Krishi Thapanda: ಪದೇ ಪದೇ ಆರೋಪ, ಚುಚ್ಚು ಮಾತುಗಳು; 'ಬೇರೆ ದಾರಿ ಇಲ್ಲ; ದುಃಖದ ಜೊತೆ ಬದುಕ್ತೀನಿ'

Published : Jul 06, 2026, 10:40 AM IST

Actress Krishi Thapanda: ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಗೆಳೆಯ ವೈಶಾಖ್‌ ನೇ*ಣು ಹಾಕಿಕೊಂಡು ಸಾವನ್ನಪ್ಪಿದ್ದರು. ಇದಾಗಿ ಕೆಲವು ದಿನಗಳ ಬಳಿಕ ಕೃಷಿ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಮೂಲಕ ಮನಸ್ಸಿನಲ್ಲಿರೋದನ್ನು ಹಂಚಿಕೊಂಡಿದ್ದಾರೆ. 

PREV
16
ಕೃಷಿ ತಾಪಂಡ ಮನೆಯಲ್ಲೇ ಗೆಳೆಯನ ಸಾವು!

ಈ ಹಿಂದೆ ಓರ್ವ ಉದ್ಯಮಿ, ನಿರ್ಮಾಪಕರನ್ನು ಲವ್‌ ಮಾಡಿದ್ದರು. ಇವರಿಬ್ಬರದ್ದು ಬ್ರೇಕಪ್‌ ಆಯಿತು. ಆದರೆ ನಿರ್ಮಾಪಕರು, ಕೃಷಿ ವಿರುದ್ಧ ಒಂದಿಷ್ಟು ಆರೋಪ ಮಾಡಿದರು, ಅದೆಲ್ಲ ಮುಗಿಯಿತು ಎನ್ನುವಷ್ಟರಲ್ಲಿ ಅವರ ಮನೆಯಲ್ಲಿ ಗೆಳೆಯ ನೇ*ಣು ಹಾಕಿಕೊಂಡಿದ್ದನು.

26
ಕೃಷಿ ತಾಪಂಡ ವಿರುದ್ಧ ಸಾಲು ಸಾಲು ಆರೋಪ

ಕೃಷಿ ತಾಪಂಡ ಅವರು ಹಣಕ್ಕೆಂದು ಲವ್‌ ಮಾಡಿದ್ದರು, ಆಮೇಲೆ ಬ್ರೇಕಪ್‌ ಮಾಡಿಕೊಂಡರು ಎಂದೆಲ್ಲ ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ನೆಗೆಟಿವ್‌ ಮಾತುಗಳನ್ನು ಮಾಡಿದರು. ಆದರೆ ಕೃಷಿ ಮಾತ್ರ ನನಗೆ ಹಣ ಸಿಕ್ಕಿತ್ತು, ಆದರೆ ಪ್ರೀತಿ ಇರಲಿಲ್ಲ, ನನಗೆ ಬೇಕಾಗಿದ್ದು ಪ್ರೀತಿ ಎಂದು ಹೇಳಿ ದೂರ ಆದರು ಎಂದಿದ್ದಾರೆ.

36
ಗೆಳೆಯನ ಅಂತ್ಯಕ್ರಿಯೆ ನೋಡೋಕೆ ಆಗಲಿಲ್ಲ

ಇನ್ನೊಂದು ಕಡೆ ಗೆಳೆಯ ವೈಶಾಖ್‌ ಅವರು ಕೃಷಿ ತಾಪಂಡ ಇದ್ದ ಅಪಾರ್ಟ್‌ಮೆಂಟ್‌ಗೆ ಬಂದು ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಆಗ ಕೃಷಿ ಮನೆಯಲ್ಲಿ ಇರಲಿಲ್ಲ. ಇನ್ನೊಂದು ಕಡೆ ಅವರ ಅಂತ್ಯಕ್ರಿಯೆಗೆ ಹೋದರೂ ಕೂಡ ನೋಡಲು, ವೈಶಾಖ್‌ ಮನೆಯವರು ಅವಕಾಶ ಮಾಡಿ ಕೊಡಲಿಲ್ಲ.

46
ಕೃಷಿ ಮನಸ್ಸಿನಲ್ಲಿ ಏನಿದೆ ಅಂತ ಕೇಳಲಿಲ್ಲ!

ಕೃಷಿ ತಾಪಂಡ ಏನು ಮಾಡಿದ್ದರೋ ಏನೋ..ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರ ಒಂದು ಕಡೆ ಕೆಲವರು ಕೃಷಿಯ ಪರವಾಗಿ ಮಾತನಾಡಿದರೆ, ಇನ್ನೂ ಕೆಲವರು ಹಣಕ್ಕೆಂದು ಪ್ರೀತಿ ಮಾಡಿದರು, ಅಕ್ರಮ ಸಂಬಂಧ ಇಟ್ಟುಕೊಂಡರು ಎಂದೆಲ್ಲ ಬಾಯಿಗೆ ಬಂದಹಾಗೆ ಮಾತನಾಡಿದರು. ಆದರೆ ಕೃಷಿ ಮನಸ್ಸಿನಲ್ಲಿ ಏನಿದೆ? ಏನಾಯ್ತು ಎಂದು ಯಾರೂ ಕೇಳಲಿಲ್ಲ, ತಿಳಿದುಕೊಳ್ಳಲಿಲ್ಲ.

56
ಮನದ ಮಾತು ಹಂಚಿಕೊಂಡ ನಟಿ

ಕೃಷಿ ತಾಪಂಡ ಅವರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಮೂಲಕ ಮನಸ್ಸಿನ ಮಾತು ಹೇಳಿದ್ದಾರೆ.

“ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ…ಅದರ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ. ಆಯ್ಕೆ ಮಾಡಿಕೊಂಡದ್ದರಿಂದಲ್ಲ…ಬೇರೆ ದಾರಿಯೇ ಇಲ್ಲದ ಕಾರಣʼ ಎಂದು ನಟಿ ಕೃಷಿ ತಾಪಂಡ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

66
ರಾಧಾ ರಮಣ ಧಾರಾವಾಹಿ ನಟಿ ಕಾವ್ಯಾ ಗೌಡ

ರಾಧಾ ರಮಣ ಧಾರಾವಾಹಿ ನಟಿ ಕಾವ್ಯಾ ಗೌಡ ಅವರು “ಕೃಷಿ, ಸದ್ಯಕ್ಕೆ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ ಎಂದು ನನಗೆ ತಿಳಿದಿದೆ, ಆದರೆ ಈ ಕಠಿಣ ಸಮಯ ಯಾವಾಗಲೂ ಇರುವುದಿಲ್ಲ. ಇಂದು ಎಲ್ಲದಕ್ಕೂ ನಿಮ್ಮ ಬಳಿ ಪರಿಹಾರ ಇರಬೇಕಾಗಿಲ್ಲ. ಒಂದೊಂದೇ ಹೆಜ್ಜೆ ಇಡಿ, ಮತ್ತು ನಿಮ್ಮ ಬಗ್ಗೆ ನೀವೇ ದಯೆ ತೋರಿ. ಗುಣಮುಖರಾಗುವುದು ಯಾವಾಗಲೂ ಬೇಗನೆ ಸಾಧ್ಯವಾಗದೇ ಇರಬಹುದು, ಆದರೆ ಪ್ರತಿಯೊಂದು ಸಣ್ಣ ಹೆಜ್ಜೆಯೂ ಮುಖ್ಯವಾಗುತ್ತದೆ.

ದಯವಿಟ್ಟು ಭರವಸೆಯನ್ನು ಕಳೆದುಕೊಳ್ಳಬೇಡಿ. ಈಗ ಅವುಗಳನ್ನು ನೋಡುವುದು ಕಷ್ಟವಾಗಿದ್ದರೂ, ಮುಂದೆ ಸುಂದರವಾದ ದಿನಗಳಿವೆ. ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಬಲಶಾಲಿಯಾಗಿದ್ದೀರಿ, ಮತ್ತು ನೀವು ಇದನ್ನು ಒಬ್ಬರೇ ಎದುರಿಸಬೇಕಾಗಿಲ್ಲ. ನಿಮಗೆ ಯಾರಾದರೂ ಕೇಳಿಸಿಕೊಳ್ಳುವವರು ಬೇಕಾದಾಗಲೆಲ್ಲಾ ನಾನು ನಿಮಗಾಗಿ ಇಲ್ಲಿದ್ದೇನೆ. ಧೈರ್ಯದಿಂದಿರಿ, ನಿಮ್ಮ ಮೇಲೆ ನಂಬಿಕೆ ಇಡಿ, ಮತ್ತು ಸಮಯ ಕಳೆದಂತೆ ಎಲ್ಲವೂ ಉತ್ತಮಗೊಳ್ಳುತ್ತದೆ ಎಂಬುದನ್ನು ನೆನಪಿನಲ್ಲಿಡಿ” ಎಂದು ಕಾಮೆಂಟ್‌ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories