ಕನ್ನಡ ಚಿತ್ರರಂಗ ರಾಕಿಂಗ್ ಸ್ಟಾರ್ ಯಶ್ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ ಮುದ್ದಾದ ಮಗಳು ಐರಾ ಇಂದು 6ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ರಾಕಿಂಗ್ ಸ್ಟಾರ್ ಮನೆಯಲ್ಲಿ ಇವತ್ತು ಸೆಲೆಬ್ರೆಶನ್ ಜೋರು.
ಡಿಸೆಂಬರ್ 2ರಂದು ರಾಕಿಂಗ್ ಜೋಡಿ ತಮ್ಮ ಮನೆಯೆ ಏಂಜಲ್‌ನ ಬರ ಮಾಡಿಕೊಂಡರು. 6 ವರ್ಷಗಳ ಹಿಂದೆ ರಾಜ್ಯದ ಯಶ್ ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸಿದ್ದರು.
ಯೂಟ್ಯೂಬ್ ಚಾನೆಲ್ ಹೊಂದಿರುವ ರಾಧಿಕಾ ಪಂಡಿತ್ ಅಪರೂಪಕ್ಕೆ ವಿಡಿಯೋ ಮತ್ತು ಫೋಟೋ ಹಂಚಿಕೊಳ್ಳುತ್ತಾರೆ, ಮಗಳ 6ನೇ ವರ್ಷಕ್ಕೆ ವಿಡಿಯೋ ಮೂಲಕ ಫೋಟೋ ಹಂಚಿಕೊಂಡಿದ್ದಾರೆ.
ಐರಾ ಅಪರೂಪದ ಫೋಟೋ ಮತ್ತು ವಿಡಿಯೋಗಳನ್ನು ರಾಧಿಕಾ ಅಪ್ಲೋಡ್ ಮಾಡಿದ್ದಾರೆ. ಐರಾ ಹುಟ್ಟಿದ ದಿನವೇ ಫ್ಯಾನ್ ಪೇಜ್‌ಗಳು ಕ್ರಿಯೇಟ್ ಆಗಿದೆ, ಆಕೆ ಹುಟ್ಟಿದ ದಿನವೇ ಸ್ಟಾರ್ ಕಿಡ್ ಆಗಿದ್ದಾಳೆ.
ಐರಾ ಮೊದಲ ಹುಟ್ಟುಹಬ್ಬವನ್ನು ಫನ್ ವರ್ಲ್ಡ್‌ನಲ್ಲಿ ಅದ್ಧೂರಿಯಾಗಿ ಆಚರಿಸಲಾಗಿತ್ತು. ಇಡೀ ಫನ್ ವರ್ಲ್ಡ್‌ನ ಬುಕ್ ಮಾಡಿಕೊಂಡು ಸ್ನೇಹಿತರು ಮತ್ತು ಸಿನಿಮಾ ಗಣ್ಯರ ಜೊತೆ ಆಚರಿಸಿದ್ದರು.
ವರ್ಷ ವರ್ಷವೂ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಅವರು ಇಷ್ಟ ಪಡುವಂತೆ ಥೀಮ್ ಮಾಡಿಸಿ ರಾಧಿಕಾ ಪಂಡಿತ್ ಮಕ್ಕಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ.
ಐರಾ ನನ್ನ ಬೆಸ್ಟ್ ಫ್ರೆಂಡ್, ನನ್ನ ಸಿಂಡ್ರೆಲಾ, ನನ್ನ ಏಂಜಲ್ ಎಂದು ರಾಧಿಕಾ ಹೆಮ್ಮೆಯಿಂದ ಮಗಳ ಫೋಟೋ ಅಪ್ಲೋಡ್ ಮಾಡುತ್ತಾರೆ. ತುಂಬಾ ದಿನಗಳಿಂದ ಮಕ್ಕಳ ಫೋಟೋ ಹಾಕಿಲ್ಲ ಅಂದರೆ ಅಭಿಮಾನಿಗಳು ಮೆಸೇಜ್ ಮಾಡಿ ಪ್ರಶ್ನಿಸುತ್ತಾರಂತೆ.
ವರ್ಷದಲ್ಲಿ ಬರುವ ಅಷ್ಟೂ ಹಬ್ಬಗಳಿಗೆ ರಾಧಿಕಾ ಪಂಡಿತ್ ಪ್ರಾಮುಖ್ಯತೆ ನೀಡುತ್ತಾರೆ. ಪ್ರತಿ ಹಬ್ಬವನ್ನು ಮನೆಯಲ್ಲಿ ಮಕ್ಕಳ ಜೊತೆ ಆಚರಿಸುತ್ತಾರೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ತಮ್ಮ ಸಂಭ್ರಮದ ಫೋಟೋವನ್ನು ಹಂಚಿಕೊಳ್ಳುತ್ತಾರೆ.