ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟಿ ಅಮೂಲ್ಯ… Photo Viral

Published : May 12, 2025, 12:58 PM ISTUpdated : May 12, 2025, 02:57 PM IST

ಚಂದನವನದ ಗೋಲ್ಡನ್ ಬ್ಯೂಟಿ ಅಮೂಲ್ಯ ಎಂಟನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಪತಿ ಜೊತೆಗಿನ ಮುದ್ದಾದ ಫೋಟೊ ಶೇರ್ ಮಾಡಿದ್ದಾರೆ.   

PREV
16
ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟಿ ಅಮೂಲ್ಯ… Photo Viral

ಚಂದನವನಕ್ಕೆ ಬಾಲ ನಟಿಯಾಗಿ ಎಂಟ್ರಿಕೊಟ್ಟು, ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಸೂಪರ್ ಹಿಟ್ ಸಿನಿಮಾ ಚೆಲುವಿನ ಚಿತ್ತಾರದಲ್ಲಿ(Cheluvina Chittara) ನಟಿಸುವ ಮೂಲಕ ಗೋಲ್ಡನ್ ಕ್ವೀನ್ ಆಗಿ ಮಿಂಚಿ ಜನಮನ ಗೆದ್ದ ನಟಿ ಅಮೂಲ್ಯ. ಸದ್ಯ ನಟನೆಯಿಂದ ದೂರ ಇದ್ದು, ಗಂಡ, ಮಕ್ಕಳು ಸಂಸಾರದಲ್ಲಿ ಬ್ಯುಸಿಯಾಗಿದ್ದಾರೆ. 
 

26

ನಟಿ ಅಮೂಲ್ಯ (Actress Amulya) ಇದೀಗ ತಮ್ಮ ಎಂಟನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ , ತಮ್ಮ ಪತಿ ಜಗದೀಶ್ ಗೆ ಆನಿವರ್ಸರಿ ವಿಶ್ ಮಾಡಿ, ಗಂಡನ ಜೊತೆಗಿನ ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ. 
 

36

ತಮ್ಮ ಇನ್’ಸ್ಟಾಗ್ರಾಂನಲ್ಲಿ ಅಮೂಲ್ಯ… ವಾರ್ಷಿಕೋತ್ಸವದ ಶುಭಾಶಯಗಳು (wedding anniversary) ಜಯ್.. ಬಹಳಷ್ಟು ಪ್ರೀತಿ, ಜವಾಬ್ದಾರಿಯೊಂದಿಗೆ 9 ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ.. ಕುಟುಂಬವಾಗಿ ಶಾಂತಿಯುತ ಜೀವನದೊಂದಿಗೆ ಜೊತೆಯಾಗಿ ಬೆಳೆಯೋಣ, ನನ್ನ ಗುರಿಯಾಗಿದೆ ಎಂದು ಪತಿಗೆ ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ. 
 

46

ನಟಿ ಅಮೂಲ್ಯ ಮದುವೆ 2017 ರ ಮೇ 12 ರಂದು ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ ನಿರ್ಮಾಲಾನಂದ ಸ್ವಾಮಿಗಳ ಆಶೀರ್ವಾದದೊಂದಿಗೆ ಅದ್ಧೂರಿಯಾಗಿ ನಡೆದಿತ್ತು. ಇದೀಗ ವೈವಾಹಿಕ ಜೀವನದ 8 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಜೋಡಿಗಳು 9 ವರ್ಷಕ್ಕೆ ಕಾಲಿಡುತ್ತಿದ್ದಾರೆ. 
 

56

ಅಮೂಲ್ಯ ಮದುವೆಯಾದ ಬಳಿಕ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದರು, ಪತಿ ಜಗದೀಶ್ (Jagadish) ಬ್ಯುಸಿನೆಸ್ ಮ್ಯಾನ್ ಆಗಿದ್ದಾರೆ. ಈ ಮುದ್ದಾದ ಜೋಡಿಗೆ ಅಥರ್ವ್ ಮತ್ತು ಆಧವ್ ಎನ್ನುವ ಮುದ್ದಾದ ಇಬ್ಬರು ಗಂಡು ಮಕ್ಕಳಿದ್ದಾರೆ. ಸದ್ಯ ನಟಿ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. 
 

66

ಚೆಲುವಿನ ಚಿತ್ತಾರ, ನಾನು ನನ್ನ ಕನಸು, ಶ್ರಾವಣಿ ಸುಬ್ರಹ್ಮಣ್ಯ (Shravani Subramanya), ಗಜಕೇಸರಿ, ಕೃಷ್ಣ ರುಕ್ಕು, ಮಾಸ್ತಿ ಗುಡಿ ಮೊದಲಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಅಮೂಲ್ಯ, ಕೊನೆಯದಾಗಿ ನಟಿಸಿದ್ದು ಮಾಸ್ತಿ ಗುಡಿ, ನಟಿಯನ್ನು ಮತ್ತೆ ತೆರೆ ಮೇಲೆ ನೋಡಲು ಸಹಸ್ರಾರು ಅಭಿಮಾನಿಗಳು ಕಾಯುತ್ತಿದ್ದಾರೆ. 
 

Read more Photos on
click me!

Recommended Stories