ಪೃಥ್ವಿ ಅಂಬರ್ ನಟನೆಯ, ಸುಕೇಶ್ ಶೆಟ್ಟಿ ನಿರ್ದೇಶನದ ‘ದೂರದರ್ಶನ’ ಚಿತ್ರಕ್ಕೆ ಆಯಾನಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ಹಿಂದೆ ‘ಇಲ್ಲಿ ಇರಲಾರೆ ಅಲ್ಲಿಗೆ ಹೋಗಲಾರೆ’ ಎನ್ನುವ ಚಿತ್ರದಲ್ಲಿ ನಟಿಸಿದ್ದರು ಆಯಾನಾ.
26
ಚಿತ್ರದಲ್ಲಿ ಅವರದ್ದು ಮೈತ್ರಿ ಹೆಸರಿನ ಪಾತ್ರ. ಅಂದರೆ ರಿಕ್ಷಾ ಡ್ರೈವರ್ ಮಗಳಾಗಿ ಅಪ್ಪನ ಆಸೆಯಲ್ಲಿ ಬೆಳೆಯುವ ಹುಡುಗಿ ಪ್ರೀತಿಯಲ್ಲಿ ಬಿದ್ದಾಗ ಮುಂದೆ ಏನಾಗುತ್ತದೆ ಎನ್ನವುದು ಇವರ ಪಾತ್ರದಲ್ಲಿ ನೋಡಬಹುದಂತೆ.
36
ಉಗ್ರಂ ಮಂಜು, ಸುಂದರ್ ವೀಣಾ, ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
46
ಮಂಗಳೂರು ಹಾಗೂ ಪುತ್ತೂರು ಬಳಿಯ ಆರ್ಲಪದವಿನಲ್ಲಿ 38 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ರಾಜೇಶ್ ಭಟ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ, ಅರುಣ್ ಸುರೇಶ್ ಕ್ಯಾಮೆರಾ, ನಂದೀಶ್ ಟಿಜಿ ಅವರ ಸಂಭಾಷಣೆ ಚಿತ್ರಕ್ಕಿದೆ.
56
ರಂಗಭೂಮಿ ಕಲಾವಿದೆ ಅಯಾನ್ ಡ್ಯಾನ್ಸರ್ ಕೂಡ ಹೌದು. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 1729 ಸಾವಿರ ಫಾಲೋವರ್ಸ್‌ನ ಹೊಂದಿದ್ದಾರೆ.