ಸ್ಯಾಂಡಲ್ ವುಡ್ ನ ಮಿಲ್ಕಿ ಬ್ಯೂಟಿ, ಚುಟುಚುಟು ಬೆಡಗಿ ಆಶಿಕಾ ರಂಗನಾಥ್ (Ashika Ranganath) ಸದ್ಯ ಸಿನಿಮಾಗಳಿಂದ ಕೊಂಚ ಬಿಡುವು ಪಡೆದು ಫ್ರೆಂಡ್ಸ್ ಜೊತೆ ಎಂಜಾಯ್ ಮಾಡ್ತಿದ್ದಾರೆ.
ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಆಶಿಕಾ, ತೆಲುಗಿನಲ್ಲೂ ಕೂಡ ಸಿಕ್ಕಾಪಟ್ಟೆ ಫ್ಯಾನ್ಸ್ ಪಡೆದಿದ್ದಾರೆ. ಇವರ ಅಭಿನಯದ ನಾ ಸಾಮಿ ರಂಗ ಸಿನಿಮಾ ಸಖತ್ ಹಿಟ್ ಆಗಿತ್ತು.
ಇದಾದ ನಂತರ ಕನ್ನಡದಲ್ಲಿ ಅಭಿನಯಿಸಿದ O2 ಸಿನಿಮಾ ಕೂಡ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ವಿಭಿನ್ನ ಕಥಾ ಹಂದರವುಳ್ಳ ಸಿನಿಮಾದಲ್ಲಿ ಆಶಿಕಾ, ಡಾ. ಶ್ರದ್ಧಾ ಆಗಿ ಅಮೋಘ ಅಭಿನಯ ನೀಡಿದ್ದರು.
ಇತ್ತೀಚೆಗಷ್ಟೇ ಕನ್ನಡದಲ್ಲಿ ಗತವೈಭವ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಅಲ್ಲದೇ ತೆಲುಗಿನಲ್ಲಿ ವಿಶ್ವಂಭರ (Vishwambhara) ಸಿನಿಮಾದಲ್ಲಿ ನಟಿಸುತ್ತಿದ್ದು, ಸದ್ಯ ಶೂಟಿಂಗ್ ನಡೆಯುತ್ತಿದೆ. ಇದೆಲ್ಲದರ ನಡುವೆ ನಟಿ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ.
ಹೌದು ನಟನೆಯಿಂದ ಬ್ರೇಕ್ ತೆಗೆದುಕೊಂಡ ನಟಿ ಆಶಿಕಾ ತಮ್ಮ ಸ್ನೇಹಿತೆಯರಾದ ಸುಷ್ಮಿತಾ, ಜಾನ್ವಿ ಗೌಡ, ಪ್ರತಿಮಾ ಜೊತೆ ಮಂಗಳೂರಿಗೆ ಭೇಟಿ ನೀಡಿದ್ದು, ಇಲ್ಲಿನ ಹಲವು ತಾಣಗಳಿಗೆ ಭೇಟಿ ನೀಡಿ ಎಂಜಾಯ್ ಮಾಡಿದ್ದಾರೆ.
ಮಂಗಳೂರಿನ ಬೀಚ್, ಮೂಡಬಿದಿರೆಯ ಗುಂಡ್ಯಡ್ಕ ಫಾಲ್ಸ್, ಏರುಗುಂಡಿ ಫಾಲ್ಸ್ ಮೊದಲಾದ ಕಡೆ ಭೇಟಿ ನೀಡಿದ್ದು, ಮುದ್ದಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ (Social media) ಹಂಚಿಕೊಂಡಿದ್ದಾರೆ.
ಸಿನಿಮಾ ವಿಷ್ಯಕ್ಕೆ ಬಂದ್ರೆ ನಟಿ ಸದ್ಯದಲ್ಲೆ ಮಿಸ್ ಯು ಎನ್ನುವ ಸಿನಿಮಾದಲ್ಲಿ ಸಿದ್ಧಾರ್ಥ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ರಾಜಶೇಖರ ನಿರ್ದೇಶನದ ಸಿನಿಮಾ ಇದಾಗಿದ್ದು, ಯಾವಾಗ ಆರಂಭವಾಗಲಿದೆ ಅನ್ನೋದು ಇನ್ನೂ ಮಾಹಿತಿ ಸಿಕ್ಕಿಲ್ಲ.