ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಸೇರಿ 7 ಜನರಿಗೆ ನೀಡಿದ್ದ ಜಾಮೀನು ಕ್ಯಾನ್ಸಲ್ ಆಗಿತ್ತು. ಈಗ ಕೇಸ್ ಸಾಬೀತಾದರೆ ಎಷ್ಟು ವರ್ಷಗಳ ಕಾಲ ಶಿಕ್ಷೆ ಆಗುವುದು? ಈ ಕೇಸ್ ಯಾವಾಗ ಬಗೆಹರಿಯುವುದು ಎಂಬ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್ ಮಾತನಾಡಿದ್ದಾರೆ.
ಎಸ್ ಕೆ ಉಮೇಶ್ ಅವರು ಫಸ್ಟ್ ಡೇ ಫಸ್ಟ್ ಶೋ ಯುಟ್ಯೂಬ್ ಚಾನೆಲ್ ಜೊತೆ ಮಾತನಾಡುವಾಗ, “ಚಿತ್ರದುರ್ಗ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣ ವಿಶೇಷವಾಗಿದೆ. ಚಿತ್ರದುರ್ಗದಿಂದ ಕರೆಸಿಕೊಂಡಿದ್ದು ಕಿಡ್ನ್ಯಾಪ್ ಅಂತ ಯೋಚನೆ ಬಂದಿರಲಿಲ್ಲ. ಸಿಕ್ಕಾಪಟ್ಟೆ ಹೊಡೆದಾಗ ಕೊಲೆ ಆಗತ್ತೆ ಎನ್ನೋದು ಗೊತ್ತಿರಲಿಲ್ಲ. ಕೊಲೆ ಆಯ್ತು, ಬಾಲಿಶವಾಗಿ ಅದನ್ನು ರಾಜಕಾಲುವೆಯಲ್ಲಿ ಬಿಸಾಕಿದ್ದರು” ಎಂದು ಎಸ್ ಕೆ ಉಮೇಶ್ ಹೇಳಿದ್ದಾರೆ.
26
ಕಾನೂನು ಗೊತ್ತಿರಲಿಲ್ಲ..
“ಚಿತ್ರದುರ್ಗ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣ ವಿಶೇಷವಾಗಿದೆ. ಚಿತ್ರದುರ್ಗದಿಂದ ಕರೆಸಿಕೊಂಡಿದ್ದು ಕಿಡ್ನ್ಯಾಪ್ ಅಂತ ಯೋಚನೆ ಬಂದಿರಲಿಲ್ಲ. ಸಿಕ್ಕಾಪಟ್ಟೆ ಹೊಡೆದಾಗ ಕೊಲೆ ಆಗತ್ತೆ ಎನ್ನೋದು ಗೊತ್ತಿರಲಿಲ್ಲ. ಕೊಲೆ ಆಯ್ತು, ಬಾಲಿಶವಾಗಿ ಅದನ್ನು ರಾಜಕಾಲುವೆಯಲ್ಲಿ ಬಿಸಾಕಿದ್ದರು” ಎಂದು ಎಸ್ ಕೆ ಉಮೇಶ್ ಹೇಳಿದ್ದಾರೆ.
36
ಯಾಕೆ ಜಾಮೀನು ರದ್ದಾಯ್ತು?
“ಸೋಶಿಯಲ್ ಮೀಡಿಯಾ ಒಂಥರ ತಿಪ್ಪೆ ಇದ್ದಂಗೆ. ಅಲ್ಲಿ ಏನೇನೋ ಮಾತಾಡ್ತಾರೆ. ಈ ಥರ ಕಾಮೆಂಟ್ ಮಾಡಿದಾಗ ಪೊಲೀಸರಿಗೆ ತಿಳಿಸಬೇಕಿತ್ತು, ಕಾನೂನು ಕೈಗೆ ಕೊಡಬಾರದಿತ್ತು. ದರ್ಶನ್ ಅವರು ಬೇರೆ ಬೇರೆ ಜೈಲಿಗೆ ಹೋದರು. ಮೆಡಿಕಲ್ ಲೀವ್ ಮೇಲೆ ಆಚೆ ಬಂದರು. ಸರ್ಕಾರ ಹಾಗೂ ಕೋರ್ಟ್ ಮಧ್ಯೆ ನಡೆಯುತ್ತಿರೋ ಪ್ರಕರಣ ಇದು. ಜೈಲಿನಲ್ಲಿ ಇವರ ವರ್ತನೆ ವ್ಯತಿರಿಕ್ತವಾಗಿ ಕಂಡಿದ್ದರಿಂದ ಜಾಮೀನು ರದ್ದಾಗಿದೆ” ಎಂದು ಎಸ್ ಕೆ ಉಮೇಶ್ ಹೇಳಿದ್ದಾರೆ.
“ಜೈಲಿನಲ್ಲಿ ಕಾಫಿ ಕುಡಿಯೋದು, ಮಾತಾಡೋದು ನೋಡುತ್ತಿರುತ್ತೇವೆ. ಜೈಲಿನಲ್ಲಿ ಮ್ಯಾನೇಜ್ ಮಾಡೋದು ಪ್ರಪಂಚದಲ್ಲಿ ಅತ್ಯಂತ ಕಷ್ಟದ ಕೆಲಸ. ಜೈಲಿನಲ್ಲಿ ನಡೆದ ವಿಷಯಗಳೆಲ್ಲವೂ ಹೈಕೋರ್ಟ್‌ಗೆ ಗೊತ್ತಾಗಿದೆ. ಮೆಡಿಕಲ್ ಲೀವ್ ಮೇಲೆ ಬಂದು ಆಪರೇಶನ್ ಮಾಡಿಸಿಕೊಳ್ಳದಿರೋದು ಕೋರ್ಟ್‌ಗೆ ಗೊತ್ತಾಗಿರುತ್ತದೆ. ಇಂದು ಸೋಶಿಯಲ್ ಮೀಡಿಯಾ ಪ್ರಬಲವಾಗಿದ್ದಕ್ಕೆ, ಕೋರ್ಟ್ ಕೂಡ ತುಂಬ ಗಮನ ಕೊಡುತ್ತಿರುತ್ತದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಅಂತ ಹೇಳ್ತಾರೆ. ಇನ್ನು ಜಾಮೀನು ಕೊಡೋಕೆ ಕೋರ್ಟ್ ಅನುಮತಿ ಕೊಡೋದು ಕಷ್ಟ. ಈಗಾಗಲೇ ತಪ್ಪಾಗಿದೆ” ಎಂದಿದ್ದಾರೆ.
56
ಕೇಸ್ ಮುಗಿಯಲು ಎಷ್ಟು ದಿನ ಬೇಕು?
“ಎಷ್ಟೋ ಸಾಕ್ಷಿಗಳಿದ್ದರೂ ಕೂಡ ಆರಾಮಾಗಿ ಜಾಮೀನು ಸಿಕ್ಕ ಪ್ರಕರಣಗಳನ್ನು ನೋಡಿದ್ದೇವೆ. ಈ ಕೇಸ್‌ನಲ್ಲಿ ಸ್ವಲ್ಪ ಜಾಮೀನು ಸಿಗೋದು ಕಷ್ಟ ಇದೆ. ಚಾರ್ಜ್‌ಶೀಟ್ ಆಗಿ ತುಂಬ ದಿನಗಳು ಆಗಿವೆ. ಬೇಗ ಟ್ರಯಲ್ ಮಾಡಿದರೆ ಆರು ತಿಂಗಳೊಳಗಡೆ ಈ ಕೇಸ್ ಮುಗಿಯಬೇಕು. ಸಾಕ್ಷಿದಾರಗಳು ಏನು ಹೇಳ್ತಾರೆ ಎನ್ನೋದನ್ನು ನೋಡಬೇಕು. ಸಾಕ್ಷಿದಾರರ ವಿರುದ್ಧ ಏನೂ ಬರೆಯೋಕೆ ಆಗದು” ಎಂದಿದ್ದಾರೆ.
66
ಶಿಕ್ಷೆ ಆದರೆ?
“ಕೇಸ್ ಸಾಬೀತಾದರೆ ಜೀವಾವಧಿ ಶಿಕ್ಷೆ ಆಗುತ್ತದೆ. ಸಾಕ್ಷಿಗಳ ಮೇಲೆ ಕೆಲವೊಮ್ಮೆ ಶಿಕ್ಷೆಯ ಅವಧಿ ಕೂಡ ಹೇಳಲಾಗುತ್ತದೆ. ಈ ಕೇಸ್ ಸಾಬೀತಾಗಿಲ್ಲ ಅಂದ್ರೆ ಹೊರಗಡೆ ಬರುತ್ತಾರೆ” ಎಂದು ಹೇಳಿದ್ದಾರೆ.