ಹೊಸ ಫೋಟೋಶೂಟ್‌ಲ್ಲಿ ಅಮೂಲ್ಯಾ ಮಿಂಚಿಂಗ್; ಗೋಲ್ಡನ್ ಕ್ವೀನ್ ಬ್ಯಾಕ್ ಎಂದ ಫ್ಯಾನ್ಸ್

Published : Jul 03, 2022, 12:35 PM IST

ನಟಿ ಅಮೂಲ್ಯಾ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬಿಳಿ ಬಣ್ಣದ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುವ ಫೋಟೋವನ್ನು ಗೋಲ್ಡನ್ ಕ್ವೀನ್ ಹಂಚಿಕೊಂಡಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೆ ಸ್ಲಿಮ್ ಆಗಿರುವ ಅಮೂಲ್ಯಾ ಕ್ಯಾಮರಾಗೆ ಪೋಸ್ ನೀಡಿದ್ದಾರೆ. 

PREV
16
ಹೊಸ ಫೋಟೋಶೂಟ್‌ಲ್ಲಿ ಅಮೂಲ್ಯಾ ಮಿಂಚಿಂಗ್; ಗೋಲ್ಡನ್ ಕ್ವೀನ್ ಬ್ಯಾಕ್ ಎಂದ ಫ್ಯಾನ್ಸ್

ಸ್ಯಾಂಡಲ್‌ವುಡ್‌ನ ಗೋಲ್ಡನ್ ಕ್ವೀನ್ ಅಮೂಲ್ಯಾ ಮತ್ತೆ ಸಿನಿಮಾದಲ್ಲಿ ನಟಿಸುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಮದುವೆಯಾದ  ಬಳಿಕ ಅಮೂಲ್ಯಾ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದರು. 

26

ಸದ್ಯ ಅವಳಿ ಮಕ್ಕಳ ತಾಯಿಯಾಗಿರುವ ಅಮೂಲ್ಯ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಅಮೂಲ್ಯ ಮತ್ತು ಜಗದೀಶ್ ದಂಪತಿ ಮಾರ್ಚ್‌ 1, 2022ರಂದು ಅವಳಿ ಗಂಡು ಮಕ್ಕಳನ್ನು ಸ್ವಾಗತಿಸಿದರು. 

36

ಅವಳಿ ಮಕ್ಕಳಿಗೆ ಜನ್ಮ ನೀಡಿದ ನಂತರ ಅಮೂಲ್ಯ ಸೋಷಿಯಲ್ ಮೀಡಿಯಾದಿಂದ ದೂರ ಉಳಿದುಕೊಂಡಿದ್ದರು. ಇದೀಗ ಮತ್ತೆ ಆಕ್ಟೀವ್ ಆಗಿರುವ ಅಮೂಲ್ಯಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದ್ಯ ಅಮೂಲ್ಯಾ ಶೇರ್ ಮಾಡಿರುವ ಫೋಟೋ ಮತ್ತೆ ಸಿನಿಮಾಗೆ ಬರ್ತಾರಾ ಎನ್ನುವ ಅನುಮಾನ ಹುಟ್ಟುಹಾಕಿದೆ. 

46

ಅಮೂಲ್ಯಾ ಬಿಳಿ ಬಣ್ಣದ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೆ ಸ್ಲಿಮ್ ಆಗಿರುವ ಅಮೂಲ್ಯಾ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಅಮೂಲ್ಯಾ ಹೊಸ ಲುಕ್ ಅಭಿಮಾನಿಗಳ ಹೃದಯ ಗೆದ್ದಿವೆ. 

56

ಅಮೂಲ್ಯಾ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಗೋಲ್ಟನ್ ಕ್ವೀನ್ ಬ್ಯಾಕ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಸಿನಿಮಾಗೆ ವಾಪಾಸ್ ಬರುವ ಬಗ್ಗೆ ಅಮೂಲ್ಯಾ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. 

66

2017ರಲ್ಲಿ ಅಮೂಲ್ಯ ಮತ್ತು ಜಗದೀಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಇಬ್ಬರೂ ಸಖತ್ ಆಕ್ಟೀವ್ ಆಗಿದ್ದಾರೆ. ಅಮೂಲ್ಯಾ ಕೊನೆಯದಾಗಿ ಮಾಸ್ತಿ ಗುಡಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಗಣೇಶ್ ನಟನೆಯ ಮುಗುಳು ನಗೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  
 

Read more Photos on
click me!

Recommended Stories