ಸೀರೆ ಉಟ್ಟು ಮಗು ಜೊತೆ ಪೋಸ್ ಕೊಟ್ಟ ನಟಿ ರಾಗಿಣಿ ದ್ವಿವೇದಿ ನೋಡಿ ಫ್ಯಾನ್ಸ್ ಶಾಕ್!

First Published | Oct 17, 2024, 2:13 PM IST

ಸ್ಯಾಂಡಲ್’ವುಡ್ ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಪುಟಾಣಿ ಪಾಪುವಿನ ಜೊತೆಗೆ ಫೋಟೊ ಶೇರ್ ಮಾಡಿದ್ದು, ಇದನ್ನ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. 
 

ಚಂದನವನದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi) ಹೆಚ್ಚಾಗಿ ಮಾಡರ್ನ್ ಡ್ರೆಸ್ ಗಳಲ್ಲಿ ಅದರಲ್ಲೂ ಹೆಚ್ಚಾಗಿ ಸ್ವಿಮ್ ಸೂಟ್, ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಇದೀಗ ನಟಿ ಸೀರೆಯುಟ್ಟಿರುವ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿದ್ದಾರೆ, ಅದರ ಜೊತೆ ಮತ್ತೊಂದು ಫೋಟೊ ಶೇರ್ ಮಾಡಿದ್ದು ಇದು ಜನರಿಗೆ ಅಚ್ಚರಿ ಹುಟ್ಟಿಸಿದೆ. 
 

ಹೌದು ರಾಗಿಣಿ ದ್ವಿವೇದಿ ಫ್ಲೋರಲ್ ಡಿಸೈನ್ ಇರುವಂತಹ ಕೆಂಪು ಬಣ್ಣದ ಸುಂದರವಾದ ಸೀರೆ ಧರಿಸಿದ್ದು, ಸಂಪೂರ್ಣವಾಗಿ ಟ್ರೆಡಿಶನಲ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೈ ತುಂಬಾ ಚಿನ್ನದ ಬಳೆ, ಕತ್ತಿನಲ್ಲಿ ಆಂಟಿಕ್ ನೆಕ್ಲೆಸ್ ಧರಿಸಿ, ಹೂನಗು ಚೆಲ್ಲಿ ಪೋಸ್ ನೀಡಿದ್ದಾರೆ. 
 

Tap to resize

ರಾಗಿಣಿ ಶೇರ್ ಮಾಡಿರೋ ಫೋಟೊಗಳಲ್ಲಿ ಸಿಂಗಲ್ ಫೋಟೊ ಕೂಡ ಇದ್ದು, ಮತ್ತೊಂದಿಷ್ಟು ಫೋಟೊಗಳು ತಮ್ಮ ಫ್ಯಾಮಿಲಿ ಜೊತೆ ತೆಗೆಸಿಕೊಂಡಂತಹ ಫೋಟೊಗಳಾಗಿವೆ. ರಾಗಿಣಿ ತಮ್ಮ ತಂದೆ-ತಾಯಿ ಜೊತೆಗೆ ತೆಗೆಸಿಕೊಂಡಿರುವ ಫೊಟೊಗಳಾಗಿವೆ, ಅಲ್ಲದೇ ಪುಟಾಣಿ ಮಗುವನ್ನ ಎದೆಗಪ್ಪಿಕೊಂಡು ಸಹ ಫೋಟೊ ಕ್ಲಿಕ್ ಮಾಡಿದ್ದಾರೆ. 
 

ಪಿಂಕ್ ಬಣ್ಣದ ಲಂಗ, ಹಸಿರು ಬಣ್ಣದ ಬ್ಲೌಸ್ ಧರಿಸಿರುವ ಪುಟಾಣಿ ಹೆಣ್ಣು ಮಗುವೊಂದು ರಾಗಿಣಿ ಹೆಗಲ ಮೇಲೆ ಬೆಚ್ಚಗೆ ಮಲಗಿದೆ. ಮಗುವನ್ನ ಗಟ್ಟಿಯಾಗಿ ತಬ್ಬಿಕೊಂಡು ನಟಿ ಮುದ್ದು ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. ಇದನ್ನ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ನಟಿಯ ಜೊತೆ ಇರೋ ಮಗು ಯಾರದ್ದು ಅಂತ ಗೊತ್ತಿಲ್ಲ, ಆದ್ರೆ ಈ ಫೋಟೊ ಮಾತ್ರ ಕ್ಯೂಟ್ ಆಗಿದ್ದು ವೈರಲ್ ಆಗ್ತಿದೆ. 
 

ನವರಾತ್ರಿ ಹಬ್ಬದ (Durga Puja) ಸಂದರ್ಭದಲ್ಲಿ ರಾಗಿಣಿ ದ್ವಿವೇದಿ ಮನೆಯಲ್ಲಿ ಕಂಜಕ್ ಪೂಜೆ ನಡೆದಿದೆ. ಇದರರ್ಥ ಕನ್ಯಾ ಪೂಜೆ. ಇದು ಉತ್ತರ ಭಾರತದ ಕಡೆ ಆಚರಿಸುವಂತಹ ವಿಶೇಷ ಪದ್ಧತಿಯಾಗಿದೆ. ಈ ಬಗ್ಗೆ ನಟಿ ಕೆಲದಿನಗಳ ದಿನ ವಿಡಿಯೋ ಹಾಕಿ ಮಾಹಿತಿ ನೀಡಿದ್ದರು. ಪ್ರತಿ ವರ್ಷ ದುರ್ಗಾ ಪೂಜೆಗಾಗಿ ನನ್ನ ಮನೆಯಲ್ಲಿ ಸುಂದರವಾದ ಆಚರಣೆಯನ್ನು ನಡೆಸುತ್ತಿದ್ದೆ. ನಾವು ನಮ್ಮ ಮನೆಯಲ್ಲಿ ಪುಟ್ಟ ಹೆಣ್ಣು ಮಕ್ಕಳನ್ನು ಕೂಡ ಸೆಲೆಬ್ರೇಟ್ ಮಾಡುತ್ತೇವೆ ಮತ್ತು ಗೌರವಿಸುತ್ತೇವೆ. 
 

ಆಚರಣೆ ಮತ್ತು ಕುಟುಂಬ ಮತ್ತು ನನ್ನ ಸಂಸ್ಕೃತಿಯನ್ನು ನನ್ನ ಎರಡನೇ ಮನೆಯಾದ ಬೆಂಗಳೂರಿಗೆ ನಾನು ಕೊಂಡೊಯ್ದಿದ್ದು, ಈ ಬಾರಿ ಇಲ್ಲಿಯೇ ಕುಟುಂಬದ ಜೊತೆ ಹಬ್ಬವನ್ನು ಆಚರಿಸಿರೋದಾಗಿ ತಿಳಿಸಿದ್ದಾರೆ ರಾಗಿಣಿ. ಹಬ್ಬದ ದಿನ ರಾಗಿಣಿ ಒಂಭತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗೆ ಹಾಗೂ ಒಂಭತ್ತು ಸುಮಂಗಲಿ ಮಹಿಳೆಯರಿಗೆ ಪೂಜೆ ಮಾಡಿ, ಅವರಿಗೆ ದಾನ ನೀಡಿದ್ದಾರೆ. ಈ ಹಬ್ಬದ ಸಂದರ್ಭದಲ್ಲಿ ಭಾಗಿಯಾದ ಮಗುವಿನ ಜೊತೆಗೆ ನಟಿ ಫೋಟೊ ತೆಗೆಸಿಕೊಂಡಿದ್ದಾರೆ. 
 

ರಾಗಿಣಿ ಸದ್ಯ ಕನ್ನಡ, ತಮಿಳು, ಮಲಯಾಲಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ನಟಿ ತಮಿಳಿನ ಕಿಕ್ ಮತ್ತು ಇಮೇಲ್ ಎನ್ನುವ ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ಕನ್ನಡದಲ್ಲಿ ವೃಷಭ, ಸಾರಿ ಕರ್ಮ ರಿಟರ್ನ್ಸ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜೊತೆಗೆ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ನಟನೆಯ ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ವಿಲನ್ ಪಾತ್ರದಲ್ಲೂ ರಾಗಿಣಿ ಮಿಂಚುತ್ತಿದ್ದಾರೆ. 
 

Latest Videos

click me!