ಕನ್ನಡ ಸಿನಿಮಾ ನಟರ ಲವ್ ಸ್ಟೋರಿಯಲ್ಲಿ ಜಗ್ಗೇಶ್ -ಪರಿಮಳ ಲವ್ ಸ್ಟೋರಿ ತುಂಬಾನೆ ವಿಭಿನ್ನ. ಇವರ ಲವ್ ಸ್ಟೋರಿ ಬಗ್ಗೆ ತಿಳಿಯದವರು ಯಾರೂ ಇಲ್ಲ. ಇದೀಗ ಪರಿಮಳ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಜಗ್ಗೇಶ್ ಅವರು ತಮ್ಮ ಲವ್ ಸ್ಟೋರಿಯ ಮಧುರ ನೆನಪುಗಳನ್ನು ಮತ್ತೆ ನೆನಪಿಸಿದ್ದಾರೆ.
ನವರಸ ನಾಯಕ ಜಗ್ಗೇಶ್ ಅವರ ಲವ್ ಸ್ಟೋರಿಯನ್ನು ತಿಳಿಯದೇ ಇರುವವರು ಯಾರೂ ಇರಲಾರರು. ಎಲ್ಲರಿಗೂ ಚಿರಪರಿಚಿತವಾದ ಲವ್ ಸ್ಟೋರಿ ಅವರದ್ದು. ಇದೀಗ ತಮ್ಮ ಪತ್ನಿ ಪರಿಮಳ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಜಗ್ಗೇಶ್ ಪ್ರೀತಿಸಿದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
26
ಪರಿಮಳ ಭೇಟಿಯಾಗಿದ್ದು ಯಾವಾಗ?
ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಂಡತಿ ಜೊತೆಗಿನ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿ, ತಮ್ಮ ಪ್ರೀತಿ, ಪತ್ನಿಯ ಸಾಧನೆಯನ್ನು ಬಿಚ್ಚಿಟ್ಟಿದ್ದಾರೆ. ಅವರು ಹೇಳಿದ ಕತೆ ಹೀಗಿದೆ. 1982 ಸೆಪ್ಟೆಂಬರ್ ನಲ್ಲಿ ಪರಿಮಳನ ಪ್ರಥಮ ಕಂಡದ್ದು,ಆಗ ಆಕೆಗೆ 14ವರ್ಷ. ಆಕೆಯನ್ನ ನೋಡಿದಾಗ ಪ್ರಥಮ ನೋಟಕ್ಕೆ ಇಷ್ಟವಾಗಿಬಿಟ್ಟಳು. 1984 ನಾನು ಅವಳ ಮದುವೆಯಾದೆ..ಏನು ಇಲ್ಲದ ನನ್ನ ನಂಬಿ ಬಂದವಳು ನನ್ನ ಕೇಳಿದ್ದು ಒಂದೆ ನನ್ನನ್ನು ಓದಿಸು ಎಂದು.
36
ಪತ್ನಿಯ ಬೆಂಬಲಕ್ಕೆ ನಿಂತ ಜಗ್ಗೇಶ್
ಪತ್ನಿ ಓದಿಸುವಂತೆ ಹೇಳಿದಾಗ ಮರುಮಾತಾಡದೆ ಆಗಬಹುದು ಎಂದು ಮಾತು ಕೊಟ್ಟು ಪಿಯುಸಿ ಗೆ ಈಸ್ಟ್ ವೆಸ್ಟ್ ಕಾಲೇಜಿಗೆ ಸೇರಿಸಿದೆ. ಅದ್ಭುತ ಅಂಕ ಪಡೆದು ಬಿಎಂಎಸ್ ಗೆ ಇಂಜನಿಯರಿಂಗ್ ಸೇರಿಸಿದೆ. ಅಲ್ಲಿ ಪಧವಿಪಡೆದು ನಂತರ ಅನೇಕ ವಿಭಾಗದಲ್ಲಿ ಓದಿ ಈಗ ಸಾವಿರಾರು ಜನರಿಗೆ ಸಕ್ಕರೆ ಖಾಯಿಲೆ ಹಾಗು ತೂಕ ಇಳಿಸುವ ಕಾಯಕದಲ್ಲಿ ಹೆಸರು ಮಾಡುತ್ತಿದ್ದಾಳೆ..
ಶ್ರೀ ನರೇಂದ್ರಮೋದಿ ರವರು ಈಕೆಯ ಸಾಧನೆ ಕೇಳಿ ಶ್ರೀಅನ್ನದ ಮೇಲೆ ಪುಸ್ತಕ ಬರೆಯುವಂತೆ ಪ್ರೇರೇಪಿಸಿದರು ಅದನ್ನು ಪೂರ್ಣಮಾಡಿ ಬಿಡುಗಡೆ ಮಾಡಿದಳು..ಇಷ್ಟು ಸಾಲದಂತೆ ಈಗ ಸೀನಿಯರ್ಸ್ ಶೂಟಿಂಗ್ ಪರಿಣಿತಿ ಪಡೆಯುತ್ತಿದ್ದಾಳೆ.. ಸಾಧನೆಗೆ ವಯಸ್ಸಿಲ್ಲಾ ಬೇಕಿರುವುದು ಮನಸ್ಸು ಮಾತ್ರ ಎಂದು ನಿರೂಪಿಸುತ್ತಿದ್ದಾಳೆ.
56
14ರ ತರುಣಿಗೆ ಇಂದು "58"ರ ಸಂಭ್ರಮ
ಆಕೆಯ ಬಗ್ಗೆ ಈ ಬರವಣಿಗೆಯ ಕಾರಣ ನಾನು ಭೇಟಿ ಮಾಡಿದ ಅಂದಿನ 14ರ ತರುಣಿಗೆ ಇಂದು "58"ರ ಸಂಭ್ರಮ. ಪತಿಯಾಗಿ ಅವಳಿಗೆ ಪ್ರೀತಿಯಿಂದ ಹುಟ್ಟುಹಬ್ಬದ ಶುಭಾಶಯಗಳು ಎನ್ನುತ್ತಾ ಪ್ರೀತಿಯ ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ ಜಗ್ಗೇಶ್
66
ಜಗ್ಗೇಶ್ ಬೆನ್ನೆಲುಬು ಪರಿಮಳ
ಪರಿಮಳ ಅವರು ಮದುವೆಯಾಗಿ ಬಂದಾಗ ಅವರ ವಯಸ್ಸು ಕೇವಲ 16 ಆಗಿತ್ತು. ಮನೆಯವರ ವಿರೋಧದ ನಡುವೆ ಕೋರ್ಟ್ ಮೆಟ್ಟಿಲೇರಿ ಮದುವೆಯಾದ ಈ ಜೋಡಿ ಇಂದಿನ್ ಅಯುವ ಜನತೆಗೆ ಪ್ರೀತಿಯಲ್ಲಿ ಪ್ರೇರಣೆ ನೀಡುತ್ತಾರೆ. ಈ ಜೋಡಿಗೆ ಇಬ್ಬರು ಮಕ್ಕಳು ಹಾಗೂ ಒಬ್ಬ ಮರಿ ಮೊಮ್ಮಗ ಕೂಡ ಇದ್ದಾನೆ.