ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Published : Oct 30, 2025, 10:52 AM ISTUpdated : Oct 30, 2025, 10:58 AM IST

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಟನ ಅಭಿಮಾನಿಗಳು ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಮನೋಜ್ ಎಂಬವರು ಆರೋಪಿಸಿದ್ದು, ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ.

PREV
14
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಟನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮನೋಜ್ ಎಂಬವರು ದೂರಿನಲ್ಲಿ ಆಗ್ರಹಿಸಿದ್ದಾರೆ. ಆದ್ರೆ ಬನಶಂಕರಿ ಠಾಣೆಯ ಪೊಲೀಸರು ಕೇವಲ ಎನ್‌ಸಿಆರ್ ದಾಖಲು ಮಾಡಿಕೊಂಡಿದ್ದಾರೆ.

24
ದೂರು ದಾಖಲು

ನಟ ಧ್ರುವ ಸರ್ಜಾ ಅವರ ಅಭಿಮಾನಿಗಳಿಂದ ಅಕ್ಕಪಕ್ಕದ‌ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಮನೋಜ್ ಆರೋಪಿಸಿದ್ದಾರೆ. ಈ ಸಂಬಂಧ ನಟ ಧ್ರುವ ಸರ್ಜಾ, ಅವರ ಮ್ಯಾನೇಜರ್ ಮತ್ತು ಅಭಿಮಾನಿಗಳ ವಿರುದ್ಧ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: ಬಾಲಿವುಡ್‌ ಪ್ರವೇಶಕ್ಕೆ ಸಿದ್ಧರಾದ 'ಕೆಡಿ' ಡೈರೆಕ್ಟರ್: ಅಜಯ್‌ ದೇವಗನ್‌ ಜೊತೆಗೆ ಜೋಗಿ ಪ್ರೇಮ್‌ ಸಿನಿಮಾ!

34
ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ

ನಟನ ಅಭಿಮಾನಿಗಳು ಪ್ರತಿನಿತ್ಯ ಬೈಕ್ ಗಳನ್ನ‌ ಅಡ್ಡಲಾಗಿ ಪಾರ್ಕ್ ಮಾಡುತ್ತಾರೆ. ಪ್ರತಿನಿತ್ಯ ಮನೆಯ ಮುಂದೆ ಧೂಮಪಾನ ಮಾಡುತ್ತಾರೆ. ಮನೆಯ ಗೋಡೆಗಳ ಮೇಲೆಯೇ ಉಗಿಯುತ್ತಾರೆ. ಇದ್ದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: 'ಅಪ್ಪ ನೀವು ಆಮೇಲೆ ಬನ್ನಿ..ನಾನು Gift ಕೊಡ್ತೀನಿ..' ಚಿರಂಜೀವಿ ಸರ್ಜಾ ಬರ್ತ್‌ಡೇ ದಿನ ಸಮಾಧಿಯ ಮುಂದೆ ಹೇಳಿದ ಪುತ್ರ ರಾಯನ್‌!

44
ದರ್ಶನ್ ಅಭಿಮಾನಿಗಳ ವಿರುದ್ಧ ಆರ್‌ಆರ್‌ ನಗರ ಪೊಲೀಸ್ ಠಾಣೆಯಲ್ಲಿ ದೂರು

ಇದೇ ರೀತಿಯಲ್ಲಿ ಈ ಹಿಂದೆ ನಟ ದರ್ಶನ್ ಅಭಿಮಾನಿಗಳ ವಿರುದ್ಧ ಆರ್‌ಆರ್‌ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಟನ ಬರ್ತ್ ಡೇ ಸಂದರ್ಭದಲ್ಲಿ ಅಭಿಮಾನಿಗಳಿಂದ ಗಲಾಟೆಯಾಗುತ್ತದೆ. ನಟನ ಅಭಿಮಾನಿಗಳು ಕುಡಿದು ಬಂದು ಟೆರೇಸ್, ಕಾಂಪೌಂಡ್, ಮೆಟ್ಟಿಲುಗಳ ಮೇಲೆ ಕುಳಿತು ಗಲಾಟೆ ಮಾಡುತ್ತಾರೆ ಎಂದ ದರ್ಶನ್ ಮನೆಯೆ ನೆರೆಹೊರೆಯವರು ದೂರು ದಾಖಲಿಸಿದ್ದರು.

Read more Photos on
click me!

Recommended Stories