ಇಂಡಿಯನ್ ಸ್ಟಾರ್‌ಗಳ ಗೆಳೆಯ ರಿಷಬ್‌ ಶೆಟ್ಟಿ: ಉಡುಪಿಗೆ ಭೇಟಿ ಕೊಡುತ್ತಿರುವ ಪ್ಯಾನ್ ಇಂಡಿಯಾ ನಟರು!

Published : Oct 17, 2024, 12:41 PM IST

ಪ್ರತಿಭೆಯಿಂದ, ಸ್ನೇಹಮಯ ನಡವಳಿಕೆಯಿಂದ ರಾಷ್ಟ್ರದ ಮನಸ್ಸು ಗೆಲ್ಲಬಹುದು ಅನ್ನುವುದಕ್ಕೆ ರಿಷಬ್‌ ಶೆಟ್ಟಿ ಸಾಕ್ಷಿ. ಅವರು ಈಗ ಭಾರತದ ಎಲ್ಲಾ ಸ್ಟಾರ್‌ಗಳ ಗೆಳೆಯ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.  

PREV
15
ಇಂಡಿಯನ್ ಸ್ಟಾರ್‌ಗಳ ಗೆಳೆಯ ರಿಷಬ್‌ ಶೆಟ್ಟಿ: ಉಡುಪಿಗೆ ಭೇಟಿ ಕೊಡುತ್ತಿರುವ ಪ್ಯಾನ್ ಇಂಡಿಯಾ ನಟರು!

ಪ್ರತಿಭೆಯಿಂದ, ಸ್ನೇಹಮಯ ನಡವಳಿಕೆಯಿಂದ ರಾಷ್ಟ್ರದ ಮನಸ್ಸು ಗೆಲ್ಲಬಹುದು ಅನ್ನುವುದಕ್ಕೆ ರಿಷಬ್‌ ಶೆಟ್ಟಿ ಸಾಕ್ಷಿ. ಅವರು ಈಗ ಭಾರತದ ಎಲ್ಲಾ ಸ್ಟಾರ್‌ಗಳ ಗೆಳೆಯ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.
 
25

ಅದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ಉಡುಪಿಗೆ ಭೇಟಿ ನೀಡಿರುವ ಬಹಳಷ್ಟು ಸ್ಟಾರ್‌ಗಳನ್ನು ನೀವು ನೋಡಬಹುದು. ಜೂನಿಯರ್ ಎನ್‌ಟಿಆರ್‌ ತಾಯಿ, ಪತ್ನಿ ಸಮೇತ ಬಂದಾಗಲೂ ರಿಷಬ್ ಅ‍ವರು ಜೊತೆಗೇ ಇದ್ದರು. 

35

ಮೋಹನ್‌ ಲಾಲ್‌ ಕೊಲ್ಲೂರಿಗೆ ಬಂದಾಗಲೂ ರಿಷಬ್‌ ಇದ್ದರು. ಇದೀಗ ಮಲಯಾಳಂನ ಖ್ಯಾತ ನಟ ಜಯಸೂರ್ಯ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದು, ರಿಷಬ್‌ರನ್ನು ಭೇಟಿ ಮಾಡಿದ್ದಾರೆ. 

45

ಅಲ್ಲದೇ ರಾಣಾ ದಗ್ಗುಬಾಟಿ ಮತ್ತು ನೇಹಾ ಶೆಟ್ಟಿ ಕೂಡ ಕುಂದಾಪುರಕ್ಕೆ ಬಂದಿದ್ದು, ರಿಷಬ್‌ ಶೆಟ್ಟಿ ಅವರಿಬ್ಬರನ್ನು ಮೂಡುಗಲ್ಲು ಕೇಶವನಾಥೇಶ್ವರ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ. ಕನ್ನಡದ ಪ್ರಶಾಂತ್ ನೀಲ್ ಕೂಡ ಆಗಾಗ ಕುಂದಾಪುರಕ್ಕೆ ಹೋಗುತ್ತಿರುತ್ತಾರೆ. 

55

ರಿಷಬ್‌ ಶೆಟ್ಟಿಯವರು ಕುಂದಾಪುರದಲ್ಲಿ ಚಿತ್ರೀಕರಣ ನಡೆಸುತ್ತಿರುವುದರಿಂದ ದಕ್ಷಿಣ ಭಾರತದ ಚಿತ್ರರಂಗ ಉಡುಪಿ ಜಿಲ್ಲೆಗೆ ಭೇಟಿ ನೀಡುತ್ತಿರುವ ಅಪರೂಪದ ವಿದ್ಯಮಾನ ಜರುಗುತ್ತಿದೆ.

Read more Photos on
click me!

Recommended Stories