Asianet Suvarna News Exclusive: ಅಭಿಮಾನಿಯ ಬಯಕೆಯಂತೆ ಮಗುವಿಗೆ ಅಪ್ಪು ಎಂದು ಹೆಸರಿಟ್ಟ ರಾಘಣ್ಣ!

Published : Aug 30, 2022, 10:38 AM IST

ಏಷ್ಯಾನೆಟ್ ಸುವರ್ಣ ನ್ಯೂಸ್ ವೆಬ್ ವರದಿಗೆ ಸ್ಪಂದಿಸಿದ ರಾಜ್ ಕುಟುಂಬ. ಅಭಿಮಾನಿಯ ಬಯಕೆಯಂತೆ ಮಗುವಿಗೆ ಅಪ್ಪು ಹೆಸರು ನಾಮಕರಣ.

PREV
18
Asianet Suvarna News Exclusive: ಅಭಿಮಾನಿಯ ಬಯಕೆಯಂತೆ ಮಗುವಿಗೆ ಅಪ್ಪು ಎಂದು ಹೆಸರಿಟ್ಟ ರಾಘಣ್ಣ!

ನರಗುಂದ ಪಟ್ಟಣದ ಅಪ್ಪು ಅಂತಾನೇ ಫೇಮಸ್ ಆಗಿರೋ ರಾಜರತ್ನನ ಅಪ್ಪಟ ಅಭಿಮಾನಿ ಮಾರುತಿ ಬೆಣವಣಕಿ ಅವರ ಮಗುವಿಗೆ ಪುನೀತ್ ರಾಜಕುಮಾರ್ ಅಂತಾ ನಾಮಕರಣ ಮಾಡಲಾಗಿದೆ.

28

ಏಷ್ಯಾನೆಟ್ ಸುವರ್ಣ ನ್ಯೂಸ್‌ನ ವೆಬ್‌ನಲ್ಲಿ ಆಗಸ್ಟ್ 19ಕ್ಕೆ ಅಪ್ಪು ಅಭಿಮಾನಿಯ ವಿಶಿಷ್ಟ ಬಯಕೆಯ ಬಗ್ಗೆ ವರದಿ ಪ್ರಕಟವಾಗಿತ್ತು. ಸುದ್ದಿ ಗಮನಿಸಿದ್ದ ರಾಜ್ ಕುಮಾರ್ ಅಭಿಮಾನಿ ಸಂಘದ ಸದಸ್ಯರಾದ ರಾಮು ಬಳ್ಳಾರಿ, ರೇಖಾ ಬಂಗಾರಶೆಟ್ಟರ್, ಮಂಜು ಕೊಟ್ಟೂರು, ಚಂದ್ರಶೇಖರಗೌಡ ರಾಜ್ ಕುಟುಂಬದ ಗಮನಕ್ಕೆ ತಂದಿದಾರೆ. ಅಲ್ದೆ, ರಾಘಣ್ಣ ಅವರ ಗಮನಕ್ಕೆ ತಂದು ಆಗಸ್ಟ್ 29 ಕ್ಕೆ ಸದಾಶಿವ ನಗರದ ರಾಘಣ್ಣ ನಿವಾಸದಲ್ಲಿ ನಾಮಕರಣ ಕಾರ್ಯಕ್ರಮ ಫಿಕ್ಸ್ ಮಾಡಿಸಿದ್ದರು.

38

ನರಗುಂದದಿಂದ ಚಂದ್ರಶೇಖರ ಗೌಡ ಪಾಟೀಲ ವಾಹನ ವ್ಯವಸ್ಥೆ ಮಾಡಿದ್ದರು. ಸದಾಶಿವ ನಗರದ ರಾಘವೇಂದ್ರ ರಾಜಕುಮಾರ್ ನಿವಾಸದಲ್ಲೇ  ಕುಟುಂಬಸ್ಥರ ಸಮ್ಮುಖದಲ್ಲೆ ರಾಗಣ್ಣ ಮಗುವಿಗೆ ಅಪ್ಪು ಹೆಸರಿಟ್ಟಿದ್ದಾರೆ. 

48

ಅನಾರೋಗ್ಯದ ಮಧ್ಯಯೂ ಮಾರುತಿ ಕುಟುಂಬವನ್ನ ಭೇಟಿಯಾದ ರಾಗಣ್ಣ, ಹೆಸರಿಟ್ಟು ಮಗುವಿಗೆ ಶುಭಹಾರೈಸಿದ್ದಾರೆ. ರಾಘಣ್ಣ ಆಗಮನಕ್ಕೂ ಮುಂಚೆ ಯುವ ರಾಜಕುಮಾರ್ ಆಗಮಿಸಿ ಮಗುವನ್ನ ಎತ್ತಿ ಮುದ್ದಾಡಿದ್ದಾರಂತೆ. 

58

ಪುನೀತ್ ರಾಜಕುಮಾರ್ ಅವರ ಮೇಲಿರೋ ಅಭಿಮಾನ ಕಂಡು ಯುವ ರಾಜಕುಮಾರ್ ಭಾವುಕರಾಗಿದ್ದಾರೆ. ಯುವ ರಾಜಕುಮಾರ್ ಅವರಲ್ಲೇ ಅಪ್ಪುವಿನ ರೂಪ ಕಂಡು ಮಾರುತಿ ಸಂತಸ ಪಟ್ಟಿದ್ದಾರೆ. ನಂತರ ಯುವರತ್ನನ ಸ್ಮರಣೆಯೊಂದಿಗೆ ನಾಮಕರಣ ಕಾರ್ಯಕ್ರಮ ನಡೆದಿದೆ. 

68

ಅಭಿಮಾನಿಯ ಆಸೆ ತೀರಿಸಿದ ಸಂತೃಪ್ತಿ ರಾಜ್ ಅಭಿಮಾನಿ ಸಂಘದ ಚಂದ್ರಶೇಖರ್ ಗೌಡ ಅವರಿಗಿದೆ. ದೊಡ್ಮನೆ ಕುಟುಂಬಸ್ಥರನ್ನ ಭೇಯಾಗೋದಕ್ಕೆ ಹೊನ್ನೆಗೌಡ, ಖಾದರ್ ಪಾಷಾ, ಉಮೇಶ್ ಕುರಿ ಅವರೂ ಸ್ಪಂದಿಸಿದರಂತೆ.

78

 ಜೊತೆಗೆ ಸುದ್ದಿ ಮಾಡಿ ಅಭಿಮಾನಿಯ ಮನದಾಳದ ಅಸೆ ರಾಜಕುಟುಂಬಕ್ಕೆ ತಲುಪಿಸುವ ಕೆಲಸ ಮಾಡಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್ ವೆಬ್ ಟೀಮ್ ಗೆ ಮಾರುತಿ ಹಾಗೂ ಚಂದ್ರಶೇಖರ್ ಗೌಡ ಧನ್ಯವಾದ ತಿಳಿಸಿದ್ದಾರೆ.

88

ಅಪ್ಪು ಬದುಕಿದ್ದಾಗಲೇ ಮೊದಲ ಮಗುವಿಗೆ ಪುನೀತ್ ರಾಜಕುಮಾರ್ ಅಂತಾ ಹೆಸರಿಡ್ಬೇಕೆಂದು ಮಾರುತಿ ಅಂದುಕೊಂಡಿದ್ದರು. ಮೊದಲ ಮಗು ಹೆಣ್ಣು ಮಗು ಆಗಿದ್ದರಿಂದ ಪುನೀತ್ ಹೆಸರು ಇಡುವುದಕ್ಕೆ ಆಗಿರಲಿಲ್ಲ ಹೀಗಾಗಿ ಎರಡನೇ ಮಗುವಿಗೆ ಅಪ್ಪು ಅವರಿಂದಲೇ ಪುನಿತ್ ರಾಜಕುಮಾರ್ ಹೆಸರಿಡಿಸಬೇಕು ಅಂತಾ ಮೂರು ವರ್ಷದ ಹಿಂದೆಯೇ ಮಾರುತಿ ಅನ್ಕೊಂಡಿದ್ದರು. 

Read more Photos on
click me!

Recommended Stories