ರಚಿತಾ ರಾಮ್ ಸಿನಿ ಜರ್ನಿಗೆ 12 ವರ್ಷ… ನೀವು ಮಿಸ್ ಮಾಡದೆ ನೋಡಬೇಕಾದ ರಚ್ಚು ಸಿನಿಮಾಗಳು

Published : May 12, 2025, 11:28 AM ISTUpdated : May 12, 2025, 11:32 AM IST

ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಕನ್ನಡ ಸಿನಿಮಾ ಇಂಡಷ್ಟ್ರಿಗೆ ಕಾಲಿಟ್ಟು 12 ವರ್ಷ ಪೂರೈಸಿದ್ದು, ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.   

PREV
113
ರಚಿತಾ ರಾಮ್ ಸಿನಿ ಜರ್ನಿಗೆ 12 ವರ್ಷ… ನೀವು ಮಿಸ್ ಮಾಡದೆ ನೋಡಬೇಕಾದ ರಚ್ಚು ಸಿನಿಮಾಗಳು

ಬುಲ್ ಬುಲ್ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಷ್ಟ್ರಿಗೆ ಎಂಟ್ರಿ ಕೊಟ್ಟು, ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡಿರುವ ರಚಿತಾ ರಾಮ್ (Rachitha Ram)ಸಿನಿಮಾ ಪಯಣಕ್ಕೆ 12 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಇವತ್ತು ನೀವು ಮಿಸ್ ಮಾಡದೇ ನೋಡಬಹುದಾದ ರಚಿತಾ ರಾಮ್ ಅಭಿನಯದ 12 ಸಿನಿಮಾಗಳ ಬಗ್ಗೆ ನೋಡೋಣ. 
 

213

ಬುಲ್ ಬುಲ್ : 2013 ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ದರ್ಶನ್ ತೂಗುದೀಪ್ ಗೆ (Darshan Thoogudeepa) ನಾಯಕಿಯಾಗಿ ರಚಿತಾ ರಾಮ್ ಎಂಟ್ರಿ ಕೊಟ್ಟರು. ಈ ಸಿನಿಮಾ ಸೂಪರ್ ಹಿಟ್ ಆಗಿದ್ದು, ಭರ್ಜರಿ ಮನರಂಜನೆ ನೀಡೀತ್ತು. 
 

313

ರನ್ನ : 2015ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಗೆ (Kiccha Sudeepa) ರಚಿತಾ ರಾಮ್ ನಾಯಕಿಯಾಗಿದ್ದರು. ಬಹುತಾರಾಗಣದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಫ್ಯಾಮಿಲಿ ಕಥೆ ಆಧರಿಸಿದ ಸಿನಿಮಾ ಇದಾಗಿತ್ತು. 

413

ಚಕ್ರವ್ಯೂಹ : ಪುನೀತ್ ರಾಜಕುಮಾರ್ (Puneeth Rajkumar) ನಾಯಕನಾಗಿ ನಟಿಸಿದ್ದ ಈ ಸಿನಿಮಾದಲ್ಲಿ ಅಪ್ಪುಗೆ ಡಿಂಪಲ್ ಕ್ವೀನ್ ನಾಯಕಿಯಾಗಿ ಮೋಡಿ ಮಾಡಿದ್ದರು. 
 

513

ಪುಷ್ಫಕ ವಿಮಾನ : ತಂದೆಗೆ ನ್ಯಾಯ ಕೊಡಿಸಲು ಹೋರಾಡುವ ಮಗಳ ಕಥೆಯಾಗಿರುವ ಪುಷ್ಪಕ ವಿಮಾನದಲ್ಲಿ ರಚಿತಾ ರಾಮ್ ಅದ್ಭುತವಾಗಿ ನಟಿಸಿದ್ದರು. 

613

ಭರ್ಜರಿ : ಆಕ್ಷನ್ ಪ್ರಿನ್ ಧ್ರುವ ಸರ್ಜಾ ಅಭಿನಯ ಭರ್ಜರಿ ಸಿನಿಮಾ ಆಕ್ಷನ್ ಡ್ರಾಮಾ ಆಗಿದ್ದು, ಈ ಸಿನಿಮಾದಲ್ಲಿ ರಚಿತಾ ರಾಮ್ ಹಾಗೂ ಹರಿಪ್ರಿಯಾ ಇಬ್ಬರೂ ಕೂಡ ನಾಯಕಿಯರಾಗಿ ನಟಿಸಿದ್ದರು. 

713

ಸೀತಾರಾಮ ಕಲ್ಯಾಣ : ಬಹು ತಾರಾಗಣವುಳ್ಳ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ನಾಯಕರಾಗಿದ್ದರು. 

813

ಮಾನ್ಸೂನ್ ರಾಗ : ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆ ರಚಿತಾ ರಾಮ್ ನಟಿಸಿದ್ದರು. ಇವರ ಅಭಿನಯವನ್ನು ಜನ ಮೆಚ್ಚಿಕೊಂಡಿದ್ದರು. 

913

ನಟಸಾರ್ವಭೌಮ : ನಟ ಸಾರ್ವಭೌವ ಸಿನಿಮಾ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿತ್ತು, ಹಾರರ್ ಥ್ರಿಲ್ಲರ್ ಟಚ್ ಇರುವ ಈ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಗೆ ಎರಡನೇ ನಾಯಕಿಯಾಗಿ ರಚಿತಾ ನಟಿಸಿದ್ದರು. 

1013

ಅಯೋಗ್ಯ : ನೀನಾಸಂ ಸತೀಶ್ ಗೆ ನಾಯಕಿಯಾಗಿ ನಟಿಸಿದ್ದ ಅಯೋಗ್ಯ ಸಿನಿಮಾ, ತನ್ನ ವಿಭಿನ್ನ ಕಥಾ ಹಂದರದ ಮೂಲಕ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದು ಬಾಕ್ಸ್ ಆಫೀಸ್ ಹಿಟ್ ನೀಡಿದ ಸಿನಿಮಾ. 

1113

ಐ ಲವ್ ಯೂ : ರಿಯಲ್ ಸ್ಟಾರ್ ಉಪೇಂದ್ರ (Upendra) ಅವರಿಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ರಚಿತಾ ರಾಮ್ ನಟಿಸಿದ್ದರು. ಹಸಿ ಬಿಸಿ ಕಥೆ ಹೊಂದಿರುವ ಈ ಸಿನಿಮಾದ ದೃಶ್ಯದಿಂದಾಗಿ ಕಾಂಟ್ರವರ್ಸಿ ಕೂಡ ಉಂಟಾಗಿತ್ತು. 

1213

ಲವ್ ಯೂ ರಚ್ಚು : ಈ ಸಿನಿಮಾದಲ್ಲಿ ಅಜಯ್ ರಾವ್ ನಾಯಕಾಗಿದ್ದರು. ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಸದ್ದು ಮಾಡಿತ್ತು. 

1313

ಸಂಜು ವೆಡ್ಸ್ ಗೀತಾ 2 : ಸಾಕಷ್ಟು ಕುತೂಹಲ ಮೂಡಿಸಿದ ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ ಸಂಜು ವೆಡ್ಸ್ ಗೀತಾ 2. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿಗೆ ಜೋಡಿಯಾಗಿದ್ರು ರಚಿತಾ ರಾಮ್. 

Read more Photos on
click me!

Recommended Stories