ಮೆ ತೋ ತೇರಿ ಜೋಗನಿಯಾ ಎನ್ನುತ್ತಲೇ ಇಂಟರ್ನೆಟ್ ಬಿಸಿ ಹೆಚ್ಚಿಸಿದ ಚ್ರೈತ್ರಾ ಆಚಾರ್

Published : Apr 01, 2024, 05:47 PM IST

ಸ್ಯಾಂಡಲ್ ವುಡ್ ನ ಮೋಸ್ಟ್ ಬೋಲ್ಡ್ ಆಂಡ್ ಬ್ಯೂಟಿಫುಲ್ ನಾಯಕಿಯಾಗಿ ಗುರುತಿಸಿಕೊಂಡಿರುವ ನಟಿ ಚೈತ್ರಾ ಆಚಾರ್, ಇದೀಗ ಮತ್ತೆ ತಮ್ಮ ಹೊಸ ಫೋಟೋ ಶೂಟ್ ಮೂಲಕ ಕಿಚ್ಚು ಹಚ್ಚಿದ್ದಾರೆ.   

PREV
18
ಮೆ ತೋ ತೇರಿ ಜೋಗನಿಯಾ ಎನ್ನುತ್ತಲೇ ಇಂಟರ್ನೆಟ್ ಬಿಸಿ ಹೆಚ್ಚಿಸಿದ ಚ್ರೈತ್ರಾ ಆಚಾರ್

ಕನ್ನಡ ಚಿತ್ರರಂಗದಲ್ಲಿ ಸಕತ್ತಾಗಿ ಮಿಂಚುತ್ತಿರುವ ಬೋಲ್ಡ್ ಮತ್ತು ಸುಂದರಿ ನಟಿ ಚೈತ್ರಾ ಆಚಾರ್ (Chaitra Achar). ಇವರು ವಿಭಿನ್ನ ಶೇಡ್ ಗಳುಳ್ಳ ಪಾತ್ರಗಳನ್ನು ಮಾಡುವ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. 
 

28

ಕನ್ನಡದಲ್ಲಿ ಬೆರಳೆಣಿಕೆಯಷ್ಟೇ ಚಿತ್ರಗಳನ್ನು ಮಾಡಿರುವ ಚೈತ್ರಾ ಮಾಡಿದ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸುವ ಮೂಲಕ, ಕನ್ನಡದ ಭರವಸೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಟೋಬಿ (Toby) ಮತ್ತು ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಯಲ್ಲಿ ಇವರ ಪಾತ್ರ ಮರೆಯಲು ಸಾಧ್ಯವಿಲ್ಲದಂತದ್ದು. 
 

38

ಗಾಯಕಿಯಾಗಿ ಮತ್ತು ನಟಿಯಾಗಿ ಕನ್ನಡಿಗರಿಗೆ ಚಿರಪರಿಚಿತರಾಗಿರುವ ಚೈತ್ರಾ ಆಚಾರ್ ಕನ್ನಡದ ಬೋಲ್ಡ್ ನಟಿ ಅಂದ್ರೆ ತಪ್ಪಾಗಲ್ಲ, ಇವರ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಬೋಲ್ಡ್ ಆಗಿ ಫೋಟೋ ಶೂಟ್ (bold photoshoot) ಮಾಡಿ ಶೇರ್ ಮಾಡುವ ಮೂಲಕ ಕಿಚ್ಚು ಹಚ್ಚುತ್ತಿರುತ್ತಾರೆ. 
 

48

ಈ ಬಾರಿಯೂ ಚೈತ್ರಾ ವಿಭಿನ್ನ ಫೊಟೋಶೂಟ್ ಮಾಡಿ ಶೇರ್ ಮಾಡುವ ಮೂಲಕ ಇಂಟರ್ನೆಟ್ ನ ಬಿಸಿ ಮತ್ತಷ್ಟು ಹೆಚ್ಚಿಸಿದ್ದಾರೆ ಅಂದ್ರೆ ತಪ್ಪೇನು ಇಲ್ಲ. ಕಚ್ಚೆಯಂತೆ ಕಟ್ಟಿದ ಬಿಳಿ ಸೀರೆ, ಮೇಲೊಂದು ಕುಪ್ಪಸ, ಹಿನ್ನೆಲೆಯಲ್ಲಿ ಹಳೆ ಕಾಲದ ಅರಮನೆಯ ಸೆಟ್ ನಂತೆ ಕಾಣಿಸುತ್ತಿದೆ. 
 

58

ಐತಿಹಾಸಿಕ ಪ್ರೇಮಕತೆಗಳಿಗೆ ಹೆಸರುವಾಸಿಯಾಗಿರುವ ಸಂಜಯ್ ಲೀಲಾ ಬನ್ಸಾಲಿಯವರ ಸಿನಿಮಾದ ನಾಯಕಿಯರಿಂದ ಪ್ರೇರಣೆ ಪಡೆದು ಫೋಟೋ ಶೂಟ್ ಮಾಡಿಸಿದಂತಿದೆ. ಒಂದೊಂದು ಭಂಗಿಯಲ್ಲಿ ತೆಗೆದ ಫೋಟೋಗಳು ಅಭಿಮಾನಿಗಳ ಮನಸು ಗೆದ್ದಿದೆ. 
 

68

ಮೆ ತೋ ತೇರಿ ಜೋಗನಿಯಾ ತೂ ಜೋಗ್ ಲಗಾದೇರೋ ಎಂದು ಬರೆದುಕೊಂಡು ಒಂದಷ್ಟು ಫೋಟೋಗಳನ್ನು ಶೇರ್ ಮಾಡಿರುವ ಚೈತ್ರಾ ಆಚಾರ್ ಗೆ ರುಕ್ಮಿಣಿ ವಸಂತ್ (Rukmini Vasanth), ಸಾನ್ವಿ ಸುದೀಪ್, ಶ್ರದ್ಧಾ ಶ್ರೀನಾಥ್, ಶ್ರುತಿ ಹರಿಹರನ್ ಸೇರಿ ಹಲವು ನಟಿಯರು ಕಾಮೆಂಟ್ ಮಾಡಿ ಅದ್ಭುತ ಫೋಟೋ ಶೂಟ್ ಎಂದಿದ್ದಾರೆ. 
 

78

ಮಲೆಯಾಳಿ ಸಂಪ್ರದಾಯದಂತೆ ಧೋತಿ ಬ್ಲೌಸ್ ಧರಿಸಿ ಮಾದಕ ಭಂಗಿಗಳ ಮೂಲಕ ಪೋಸ್ ನೀಡಿದ ಚೈತ್ರಾ ಆಚಾರ್ ಫೋಟೋ ಶೂಟ್ ಗೆ ಬಳಸಿದ ಕತ್ತಲು ಮತ್ತು ಗೋಲ್ಡನ್ ಲೈಟ್ ನಿಂದಾಗಿ ಮತ್ತಷ್ಟು ಮಾದಕವಾಗಿ ಕಾಣಿಸ್ತಿದ್ದಾರೆ. ಇವರ ಮೋಹಕ ಲುಕ್ ಗೆ ಸೋತವರೇ ಹೆಚ್ಚು. 
 

88

ಪಡ್ಡೆಗಳ ಮನಸು ಗೆದ್ದಿರುವ ಚೈತ್ರಾ ಆಚಾರ್ ಅವರ ಈ ಅಂದವಾದ ಲುಕ್ ಹಿಂದೆ ಹಲವರ ಪರಿಶ್ರಮವೂ ಇದೆ. ರಮ್ಯಾ ಸೇವಂತಿಗೆ ಮೇಕೋವರ್ ಮಾಡಿದ್ದಾರೆ. ಸಚಿನ್ ಥಾಮಸ್ ಈ ಅಧ್ಬುತ ಫೋಟೊಗ್ರಾಫಿ ಮಾಡಿದ್ದಾರೆ. ಇನ್ನು ನಾದಾ ನಮೃತಾ ನಟರಾಜನ್‌ ವಿನ್ಯಾಸದಲ್ಲಿ ಉಡುಗೆಯಲ್ಲಿ ಚೈತ್ರಾ ಆಚಾರ್ ಮಿಂಚುತ್ತಿದ್ದಾರೆ. 
 

Read more Photos on
click me!

Recommended Stories