ಅಕ್ಕನ ಮದುವೆ ಸಂಭ್ರಮದಲ್ಲಿ ನಟಿ ಆಶಿಕಾ ರಂಗನಾಥ್…. ಬ್ರೈಡಲ್ ಪಾರ್ಟಿ ಹೇಗಿತ್ತು ನೋಡಿ…

First Published | Jan 22, 2024, 4:25 PM IST

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಆಶಿಕಾ ರಂಗನಾಥ್ ಸಹೋದರಿ ಅನುಷಾ ರಂಗನಾಥ್ ಹಸೆಮಣೆ ಏರುತ್ತಿದ್ದು, ಸ್ನೇಹಿತರೊಂದಿಗೆ ಭರ್ಜರಿ ಪಾರ್ಟಿ ಮಾಡಿದ್ದಾರೆ. ಇದರ ಫೋಟೋಸ್ ಇಲ್ಲಿವೆ. 

ಕನ್ನಡ ಚಿತ್ರರಂಗದಲ್ಲಿ ಚುಟು ಚುಟು ಬೆಡಗಿ ಎಂದೇ ಖ್ಯಾತಿ ಪಡೆದಿರುವ ನಟಿ ಆಶಿಕಾ ರಂಗನಾಥ್ (Ashika Ranganath) ಅಕ್ಕ ಆನುಷಾ ರಂಗನಾಥ್ ಮದುವೆಯಾಗಲು ರೆಡಿಯಾಗಿದ್ದು, ಅವರ ಬ್ರೈಡಲ್ ಪಾರ್ಟಿ ಸಖತ್ತಾಗಿ ನಡೆದಿದೆ. 
 

ಅನುಷಾ ರಂಗನಾಥ್ (Anusha Ranganath) ಸಹ ಕನ್ನಡ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದು, ತಂಗಿ ಆಶಿಕಾರಂತೆ ಯಶಸ್ಸು ಪಡೆಯುವಲ್ಲಿ ಸೋತಿದ್ದರು. ಇವರು ಗೋಕುಲದಲ್ಲಿ ಸೀತೆ ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದರು. 
 

Tap to resize

ಇನ್ನು ಕನ್ನಡ ಚಿತ್ರದಲ್ಲೂ ನಟಿಸಿರುವ ಅನುಷಾ 10 ಎನ್ನುವ ಚಿತ್ರದಲ್ಲಿ ನಟಿಸಿದ್ದರು. ನಟ ವಿನಯ್ ರಾಜ್ ಕುಮಾರ್ (Vinay Rajkumar) ಈ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. 
 

ಇದೀಗ ಅನುಷಾ ರಂಗನಾಥ್ ಹಸೆಮಣೆ ಏರುತ್ತಿದ್ದು, ಮದುವೆ ಯಾವಾಗ? ಹುಡುಗ ಯಾರು? ಮದುವೆ ಎಲ್ಲಿ ನಡೆಯಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಅರಿಶಿನ ಶಾಸ್ತ್ರ ಜನವರಿ 21 ರಂದು ನಡೆದಿದ್ದು, ಸಮಾರಂಭದ ಫೋಟೋಗಳನ್ನು ಆಶಿಕಾ ಹಂಚಿಕೊಂಡಿದ್ದರು. 
 

ಅನುಷಾ ರಂಗನಾಥ್ ಅವರ ಮದುವೆಗೂ ಮುನ್ನ ಬ್ರೈಡಲ್ ಪಾರ್ಟಿ(bridal party) ಜೋರಾಗಿಯೇ ನಡೆದಿದ್ದು, ನಟಿಯರಾದ ತೇಜಸ್ವಿನಿ ಶರ್ಮಾ, ಸಿರಿ ಪ್ರಹ್ಲಾದ್, ಆಶಿಕಾ ರಂಗನಾಥ್, ಸುಷ್ಮಿತಾ ಗೌಡ ಅವರು ರೆಸಾರ್ಟ್‌ವೊಂದರಲ್ಲಿ ಪಾರ್ಟಿ ಮಾಡಿದ್ದಾರೆ.
 

ಸೋಶಿಯಲ್ ಮೀಡಿಯಾದಲ್ಲಿ ಬ್ರೈಡಲ್ ಪಾರ್ಟಿ ಮಾಡಿದ ಫೋಟೋಗಳನ್ನು ಈ ನಟಿಯರು ಹಂಚಿಕೊಂಡಿದ್ದು, ಆ ಮೂಲಕ ಅನುಷಾ ಮದುವೆಯಾಗುತ್ತಿರುವ ಸುದ್ದಿ ಬಹಿರಂಗವಾಗಿದೆ. ಅದಲ್ಲದೇ ಕಳೆದೆರಡು ದಿನಗಳಿಂದ ಆಶಿಕಾ ಹಲವು ಫೋಟೋಗಳನ್ನು ಸಹ ಹಂಚಿಕೊಂಡಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆಯಾದ ದಿನದಂದು ಸಪ್ತಪದಿ ತುಳಿದಿದ್ದಾರೆ.. 
 

ನಿನ್ನೆ ಅರಿಶಿನ ಶಾಸ್ತ್ರ (Haldi ceremony) ನಡೆದಿದ್ದು, ಆಶಿಕಾ ಹಳದಿ ಬಣ್ಣದ ಡ್ರೆಸ್ ಧರಿಸಿದ್ದರೆ, ಅನುಷಾ ರಂಗನಾಥ್ ಬಿಳಿ ಸೇರೆಯಲ್ಲಿ ಕಂಗೊಳಿಸುತ್ತಿದ್ದರು. ಜೊತೆಗೆ ಎಲ್ಲಾ ಸ್ನೇಹಿತೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 
 

ಆಶಿಕಾ ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಮದುವೆಯ ಸಂಭ್ರಮದ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದು, ಅಪ್ಪ- ಅಮ್ಮನ ಜೊತೆಗೆ ಸಹೋದರಿ ವಧು ಅನುಷಾ ಜೊತೆ ತಾವು ನಿಂತಿರುವ ಫೋಟೋ ಅಪ್ ಲೋಡ್ ಮಾಡಿ ಮದುವೆ ಹುಡುಗಿ ಎಂದು ಬರೆದುಕೊಂಡಿದ್ದರು. 
 

ಇನ್ನು ರಾತ್ರಿ ಸಂಗೀತ್ ಕಾರ್ಯಕ್ರಮ ನಡೆದಿದ್ದು, ನಟಿ ಆಶಿಕಾ ಮತ್ತು ಸಹೋದರಿ ಅನುಷಾ ಇಬ್ಬರು ಜೊತೆಯಾಗಿ ಬರ್ ಸೋರೆ ಮೇಘಾ ಎಂಬ ಹಿಂದಿ ಹಾಡಿಗೆ ಹೆಜ್ಜೆ ಹಾಕಿದ್ದರು. ಅಲ್ಲದೇ ಜೊತೆಗೆ ಸ್ನೇಹಿತೆಯರೆಲ್ಲಾ ಸೇರಿ ತೆಲುಗಿನ ಫಿದಾ ಸಿನೆಮಾದ ಹಾಡಿಗೂ ಹೆಜ್ಜೆ ಹಾಕಿದ್ದರು. 
 

Latest Videos

click me!