ಸಂಭಾವನೆ ಪಡೆಯದೆ ಕೃಷಿ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್

First Published Mar 5, 2021, 6:01 PM IST

ಬೆಂಗಳೂರು(ಮಾ. 05) ಕೃಷಿ ರಾಯಭಾರಿಯಾಗಿ ದರ್ಶನ್ ಅಧಿಕಾರ ಸ್ವೀಕರಿಸಿದ್ದ್ದಾರೆ. ದರ್ಶನ್ ಕೇವಲ ಅವರು ನಟರು ಮಾತ್ರವಲ್ಲ ಅವರು ಕೃಷಿ ಮತ್ತು ಪಶುಸಂಗೋಪನೆಯಲ್ಲಿ ತೊಡಗಿದ್ದಾರೆ. ರೈತ ನಾಯಕನಾಗಿ ಹೋರಾಡಿ ಇವತ್ತು ನಾಲ್ಕು ಬಾರಿ ಸಿಎಂ ಆಗಿರುವ ಬಿಎಸ್ ವೈ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಖುಷಿಯಾಗಿದೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.

ದರ್ಶನ್ ಒಬ್ಬ ಹೃದಯ ಶ್ರೀಮಂತಿಕೆಯ ವ್ಯಕ್ತಿ. ಬಡವರು ಹಾಗೂ ರೈತರ ಬಗ್ಗೆ ದರ್ಶನ್ ಗೆ ತುಂಬಾ ಕಳಕಳಿ ಇದೆ. ಒಂದೂವರೆ ತಿಂಗಳ ಹಿಂದೆ ಅವರ ಫಾರ್ಮ್ ಗೆ ಹೋಗಿದ್ದೆ. ಅದು ಒಂಥರಾ ಮಿನಿ ಝೂ ತರ ಇದೆಎಂದು ತಿಳಿಸಿದರು.
undefined
ಸುಮಾರು 150 ಜನಕ್ಕೆ ಕೆಲಸ ಕೊಟ್ಟಿದ್ದಾರೆ. ರೈತರ ಕಾರ್ಯಕ್ರಮದ ಬಗ್ಗೆ ಹೇಳಿದ್ದೆ.ನಾನು ಒಂದು ದಿನ ಬರ್ತೀನಿ ಅಂತಾ ಹೇಳಿದ್ದರು ಎಂದು ನೆನೆಸಿಕೊಂಡರು.
undefined
ಬೇರೆ ನಟರು ದೊಡ್ಡ ದೊಡ್ಡ ಕಂಪನಿಗಳಿಗೆ ಕೋಟಿ ಕೊಟಿ ಪಡೆದು ರಾಯಭಾರಿಯಾಗ್ತಾರೆ.ಆದ್ರೆ ನಮ್ಮ ಇಲಾಖೆಗೆ ದರ್ಶನ್ ಯಾವುದೇ ಸಂಭಾವನೆ ಪಡೆಯದೇ ಉಚಿತವಾಗಿ ರಾಯಭಾರಿಯಾಗಿದ್ದಾರೆ ಎಂದು ಕಾರ್ಯಕ್ರಮದಲ್ಲಿ ದರ್ಶನ್ ರನ್ನ ಹಾಡಿ ಹೊಗಳಿದರು.
undefined
ಮಾರ್ಚ್ 11 ಕ್ಕೆ ರಾಬರ್ಟ್ ತೆರೆಕಾಣುತ್ತಿದ್ದು ಶುಭಾಶಯ ಹೇಳುತ್ತಿದ್ದೇನೆ ಎಂದರು.
undefined
ಹಸಿರು ಶಾಲು, ಮೈಸೂರು ಪೇಟಾ ಹಾಗೂ ನೇಗಿಲು ಕೊಟ್ಟು ದರ್ಶನ್ ರನ್ನು ಅಭಿನಂದಿಸಲಾಯಿತು.
undefined
ಪ್ರಾಣಿ ಪ್ರೀತಿಗೆ ದರ್ಶನ್ ಹೆಸರು ವಾಸಿ.
undefined
ಹಸು ಮತ್ತು ಕುದುರೆಗಳನ್ನು ಸಾಕಿ ಸಲಹುತ್ತಿದ್ದಾರೆ. ದರ್ಶನ್ ಅವರ ಸಿನಿಮಾಗಳಲ್ಲಿಯೂ ಅನ್ನದಾತನ ಪರವಾದ ದೃಶ್ಯಗಳು ಇರುತ್ತವೆ.
undefined
ಪೋಟೋಗ್ರಫಿಯಲ್ಲಿಯೂ ವಿಶೇಷ ಆಸಕ್ತಿ ಇರುವ ಚಾಲೆಂಜಿಂಗ್ ಸ್ಟಾರ್ ತಮ್ಮದೆ ತಂಡ ಕಟ್ಟಿಕೊಂಡು ಅರಣ್ಯ ಸುತ್ತುತ್ತಾರೆ. ವಾಹನಗಳ ಕ್ರೇಜ್ ನಲ್ಲಿಯೂ ದರ್ಶನ್ ಕಡಿಮೆ ಇಲ್ಲ. ಅವರ ಸಂಗ್ರಹದಲ್ಲಿ ವಿಭಿನ್ನ ಕಾರುಗಳಿವೆ.
undefined
click me!