Vijay-Rashmika Wedding: ರಶ್ಮಿಕಾ ಜೊತೆ ಮದುವೆ ನಂತರ ವಿಜಯ್ ದೇವರಕೊಂಡ ಹಣೆಬರಹ ಬದಲಾಗಲಿದೆಯೇ? ಜ್ಯೋತಿಷಿ ಹೇಳಿದ್ದೇನು?

Published : Feb 19, 2026, 02:24 PM IST

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಗೆ ಸಕಲ ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ. ಈಗಾಗಲೇ ಇವರ ಮದುವೆಯ ಆಮಂತ್ರಣ ಪತ್ರಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದೀಗ ಜ್ಯೋತಿಷಿ ಹೇಳಿರೋ ಮಾತು 

PREV
18

ದಕ್ಷಿಣ ಭಾರತ ಚಿತ್ರರಂಗದ ಮೋಸ್ಟ್ ಕ್ರೇಜಿ ಕಪಲ್ ಎನಿಸಿಕೊಂಡಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 

28

ವೈರಲ್ ಆಗಿರುವ ವೆಡ್ಡಿಂಗ್ ಕಾರ್ಡ್ ಪ್ರಕಾರ, ಫೆಬ್ರವರಿ 26 ರಂದು ಉದಯಪುರದಲ್ಲಿ ಇವರ ವಿವಾಹ ನಡೆಯಲಿದೆ. ನಂತರ ಮಾರ್ಚ್ 4 ರಂದು ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಅದ್ಧೂರಿ ಆರತಕ್ಷತೆ ಇರಲಿದೆ ಎಂದು ಹೇಳಲಾಗುತ್ತಿದೆ.

38

ಕಳೆದ ಕೆಲವು ಸಮಯದಿಂದ ವಿಜಯ್ ದೇವರಕೊಂಡ ನಟನೆಯ 'ಲೈಗರ್', 'ಖುಷಿ', 'ಫ್ಯಾಮಿಲಿ ಸ್ಟಾರ್' ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ, ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ವಿಜಯ್ ಭವಿಷ್ಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. 

48

'ವಿಜಯ್ ದೇವರಕೊಂಡ ಪ್ರೇಮ ವಿವಾಹದ ನಂತರ ತಮ್ಮ ವೃತ್ತಿಜೀವನದಲ್ಲಿ ಅದ್ಭುತ ಯಶಸ್ಸನ್ನು ಪಡೆಯುತ್ತಾರೆ' ಎಂದು ಅವರು ಟ್ವೀಟ್ ಮಾಡಿದ್ದಾರೆ. 

58

ರಶ್ಮಿಕಾ ಅದೃಷ್ಟ ಜೊತೆಗೂಡಿದರೆ ವಿಜಯ್ ಮತ್ತೆ ಹಳೆ ಫಾರ್ಮ್‌ಗೆ ಮರಳಿ ಬಾಕ್ಸಾಫೀಸ್ ಶೇಕ್ ಮಾಡುತ್ತಾರೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಿದ್ದಾರೆ.

68

Vijay Devarakonda will get hit films after his love breakup or love marriage....😂😜 https://t.co/Yi05NUJXGm

— Prashanth Kini (@AstroPrashanth9) January 9, 2026

78

ಸದ್ಯದಲ್ಲೇ ವಿಜಯ್ ದೇವರಕೊಂಡ 'ರಣಬಲಿ' ಎಂಬ ಸಿನಿಮಾದಲ್ಲಿ ನಟಿಸಲಿದ್ದು, ಇದರಲ್ಲಿ ರಶ್ಮಿಕಾ ನಾಯಕಿಯಾಗಿರುವುದು ವಿಶೇಷ. ಮದುವೆ ನಂತರ ಇಬ್ಬರೂ ಒಟ್ಟಿಗೆ ನಟಿಸುವ ಮೊದಲ ಸಿನಿಮಾ ಇದಾಗುವ ಸಾಧ್ಯತೆ ಇದೆ.

88

ಒಟ್ಟಿನಲ್ಲಿ, ಸ್ಟಾರ್ ಜೋಡಿಯಾಗಿರುವ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಇಡೀ ಭಾರತ ಸೇರಿದಂತೆ ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅಂದಹಾಗೆ, ಫೆಬ್ರವರಿ 26, 2026ರಂದು ಉದಯಪುರದಲ್ಲಿ ಮದುವೆ ಹಾಗೂ ಮಾರ್ಚ್ 04ರಂದು ಹೈದ್ರಾಬಾದ್‌ನಲ್ಲಿ ರಿಸೆಪ್ಶನ್ ಎನ್ನಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories