ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ತಮ್ಮ ಅವಳಿ ಮಕ್ಕಳ ಹುಟ್ಟುಹಬ್ಬವನ್ನು ಈ ವರ್ಷ ಅದ್ಧೂರಿಯಾಗಿ ಆಚರಿಸಿದ್ದಾರೆ.
ಮಾರ್ಚ್ 1,2022ರಂದು ಅವಳಿ ಗಂಡು ಮಕ್ಕಳಿಗೆ ನಟಿ ಅಮೂಲ್ಯ ಜನ್ಮ ನೀಡಿದ್ದರು. ಹೀಗಾಗಿ ಈ ವರ್ಷ 3ನೇ ಹುಟ್ಟುಹಬ್ಬ ಅಚರಿಸಿದ್ದರು.
ಟ್ವಿನ್ಸ್ ಮಕ್ಕಳಿಗೆ ಸ್ಪೆಷಲ್ ಹೆಸರು ಇಟ್ಟಿದ್ದಾರೆ. ಒಬ್ಬ ಮಗನ ಹೆಸರು ಅಥರ್ವ್ ಮತ್ತೊಬ್ಬ ಮಗನ ಹೆಸರು ಆದವ್.
ಈ ವರ್ಷ ಅಮೂಲ್ಯ ತಮ್ಮ ಮಕ್ಕಳ ಹುಟ್ಟುಹಬ್ಬದಂದು ಫಾರೆಸ್ಟ್ ಥೀಮ್ ಇಟ್ಟಿದ್ದರು. ಹೀಗಾಗಿ ಮಕ್ಕಳಿಗೆ ಸಫಾರಿ ಗೈಡ್‌ಗಳ ರೀತಿ ಡ್ರೆಸ್ ಮಾಡಿದ್ದರು.
ಅಥರ್ವ್ ಮತ್ತು ಆದವ್ ಖಾಕಿ ಬಣ್ಣದ ಸಫಾರಿ ಡ್ರೆಸ್ ಧರಿಸಿದ್ದಾರೆ. ಹೀಗಾಗಿ ಸಫಾರಿ ಗೈಡ್ ರೀತಿಯಲ್ಲಿ ಪಾರ್ಟಿಗೆ ಜೀಮ್ ಮೇಲೆ ಕುಳಿತುಕೊಂಡು ಎಂಟ್ರಿ ಕೊಟ್ಟಿದ್ದಾರೆ.
ಫಾರೆಸ್ಟ್ ಥೀಮ್ ಆಗಿದ್ದ ಕಾರಣ ಮಕ್ಕಳು ಗೈಡ್ ಲುಕ್‌ನಲ್ಲಿದ್ದರು. ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ಹಸಿರು ಬಣ್ಣದ ಡ್ರೆಸ್ ಧರಿಸಿದ್ದಾರೆ.
ಪ್ರತಿ ವರ್ಷ ಮಕ್ಕಳ ಹುಟ್ಟುಹಬ್ಬಕ್ಕೆ ನಟಿ ಅಮೂಲ್ಯ ಫೋಟೋಶೂಟ್ ಮಾಡಿಸುತ್ತಾರೆ. ಈ ಹಿಂದೆ ಅವರು ಪುಟ್ಟ ಮಗುವಿದ್ದಾಗ ಪ್ರತಿ ತಿಂಗಳೂ ಫೋಟೋ ಕ್ಲಿಕ್ ಮಾಡುತ್ತಿದ್ದರು.
ಕಿಚ್ಚ ಸುದೀಪ್ ಫೇವರಿಟ್ ಟಾಪ್ 5 ಹಾಡುಗಳಿವು! ಎಂಥ ಮಧುರ!
ನಟಿ ರಕ್ಷಿತಾ ಪ್ರೇಮ್ ತಮ್ಮನ ಮದುವೆಯ ಅತಿ ಸುಂದರ ಫೋಟೋಗಳಿವು!
ಎಂಥವರನ್ನು ಗಮನಸೆಳೆಯುವ ಡ್ರೆಸ್; ಪವಿತ್ರಾ ಗೌಡ ಕೈಚಳಕಕ್ಕೆ ಹೊಡಿರಿ ಹಲಿಗಿ
ರಶ್ಮಿಕಾ ಮಂದಣ್ಣ 8 ಕೋಟಿ ರೂ. ಮೌಲ್ಯದ ಬೆಂಗಳೂರು ಮನೆ ಟೂರ್, ಆಸ್ತಿ ಎಷ್ಟಿದೆ?