ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅನುಷಾ ರಾವ್, ರಾಧಿಕಾ ಪಾತ್ರದಲ್ಲಿ ಮಿಂಚಿದ್ದಾರೆ.
ಸಿಂಪಲ್ ಸುನಿ ನಿರ್ದೇಶನದ 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟವರು.
ಅನುಷಾ ರಾವ್ ಅವರ ಪತಿ ಮನೋಹರ್ ಜೋಶಿ ಕನ್ನಡ ಚಿತ್ರರಂಗದಲ್ಲಿ ಸಿನಿಮಾಟೋಗ್ರಾಫರ್ ಆಗಿದ್ದಾರೆ.
ಇಬ್ಬರು ಸ್ನೇಹಿತರಾಗಿದ್ದು ಆನಂತರ ಮದುವೆಯಾದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟು 8 ವರ್ಷಗಳು ಕಳೆದಿದೆ.
ಎಂಎಸ್ಸಿ ಸೈಕಾಲಜಿ ಪದವೀಧರೆ ಆಗಿರುವ ಅನುಷಾ ಈ ಹಿಂದೆ ಕೌನ್ಸಿಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
2015ರಲ್ಲಿ ದುರ್ಗಾ ಧಾರಾವಾಹಿಯಲ್ಲಿ ನಟಿಸಿದ್ದಾರೆ.
'ಚಿತ್ರಕಥಾ','ಮನರೂಪ','ನಕ್ಷೆ','ಮಹಾ ಕರ್ಮ' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಅನುಷಾ ರಾವ್‌ಗೆ ಖಳನಾಯಕಿ ಪಾತ್ರಗಳೆಂದರೆ ತುಂಬಾನೇ ಇಷ್ಟವಂತೆ.
Suvarna News