ಮುತ್ತಪ್ಪ ರೈ ಸಾವಿನ ಬೆನ್ನಲ್ಲೇ ಜಯರಾಜ್ ಪುತ್ರನ ಫೇಸ್ಬುಕ್ ಪೋಸ್ಟ್ ವೈರಲ್!

Suvarna News   | Asianet News
Published : May 17, 2020, 04:22 PM IST

ಒಂದು ಕಾಲದ ಮಾಜಿ ಡಾನ್ , ಭೂಗತ ಲೋಕದ ಅಧಿಪತಿಯಾಗಿದ್ದ ಮುತ್ತಪ್ಪ ರೈ ಅವರು  ಕ್ಯಾನ್ಸರ್ ರೋಗದಿಂದಾಗಿ ಸುಮಾರು ಎರಡು ವರ್ಷಗಳ ಕಾಲ ಸಾವಿನೊಟ್ಟಿಗೆ ಹೋರಾಟ ಮಾಡಿ ದಿನಾಂಕ 15-05-2020 ಶುಕ್ರವಾರ ಬೆಳಗಿನಜಾವ ನಿಧನರಾಗಿದ್ದಾರೆ.ಅವರ ನಿಧನದ  ಬಳಿಕ ಮತ್ತೊಬ್ಬ ಡಾನ್ ಜಯರಾಜ್ ಅವರ ಪುತ್ರ ಸಾಮಾಜಿಕ ಮಾಧ್ಯಮ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ಪೋಸ್ಟ್ ಒಂದು ಇದೀಗ ಚರ್ಚೆಯ ವಸ್ತುವಾಗಿ ವೈರಲ್ ಆಗುತ್ತಿದೆ. 

PREV
111
ಮುತ್ತಪ್ಪ ರೈ ಸಾವಿನ ಬೆನ್ನಲ್ಲೇ ಜಯರಾಜ್ ಪುತ್ರನ ಫೇಸ್ಬುಕ್ ಪೋಸ್ಟ್ ವೈರಲ್!

ಮುತ್ತಪ್ಪ ರೈ ಒಬ್ಬ ದೊಡ್ಡ ಡಾನ್ ಆಗಿ ಈ ಮಟ್ಟಕ್ಕೆ ಬೆಳೆಯಲು ಕಾರಣರಾದ ಜಯರಾಜ್‌ ಅವರ ಕೊಲೆಯ ಘಟನೆ ಇನ್ನೂ ಹಲವು ಜನರ ನೆನಪಿನಿಂದ ಮಾಸಿಲ್ಲ.ಇಂದಿಗೂ ಅಲ್ಲಲ್ಲಿ ಆ ಘಟನೆ ಬಗ್ಗೆ ಮಾತುಗಳು,ಚರ್ಚೆಗಳು ಆಗುತ್ತಲೇ ಇರುತ್ತವೆ.ಸಿನಿಮಾರಂಗದಲ್ಲಿ ಹೆಚ್ಚು ಚಾಲ್ತಿಯಲ್ಲಿರುತ್ತದೆ ಈ ಹೆಸರು. 

211

ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ಜಯರಾಜ್ ಪುತ್ರ ಅಜಿತ್ ಜಯರಾಜ್ ತಮ್ಮ ಒಂದು ಫೇಸ್ಬುಕ್ ಪೋಸ್ಟ್ ಮೂಲಕ ಸುದ್ದಿಯಲ್ಲಿದ್ದಾರೆ. 

311

ಮುತ್ತಪ್ಪ ರೈ ನಿಧನರಾಗುವ ಕೆಲವೇ ಗಂಟೆಗಳ ಮುಂಚೆ ಅವರ ಆಜನ್ಮ ವೈರಿ ಜಯರಾಜ್ ಪುತ್ರ ಅಜಿತ್ ಜಯರಾಜ್  ಮೇ 14 ರ ರಾತ್ರಿ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ವಿಷಯ ಈಗ ಎಲ್ಲೆಡೆ ಸಡ್ಡು ಮಾಡುತ್ತಿದೆ. 

411

ಜಯರಾಜ್ ಪುತ್ರ ಅಜಿತ್ ಜಯರಾಜ್ ಅವರು ಫೇಸ್‌ಬುಕ್‌ನಲ್ಲಿ ಜಯರಾಜ್ ಅವರ ಚಿತ್ರವೊಂದನ್ನು ಹಂಚಿಕೊಂಡು, 'ಕೆಲವೊಮ್ಮೆ ರಾಜ ಮೂರ್ಖರಿಗೆ ನೆನಪಿಸಬೇಕಾಗುತ್ತದೆ, ತಾನೇಕೆ ರಾಜ ಎಂದು' ಎಂದು ಅಜಿತ್ ಜಯರಾಜ್ ಬರೆದಿದ್ದಾರೆ. ಜೊತೆಗೆ ಅಪ್ಪನ ಚಿತ್ರ ಮತ್ತು ಗರೀಬಿ ಹಟಾವೋ ಪತ್ರಿಕೆಯ ಮುಖಪುಟವನ್ನು ಹಂಚಿಕೊಂಡಿದ್ದಾರೆ.

511

ಮುತ್ತಪ್ಪ ರೈ  ಸಾವನ್ನಪ್ಪಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿರುವ ಸಮಯದಲ್ಲಿ ಈ ಪೋಸ್ಟ್ ಅನ್ನು ಅಜಿತ್ ಪೋಸ್ಟ್ ಮಾಡಿದ್ದಾರೆ.ಆದ್ದರಿಂದ ಮುತ್ತಪ್ಪ ರೈ ಸಾವನ್ನು ಉದ್ದೇಶಿಸಿಯೇ ಅಜಿತ್ ಈ ಪೋಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. 

611

ಈ ಬಗ್ಗೆ ಮಾತನಾಡಿರುವ ಅಜಿತ್ ಜಯರಾಜ್ ಆ ಫೇಸ್ಬುಕ್ ಪೋಸ್ಟ್ ನ ವಿವಾದದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.  

711

ಮುತ್ತಪ್ಪ ರೈ ಸಾವಿಗೂ ನನ್ನ ಫೇಸ್‌ಬುಕ್ ಪೋಸ್ಟ್‌ಗೂ ಸಂಬಂಧವಿಲ್ಲ.ನಾನು ನನ್ನ ಅಪ್ಪನ ವಿಡಿಯೋಗಳನ್ನು ನೋಡುತ್ತಿದ್ದೆ.ಅಲ್ಲಿ ಕೆಲವರು ಅಪ್ಪನ ಬಗ್ಗೆ ನೆಗೆಟಿವ್ ಕಮೆಂಟ್ ಹಾಕಿದ್ದರು ಹಾಗಾಗಿ ಈ ಪೋಸ್ಟ್ ಹಾಕಿದೆ ಎಂದು ಹೇಳಿಕೆ ನೀಡಿದ್ದಾರೆ.

811

ಮುತ್ತಪ್ಪ ರೈ ಸಾವಿನ ಬಗ್ಗೆ ಅಜಿತ್ ಜಯರಾಜ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.'ಯಾರೇ ಆಗಲಿ ಅದು ಒಂದು ಜೀವ, ಆ ಜೀವ ಮರಳಿ ಬರುವುದಿಲ್ಲ ಎನ್ನುವುದು ಎಲ್ಲರಿಗೂ ಬೇಸರದ ಸಂಗತಿಯೇ' ಎಂದು ಅಜಿತ್ ಹೇಳಿದ್ದಾರೆ. ಅಷ್ಟೇ ಅಲ್ಲ,ತಾವು ಸಿನಿಮಾರಂಗದಲ್ಲಿ ಭವಿಷ್ಯ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ,ಇಲ್ಲಿಯೇ ನೆಲೆಯೂರಲು ಬಯಸುತ್ತೇನೆ ಎಂದು ತಮ್ಮ ಕನಸಿನ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. 

911

ಅಜಿತ್ ಜಯರಾಜ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ತ್ರಾಟಕ ಸಿನಿಮಾದಲ್ಲಿ ಎರಡು ಭಿನ್ನ ಶೇಡ್‌ನ ಪಾತ್ರದಲ್ಲಿ ಅವರು ಅಭಿಯಿಸಿದ್ದರು.ಅಲ್ಲದೆ ಹನಿ ಹನಿ ಇಬ್ಬನಿ ಎಂಬ ಚಿತ್ರದಲ್ಲೂ ನಟಿಸಿದ್ದರು.

1011

ರೈಮ್ಸ್ ಚಿತ್ರದ ಮೂಲಕ ಅಜಿತ್ ಅವರು ನಾಯಕ ನಟನಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

1111

ಇನ್ನೂ ಹೆಚ್ಚೆಚ್ಚು ಕನ್ನಡ ಸಿನಿಮಾಗಳು ಇವರ ಪಾಲಿಗೆ ಸಿಗಲಿ.ಯಶಸ್ಸಿನೊಂದಿಗೆ ಇವರ ಭವಿಷ್ಯ ಇನ್ನು ಎತ್ತರಕ್ಕೆ ಬೆಳೆಯಲಿ.ಕನ್ನಡ ಸಿನಿರಸಿಕರನ್ನು ಉತ್ತಮ ರೀತಿಯಲ್ಲಿ ರಂಜಿಸಲಿ.ಈ ಮೂಲಕ ಕನ್ನಡಕ್ಕೊಬ್ಬ ಭರವಸೆಯ ನಟ ದೊರಕಲಿ.

click me!

Recommended Stories