ಜೊತೆಗೆ ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದ್ದಾರೆ. 

27

ಮೊದಲ ಸಿನಿಮಾ ರಿಲೀಸ್ ಆಗಿ ಸಾಕಷ್ಟು ಸಮಯ ಕಳೆದಿದ್ದರೂ ಸಹ ಇನ್ನೊಂದು ಸಿನಿಮಾ ಬಗ್ಗೆ ಇದುವರೆಗೆ ಯಾವುದೇ ಅಪ್ ಡೇಟ್ ನೀಡದೇ ಇರೋದ್ರಿಂದ, ಅಭಿಮಾನಿಗಳು ನಟಿ ಯಾವಾಗ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ? ಯಾರಿಗೆ ನಾಯಕಿಯಾಗಲಿದ್ದಾರೆ ಎಂದು ಕಾಯ್ತಿದ್ದಾರೆ. 
 

37

ಸದ್ಯಕ್ಕಂತೂ ನಟಿ ಸಿನಿಮಾಕ್ಕಿಂತ ಹೆಚ್ಚಾಗಿ ತಮ್ಮ ಸೋಶಿಯಲ್ ಮೀಡೀಯಾ (Social Media) ಮೂಲಕ ಹೆಚ್ಚು ಸದ್ದು ಮಾಡ್ತಿದ್ದಾರೆ. ಹೌದು, ಪ್ರತಿದಿನವೂ ನಟಿ ಒಂದೊಂದು ಪೋಸ್ಟ್ ಮೂಲಕ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. 
 

47

ಕಾಟೇರ ಸಿನಿಮಾ ಬಿಟ್ಟರೆ ನಟಿ ತುಂಬಾನೆ ಸಿಂಪಲ್ ಮತ್ತು ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿದ್ದು ತುಂಬಾನೆ ಕಡಿಮೆ. ಹೆಚ್ಚಾಗಿ ಗೌನ್, ಶಾರ್ಡ್ ಡ್ರೆಸ್, ಕ್ರಾಪ್ ಟಾಪ್ ಗಳಲ್ಲೆ ಮಿಂಚುತ್ತಿರುತ್ತಾರೆ ನಟಿ. ಸೀರೆ ಉಟ್ಟರೂ ಅದೂ ಕೂಡ ಸಖತ್ ಸ್ಟೈಲಿಸ್ಗ್ ಆಗಿರುವ ಬ್ಲೌಸ್ ಜೊತೆ ಧರಿಸ್ತಾರೆ. ಹಾಗಾಗಿಯೇ ಆರಾಧಾನಾ ಅವರನ್ನು ಕನ್ನಡದ ಸ್ಟೈಲಿಶ್ ನಟಿಯಾಗಿ ಗುರುತಿಸಲಾಗಿದೆ. 
 

57

ಇದೀಗ ನಟಿ ಆರಾಧನಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ದೀಪಾವಳಿ ಹಬ್ಬದ ವಿಶೇಷ ಫೋಟೊಗಳನ್ನು ಶೇರ್ ಮಾಡಿದ್ದು, ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸೀರೆಯುಟ್ಟು ತುಂಬಾ ಸಿಂಪಲ್ ಆಗಿ, ಹಾಗೂ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ ಆರಾಧನಾ. 
 

67

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ Wishing you a Diwali filled with laughter, love, and delicious sweets Happy Deepavali ಎಂದು ಶುಭ ಕೋರಿರುವ ಆರಾಧನಾ, ಬಿಳಿ ಸೀರೆಯುಟ್ಟು, ಕೆಂಪು ಬ್ಲೌಸ್ ಧರಿಸಿ, ದೀಪಗಳ ಮಧ್ಯೆ ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. 
 

77

ಆರಾಧನಾ ಹೊಸ ಫೋಟೊ ನೋಡಿ ಅಭಿಮಾನಿಗಳು ಮನಸೋತಿದ್ದಾರೆ. ಅಷ್ಟೇ ಅಲ್ಲ ಆದಷ್ಟು ಬೇಗ ಗುಡ್ ನ್ಯೂಸ್ ಕೊಡಿ ಮೇಡಂ. ಹೊಸ ವರ್ಷದಲ್ಲಿ ಹೊಸ ಮೂವಿಯನ್ನು ಅನೌನ್ಸ್ ಮಾಡುವ ಮೂಲಕ ನಮಗೆ ಸಿಹಿ ಸುದ್ದಿ ಕೊಡಿ ಎಂದಿದ್ದಾರೆ. ಇನ್ನು ನಟಿ ಯಾವಾಗ ಮುಂದಿನ ಸಿನಿಮಾದಲ್ಲಿ ನಟಿಸುತ್ತಾರೆ ಅನ್ನೋದನ್ನ ಕಾಡು ನೋಡಬೇಕು. 
 

click me!

Recommended Stories