ಅವಿವಾ ಮುಖದಲ್ಲಿ ಎದ್ದು ಕಾಣ್ತಿದೆ ಪ್ರೆಗ್ನೆನ್ಸಿ ಗ್ಲೋ.. ಅಂಬರೀಶ್ ಸೊಸೆಗೆ ದೃಷ್ಟಿಯಾಗದಿರಲೆಂದು ಹಾರೈಸಿದ ಅಭಿಮಾನಿಗಳು

First Published | Oct 17, 2024, 4:26 PM IST

ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿದ್ದಪ್ಪ ಹೊಸದೊಂದು ಫೋಟೊವನ್ನು ಶೇರ್ ಮಾಡಿದ್ದು, ಅವಿವಾ ಮುಖದಲ್ಲಿ ಹೊಳಪು ಎದ್ದು ಕಾಣ್ತಿದೆ. 
 

ಸ್ಯಾಂಡಲ್ ವುಡ್ ನಟ ಅಭಿಷೇಕ್ ಅಂಬರೀಷ್ (Abhishek Ambarish) ಮತ್ತು ಅವಿವಾ ಬಿದ್ದಪ್ಪ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾಯಿಯಾಗುವ ಸಂಭ್ರಮದಲ್ಲಿರುವ ಅವಿವಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ. 
 

ಹೌದು, ರೆಬಲ್ ಸ್ಟಾರ್ ಅಂಬರೀಶ್ (Ambarish) ಪುತ್ರ ಅಭಿಷೇಕ್ ತಂದೆಯಾಗುವ ಖುಷಿಯಲ್ಲಿದ್ದಾರೆ. ಈಗಾಗಲೇ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮವೂ ನಡೆದಿದೆ. ಇದೀಗ ಅವಿವಾ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಫೋಟೋ ಶೇರ್ ಮಾಡಿದ್ದು, ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ ಎದ್ದು ಕಾಣಿಸುತ್ತಿದೆ. 
 

Tap to resize

ಪಿಂಕ್ ಬಣ್ಣದ ಜರಿ ಸೀರೆಯುಟ್ಟಿರುವ ಅವಿವಾ, ಕುತ್ತಿಗೆಗೊಂದು ಸಿಂಪಲ್ ನೆಕ್ಲೆಸ್, ಕೈಗಳಲ್ಲಿ ಕುಂದನ್ ಬಳೆ ಧರಿಸಿ, ಸಿಂಪಲ್ ಆಗಿ ತಯಾರಾಗಿ, ಹೊಟ್ಟೆ ಮೇಲೆ ಕೈಯನ್ನಿಟ್ಟುಕೊಂಡು ಫೊಟೊ ತೆಗೆಸಿಕೊಂಡಿದ್ದಾರೆ. ಈ ಫೋಟೊದಲ್ಲಿ ಅವಿವಾ ತುಂಬಾನೆ ಮುದ್ದಾಗಿ ಕಾಣಿಸುತ್ತಿದಾರೆ. 
 

ಅಭಿಮಾನಿಗಳು ಅವಿವಾಗೆ ಆರೋಗ್ಯಯುತ ಹೆರಿಗೆಯಾಗಲಿ, ತಾಯಿ ಮತ್ತು ಮಗು ಆರೋಗ್ಯವಾಗಿರಲಿ ಎಂದು ಹಾರೈಸಿದ್ದಾರೆ. ಅಲ್ಲದೇ ಪ್ರೆಗ್ನೆನ್ಸಿ ಕಳೆಯಿಂದ ಮಿಂಚುತ್ತಿರುವ ಅವಿವಾಗೆ ಯಾರ ದೃಷ್ಟಿಯೂ ತಾಗದೇ ಇರಲಿ, ಅಂಬಿ ಸೊಸೆ ಆರೋಗ್ಯಯುತ ಹೆರಿಗೆಯಾಗಲಿ ಎಂದು ಹಾರೈಸಿದ್ದಾರೆ ಜನ. 
 

ಆಗಸ್ಟ್ ತಿಂಗಳಲ್ಲಿ ಅಂಬರೀಶ್ ಮತ್ತು ಸುಮಲತಾ ಮುದ್ದಿನ ಸೊಸೆ ಅವಿವಾ ಅಭಿಷೇಕ್ ಸೀಮಂತಕಾರ್ಯ ಅದ್ಧೂರಿಯಾಗಿ ನಡೆದಿತ್ತು. ಅವಿವಾ (Aviva) ಹಸಿರು ಸೀರೆಯುಟ್ಟು ಶಾಸ್ತ್ರಗಳಲ್ಲಿ ಭಾಗಿಯಾಗಿದ್ದರು. ಚಂದನವನದ ಹಲವು ತಾರೆಯರು ಸೀಮಂತಕ್ಕೆ ಆಗಮಿಸಿ, ತಂದೆ-ತಾಯಿಯಾಗಲಿರುವ ಜೋಡಿಯನ್ನು ಹರಸಿದ್ದರು. 
 

ಹಲವು ವರ್ಷಗಳಿಂದ ಲವ್ ಮಾಡುತ್ತಿದ್ದ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ 2023ರ ಜೂನ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವಿವಾ ಬಿದ್ದಪ್ಪ ಫ್ಯಾಷನ್ ಉದ್ಯಮಿಯಾಗಿದ್ದು, ದೇಶದ ಪ್ರಸಿದ್ಧ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಮಗಳಾಗಿದ್ದಾರೆ. 

ಅವಿವಾ ತಾಯಿಯಾಗುತ್ತಿರುವ ವಿಷ್ಯ ಕೇಳಿ ರೆಬಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಿದ್ದು, ಅಂಬರೀಶ್ ಮತ್ತೆ ಹುಟ್ಟಿ ಬರಲಿದ್ದಾರೆ ಎಂದು ಕಾಯುತ್ತಿದ್ದಾರೆ ಜನ. ಅಕ್ಟೋಬರ್ ತಿಂಗಳಲ್ಲಿ ಅವಿವಾ ಡೆಲಿವರಿ ಆಗಲಿದೆ ಎನ್ನುವ ಮಾಹಿತಿ ಕೂಡ ಇದೆ. 

Latest Videos

click me!