ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ 2008ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸೋನು ಗೌಡ ತಮ್ಮ ವಿಭಿನ್ನ ನಟನೆ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ.
26
ನಟಿ ಭಾವನಾ ರಾವ್ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆಸಿದ ಚಾಟ್ ಶೋನಲ್ಲಿ ಸೋನು ಗೌಡ ಚಿತ್ರರಂಗದಲ್ಲಿ ಪ್ರತಿಯೊಬ್ಬರೂ ಎದುರಿಸುವ ಬಾಡಿ ಶೇಮಿಂಗ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
36
'ನನಗೆ ತುಂಬಾ ಜನ ಬಾಡಿ ಶೇಮಿಂಗ್ ಮಾಡಿದ್ದಾರೆ. ನಮ್ಮ ಸಿನಿಮಾದವರು ಹೇಗೆ ಅಂದ್ರೆ ಯಾಕಿಷ್ಟು ದಪ್ಪ ಆಗಿದ್ಯಾ ಅಂತಾರೆ ಸಣ್ಣ ಆದರೆ ಯಾಕೆ ಇಷ್ಟೊಂದು ಸಣ್ಣ ಆಗಿದ್ಯಾ ಅಂತಾರೆ.' ಎಂದು ಸೋನು ಮಾತನಾಡಿದ್ದಾರೆ.
46
'ನೀನು ನೋಡಲು ಚೆನ್ನಾಗಿದ್ಯಾ ಎಂದು ಯಾರೂ ಯಾವತ್ತೂ ಹೇಳಿಲ್ಲ. ಇನ್‌ಸ್ಟಾಗ್ರಾಂನಲ್ಲಿ ನನ್ನ ಪೋಸ್ಟ್‌ಗೆ ಬರುತ್ತಿರುವ ಕಾಮೆಂಟ್‌ಗಳನ್ನು ನೋಡಿದ ಮೇಲೆ ತುಂಬಾ ಖುಷಿ ಆಗುತ್ತಿರುವುದು.' ಎಂದು ಸೋನು ಹೇಳಿದ್ದಾರೆ.
56
'ಅದಕ್ಕೂ ಮೊದಲು ನೀವು ಸ್ವಲ್ಪ ಹೀಗಿರಬೇಕು ಅಂತ ಹೇಳಿ ಹೇಳಿ ತುಂಬಾ conciouss ಆಗುತ್ತಿದ್ದೆ ಯಾವ ಬಟ್ಟೆ ಹಾಕಿಕೊಳ್ಳುವುದಕ್ಕೂ ಹಿಂಸೆ ಆಗುತ್ತಿತ್ತು. ಬಟ್ಟೆ ನೋಡುತ್ತಿದ್ದಂತೆ ನನಗೆ ಇದು ಇಷ್ಟ ಆಗಲ್ಲ ಅನ್ಸುತ್ತೆ ಅಂದುಕೊಳ್ಳುತ್ತಿದ್ದೆ' ಎಂದಿದ್ದಾರೆ ಸೋನು.
66
'ವರ್ಷಗಳು ಕಳೆಯುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಜನರನ್ನು ನೋಡಿ ಸ್ಫೂರ್ತಿಯಾಗುತ್ತಿತ್ತು. ಆಮೇಲೆ ಬಾಡಿ ಶೇಮಿಂಗ್ ಅನ್ನೋದು ಒಂದು ಸಿನಿಮಾ ಹಿಟ್ ಕೊಡುವವರೆಗೂ ಅಷ್ಟೆ ಆಮೇಲೆ ಇದೆಲ್ಲಾ ಲೆಕ್ಕ ಬರುವುದಿಲ್ಲ' ಎಂದು ಸೋನು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.