ಸಿಂಬಾ ಜೊತೆ ಟ್ವಿನ್ನಿಂಗ್ ಮಾಡಿದ ಕಾಂತಾರ ಚೆಲುವೆ ಸಪ್ತಮಿ ಗೌಡ… ಫೋಟೋಸ್ ವೈರಲ್!

First Published | Nov 30, 2024, 6:25 PM IST

ಕಾಂತಾರ ಸಿನಿಮಾ ಮೂಲಕ ಮೋಡಿ ಮಾಡಿದ ನಟಿ ಸಪ್ತಮಿ ಗೌಡ ತಮ್ಮ ಮುದ್ದಿನ ನಾಯಿಮರಿ ಸಿಂಬಾ ಜೊತೆ ಟ್ವಿನ್ನಿಂಗ್ ಮಾಡಿ ಫೋಟೊ ಶೂಟ್ ಮಾಡಿದ್ದಾರೆ. 
 

ಕಾಂತಾರಾ, ಯುವ ಸಿನಿಮಾಗಳ ಮೂಲಕ ಮೋಡಿ ಮಾಡಿದ ಚೆಲುವೆ ಸಪ್ತಮಿ ಗೌಡ (Sapthami Gowda) ಹೊಸ ಫೋಟೊ ಶೂಟ್ ಮೂಲಕ ಇಂಟರ್ನೆಟ್ ನಲ್ಲಿ ಸದ್ದು ಮಾಡ್ತಿದ್ದಾರೆ. ಇವರ ಫೋಟೊಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. 
 

ಸಪ್ತಮಿ ಗೌಡ ತಮ್ಮ ಮುದ್ದಿನ ನಾಯಿಮರಿ ಸಿಂಬಾ ಜೊತೆ ಟ್ವಿನ್ನಿಂಗ್ (twinning) ಮಾಡಿಕೊಂಡು ಫೋಟೊ ಶೂಟ್ ಮಾಡಿದ್ದಾರೆ. ಸಪ್ತಮಿ ಹಾಗೂ ಸಿಂಬಾ ಇಬ್ಬರೂ ಕೂಡ ಕೆಂಪು ಮತ್ತು ಕಪ್ಪು ಬಣ್ಣದ ಚೆಕ್ಡ್ ಶರ್ಟ್ ಧರಿಸಿದ್ದಾರೆ. ಇಬಬ್ರು ಕೂಡ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದು, ಫೋಟೊ ಇಂಟರ್ನೆಟಲ್ಲಿ ವೈರಲ್ ಆಗುತ್ತಿದೆ. 
 

Tap to resize

ಈಗಾಗಲೇ ಚಳಿಗಾಲ ಶುರುವಾಗಿದ್ದು, ಹಾಗಾಗಿ ವಿಂಟರ್ ಫ್ಯಾಷನ್ ಆಗಿ ಲೇಯರಿಂಗ್ ಮಾಡಿಕೊಂಡಿರುವ ಸಪ್ತಮಿ, ತಮ್ಮ ಮುದ್ದಿನ ಸಿಂಬನಿಗೂ ಅದೇ ರೀತಿ ಡ್ರೆಸ್ ಮಾಡಿಸಿದ್ದಾರೆ. Simba, Twinning and winning ಎಂದು ಕ್ಯಾಪ್ಶನ್ ಕೂಡ ಹಾಕಿದ್ದಾರೆ. ಈಗಾಗಲೇ ಈ ಫೋಟೊಗೆ 45 ಸಾವಿರ ಲೈಕ್ಸ್ ಕೂಡ ಬಂದಿದೆ. 
 

ಸಪ್ತಮಿ ಗೌಡ ನಟಿಸಿದ್ದು ನಾಲ್ಕು ಸಿನಿಮಾಗಳಲ್ಲಿ ಆದರೂ ಸಹ,  ತಮ್ಮ ನಟನೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದರು. ಸದ್ಯ ತಮಿಳು ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಕೇಳಿ ಬರುತ್ತಿದೆ. ಆದರೆ ಯಾವ ಸಿನಿಮಾ ಎನ್ನುವ ಬಗ್ಗೆ ಮಾಹಿತಿ ಲಭ್ಯವಿಲ್ಲ. ಆದರೆ ಸೋಶಿಯಲ್ ಮೀಡಿಯಾ ಮೂಲಕ ನಟಿ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರ್ತಾರೆ. 
 

ಸಪ್ತಮಿ ಗೌಡ ಇಲ್ಲಿವರೆಗೆ ಪಾಪ್ ಕಾರ್ನ್ ಮಂಕಿ ಟೈಗರ್, ಕಾಂತಾರಾ, ದ ವ್ಯಾಕ್ಸಿನ್ ವಾರ್ ಹಾಗೂ ಯುವ ಸಿನಿಮಾಗಳಲ್ಲಿ ನಟಿಸಿದ್ದಾರೆ. ಯುವ ಜೊತೆಗಿನ ವಿವಾದದ ಬಳಿಕ ಸಿನಿಮಾಗಳಿಂದ ದೂರನೇ ಉಳಿದಿದ್ದಾರೆ. ಆದರೆ ಕಾಂತಾರಾ ಸಿನಿಮಾದಲ್ಲಿ ಇವರ ಫಾರೆಸ್ಟ್ ಆಫೀಸರ್ ಲೀಲಾ ಪಾತ್ರ ಮಾತ್ರ ಜನಮನದಲ್ಲಿ ಇಂದಿಗೂ ಹಾಗೇ ಉಳಿದಿದೆ. 
 

Latest Videos

click me!