200 ಕುಟುಂಬಗಳಿಗೆ ತಿಂಗಳ ದಿನಸಿ ನೀಡಿದ ನಟ ಅನೀಶ್

First Published | May 27, 2021, 2:10 PM IST
  • ತಮ್ಮ ಚಿತ್ರಗಳಿಗೆ ಕೆಲಸ ಮಾಡಿದವರ ಕುಟುಂಬಗಳ ಕಷ್ಟಕ್ಕೆ ನೆರವಾದ ನಟ
  • 200 ಕುಟುಂಬಗಳಿಗೆ ತಿಂಗಳ ದಿನಸಿ
ಕೊರೋನಾ ಸಂಕಷ್ಟದಲ್ಲಿ ನಟ ಅನೀಶ್ ತೇಜೇಶ್ವರ್ ಕೂಡ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ತಮ್ಮ ನಟನೆ, ನಿರ್ದೇಶನ ಹಾಗೂ ನಿರ್ಮಾಣ ಮಾಡಿದ ‘ರಾಮಾರ್ಜುನ’ ಚಿತ್ರಕ್ಕೆ ಕೆಲಸ ಮಾಡಿದ 200ಕ್ಕೂ ಹೆಚ್ಚು ಕುಟುಂಬಗಳಿಗೆ ಒಂದು ತಿಂಗಳಿಗೆ ಆಗುವಷ್ಟು ರೇಷನ್ ನೀಡಿದ್ದಾರೆ.
Tap to resize

ಆ ಮೂಲಕ ತಮ್ಮ ಜತೆ ಕೆಲಸ ಮಾಡಿದ ತಂಡಕ್ಕೆ ಕಷ್ಟ ಕಾಲದಲ್ಲಿ ನೆರವಾಗುವ ಮೂಲಕ ಮಾನವೀಯತೆ ತೋರಿದ್ದಾರೆ.
ತಮ್ಮ ಚಿತ್ರಗಳಿಗೆ ಕೆಲಸ ಮಾಡಿದವರ ಕುಟುಂಬಗಳ ಕಷ್ಟಕ್ಕೆ ಹೀಗೆ ನೆರವಾಗುವ ಮೂಲಕ ಹಸಿವಿನ ಬಾಧೆ ಎದುರಿಸುವುದು ತಪ್ಪುತ್ತದೆ ಎಂದು ಅನೀಶ್ ಟ್ವೀಟ್ ಮಾಡಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಬಹಳಷ್ಟು ನಟರು, ನಟಿಯರು ಕೊರೋನಾ ಕಾಲದಲ್ಲಿ ಕಷ್ಟದಲ್ಲಿರುವ ಜನರಿಗೆ ನೆರವಾಗುತ್ತಿದ್ದಾರೆ
ಲಾಕ್‌ಡೌನ್‌ನಿಂದಾಗಿ ಸಿನಿಮಾ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದ್ದು, ಈ ನಿಟ್ಟಿನಲ್ಲಿ ಸಿನಿ ಕಾರ್ಮಿಕರಿಗೆ ಸ್ಟಾರ್‌ಗಳು ನೆರವಾಗುತ್ತಿದ್ದಾರೆ

Latest Videos

click me!